ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದ 10 ಮಂದಿ ಸಾವು,ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಧ್ಯಯನ

|
Google Oneindia Kannada News

ನವದೆಹಲಿ,ಜನವರಿ 30: ಕೊರೊನಾ ಲಸಿಕೆ ಪಡೆದವರಲ್ಲಿ ಹತ್ತು ಮಂದಿ ಮೃತಪಟ್ಟಿದ್ದು, ರಾಷ್ಟ್ರೀಯ ತಂಡವೊಂದು ದೇಹದಲ್ಲಿ ಕಂಡು ಬಂದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮರು ಪರೀಕ್ಷೆ ನಡೆಸಲು ಮುಂದಾಗಿದೆ.

ಭಾರತದಲ್ಲಿ ಕೊರೊನಾ-19 ಲಸಿಕೆ ಪಡೆದುಕೊಂಡ ನಂತರ ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಅದು ಲಸಿಕೆ ಪಡೆದುಕೊಂಡ 1ರಿಂದ 5 ದಿನಗಳೊಳಗೆ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ಒಡಿಶಾಗಳಲ್ಲಿ ವರದಿಯಾಗಿದೆ. ಮೃತಪಟ್ಟ 10 ಕೇಸುಗಳಲ್ಲಿ ಕೂಡ ಲಸಿಕೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಜಿಲ್ಲಾ ಎಇಎಫ್ಐ ಸಮಿತಿಗಳು ತಳ್ಳಿಹಾಕಿವೆ.

ಭಾರತ: 14 ದಿನಗಳಲ್ಲಿ 33 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ಭಾರತ: 14 ದಿನಗಳಲ್ಲಿ 33 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ

10 ಮಂದಿ ಆರೋಗ್ಯ ಕಾರ್ಯಕರ್ತರು

10 ಮಂದಿ ಆರೋಗ್ಯ ಕಾರ್ಯಕರ್ತರು

ಲಸಿಕೆ ಪಡೆದು ಮೃತಪಟ್ಟ 10 ಮಂದಿ ಆರೋಗ್ಯ ವಲಯ ಕಾರ್ಯಕರ್ತರು 25ರಿಂದ 56 ವರ್ಷದೊಳಗಿನವರಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ರಾಷ್ಟ್ರೀಯ ಎಇಎಫ್ಐ ಸಮಿತಿಯ ಸಲಹೆಗಾರ ಎನ್ ಕೆ ಅರೊರ ತಿಳಿಸಿದ್ದಾರೆ.

ನಿಖರ ಕಾರಣಗಳ ಬಗ್ಗೆ ಪರಿಶೀಲನೆ

ನಿಖರ ಕಾರಣಗಳ ಬಗ್ಗೆ ಪರಿಶೀಲನೆ

ತಕ್ಷಣಕ್ಕೆ ಇದು ಕೋವಿಡ್-19 ಲಸಿಕೆಯಿಂದ ಎಂದು ಕಂಡುಬಂದಿಲ್ಲ. ರಾಷ್ಟ್ರೀಯ ತಜ್ಞರ ತಂಡವೊಂದು ಸಾವಿಗೆ ನಿಖರ ಕಾರಣವನ್ನು ಮತ್ತೊಮ್ಮೆ ಪರಿಶೀಲಿಸಲಿದೆ. ವೈಜ್ಞಾನಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಅಲ್ಗಾರಿದಮ್ ನಿರ್ಧರಿಸಲಿದೆ ಎಂದಿದ್ದಾರೆ.

ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವಲ್ಲ

ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವಲ್ಲ

ಕೆಲ ಕೊರೊನಾ ಲಸಿಕೆಗಳು ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಈ ನಡುವಲ್ಲೇ ಭಾರತದಲ್ಲಿಯೂ ಸ್ತ್ರೀರೋಗ ತಜ್ಞರೂ ಕೂಡ ಕೊರೊನಾ ಲಸಿಕೆ ಪಡೆದವರು ಕನಿಷ್ಟವೆಂದರೂ ಗರ್ಭಧಾರಣೆ ಯೋಜನೆಯನ್ನು 2 ತಿಂಗಳು ಮುಂದೂಡುವಂತೆ ಒತ್ತಾಯಿಸಿದ್ದಾರೆ.

ಲಸಿಕೆ ಪಡೆದವರು 2 ತಿಂಗಳು ಗರ್ಭಧಾರಣೆ ಮುಂದೂಡುವುದು ಒಳಿತು

ಲಸಿಕೆ ಪಡೆದವರು 2 ತಿಂಗಳು ಗರ್ಭಧಾರಣೆ ಮುಂದೂಡುವುದು ಒಳಿತು

ಲಸಿಕೆ ಅಭಿವೃದ್ಧಿ ಪಡಿಸಿದ ಕಂಪನಿಗಳು ಗರ್ಭಧಾರಣೆ, ಕೃತಕ ಗರ್ಭಧಾರಣೆಗಳನ್ನು ಮುಂದೂಡುವಂತೆ ತಿಳಿಸದೇ ಇದ್ದರೂ, ಲಸಿಕೆ ಪಡೆದ ಮಹಿಳೆಯರಿಗೆ ಗರ್ಭಧಾರಣೆ ಯೋಜನೆಯನ್ನು ಕನಿಷ್ಟ ಎರಡು ತಿಂಗಳು ಮುಂದೂಡುವಂತೆ ತಿಳಿಸುತ್ತಿದ್ದೇವೆಂದು ವೈದ್ಯರು ಹೇಳಿದ್ದಾರೆ.ಈ ನಡುವೆ ಕೇಂದ್ರ ಸರ್ಕಾರ ಕೂಡ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುವುದಿಲ್ಲ ಎಂದು ಹೇಳಿದೆ.

Recommended Video

ಏರೋ ಇಂಡಿಯಾ 2021 ಯಲಹಂಕದಲ್ಲಿ ನಡೆಯಲಿದೆ | Oneindia Kannada

English summary
A national panel to monitor adverse events following immunisation is set to re-examine the causes of deaths reported from individuals who passed away soon after taking Covid-19 shots, amid concerns that adequate investigations in these fatalities may not have been carried out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X