11 ರಾಜ್ಯಗಳಲ್ಲಿ ಮೇ 3ರ ನಂತರವೂ ಲಾಕ್‌ಡೌನ್ ಮುಂದುವರೆಸಲು ಚಿಂತನೆ

ನವ ದೆಹಲಿ, ಏಪ್ರಿಲ್ 28: ಲಾಕ್‌ಡೌನ್ ಮೇ 3ಕ್ಕೆ ಮುಗಿಯುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಿಗೆ ಇತ್ತು. ಆದರೆ, ಭಾರತದ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಮತ್ತೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ 11 ರಾಜ್ಯಗಳು ಲಾಕ್‌ಡೌನ್ ಮುಂದುವರೆಸಬೇಕೆಂದು ಮನವಿ ಮಾಡಿವೆ. ಹೀಗಾಗಿ, ಭಾರತದಲ್ಲಿ ಲಾಕ್‌ಡೌನ್ ಮುಂದುವರೆಯುವ ಲಕ್ಷಣಗಳು ಹೆಚ್ಚಾಗಿವೆ.

ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ದೆಹಲಿ, ತೆಲಂಗಾಣ, ಗುಜರಾತ್, ಕೇರಳ, ಮೇಘಾಲಯ ಮತ್ತು ರಾಜಸ್ಥಾನ ರಾಜ್ಯಗಳು ಲಾಕ್‌ಡೌನ್ ಮುಂದುವರೆಸಬೇಕು ಎಂದು ಕೇಳಿಕೊಂಡಿವೆ. ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಿ, ಲಾಕ್‌ಡೌನ್ ಇನ್ನಷ್ಟು ದಿನ ಇಟ್ಟುಕೊಳ್ಳಬೇಕು ಎಂದು ಸರ್ಕಾರಗಳು ತಿಳಿಸಿವೆ.

11 States Are In Favour Of Extending The Lockdown Beyond May 3

ನಿನ್ನೆಯ ಪ್ರಧಾನಿ ಜೊತೆಯ ಮಾತುಕತೆಯಲ್ಲಿ 9 ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ಸಿಕ್ಕಿತು. ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪಗೆ ಆ ಅವಕಾಶ ಸಿಗಲಿಲ್ಲ. ಚರ್ಚೆ ವೇಳೆ ಎಲ್ಲ ರಾಜ್ಯಗಳಿಗೆ ಪ್ರಧಾನಿ ಮೋದಿ ಲಾಕ್‌ಡೌನ್ ಬಗ್ಗೆ ಸೂಚನೆ ನೀಡಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ ಈಗಾಗಲೇ ಲಾಕ್‌ಡೌನ್ ಮೇ 7ರ ವರೆಗೆ ಮುಂದುಡಲಾಗಿದೆ. ಕೇರಳದ ಎರಡು ಪ್ರದೇಶಗಳಲ್ಲಿ ಮೇ 16ರ ವರೆಗೆ ಲಾಕ್‌ಡೌನ್ ಮಾಡಲು ಚಿಂತನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೇ 21ರವರೆಗೆ ಲಾಕ್‌ಡೌನ್ ಮುಂದುಡುವ ಪ್ಲಾನ್ ಇದೆ.

ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುಡುವ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಇಲ್ಲಿಯೂ ಲಾಕ್‌ಡೌನ್ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+