Nagamangala Elections: ಕಾಂಗ್ರೆಸ್-ಜೆಡಿಎಸ್ ಜಿದ್ದಾಜಿದ್ದಿ, ನಾಗಮಂಗಲದ ನಾಯಕ ಯಾರು?
ಮಂಡ್ಯ, ಮಾರ್ಚ್ 26: ನಾಗಮಂಗಲ ಮಂಡ್ಯ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಕ್ಷೇತ್ರ. 1882ರವರೆಗೆ ಹಾಸನ ಜಿಲ್ಲೆಗೆ ಸೇರಿದ್ದ ನಾಗಮಂಗಲ, ನಂತರದಲ್ಲಿ ಮೈಸೂರು ಜಿಲ್ಲೆಗೆ ಒಳಪಡುತ್ತದೆ. ಮಂಡ್ಯ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರವೇ ನಾಗಮಂಗಲ ಅತೀ ದೊಡ್ಡ ತಾಲೂಕು ಕೇಂದ್ರವಾಗಿ ರೂಪುಗೊಳ್ಳುತ್ತದೆ.
ತಾಲೂಕಿನ ಐದು ಹೋಬಳಿಗಳನ್ನ ಒಳಗೊಂಡಿದ್ದ ನಾಗಮಂಗಲ 2008ರ ಕ್ಷೇತ್ರ ಮರುವಿಂಗಡಣೆ ವೇಳೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯನ್ನ ಸೇರಿಸಿಕೊಂಡು ವಿಸ್ತಾರಗೊಂಡಿದೆ. ಬಯಲು ನೆಲ ಮತ್ತು ಬೆಟ್ಟಗುಡ್ಡಗಳಿಂದ ಕೂಡಿರುವ ನಾಗಮಂಗಲದಲ್ಲಿ ಆದಿ ಚುಂಚನಗಿರಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ಈ ತಾಲ್ಲೂಕಿನ ಬೆಳ್ಳೂರಿನಲ್ಲಿ ಹೊಯ್ಸಳರ ಕಾಲದ ಗೌರೇಶ್ವರ, ಮೂಲೆ ಸಿಂಗೇಶ್ವರ ಮತ್ತು ಮಾಧವರಾಯ ದೇವಾಲಯಗಳಿವೆ. ಬಿಂಡಿಗನವಿಲೆಯಲ್ಲಿ ಚನ್ನಕೇಶವ ದೇವಾಲಯವಿದೆ. ಆದಿಚುಂಚನಗಿರಿ ಒಂದು ಪುಣ್ಯಕ್ಷೇತ್ರ. ಕಂಬದಹಳ್ಳಿಯಲ್ಲಿ ಗಂಗರ ಕಾಲದ ವಾಸ್ತು ಕಲೆಗಳಿವೆ. ನಾಗಮಂಗಲ ಮತ್ತು ಕೃಷ್ಣರಾಜಪೇಟೆ ತಾಲೂಕಿನ ಗಡಿ ಗ್ರಾಮವಾದ ಸಣ್ಣೇನಹಳ್ಳಿಯಲ್ಲಿ ಮಹದೇಶ್ವರ ಹಾಗು ಬಸವೇಶ್ವರ ದೇವಾಲಯಗಳಿದ್ದು ಇಲ್ಲಿ ಪ್ರತಿ ದೀಪಾವಳಿಯ ಸಮಯದಲ್ಲಿ ದನಗಳ ಜಾತ್ರೆಯ ಜೊತೆಗೆ ಮಹದೇಶ್ವರ ಸ್ವಾಮಿಯ ಹುಲಿವಾಹನೋತ್ಸವ ನೆರವೇರುತ್ತದೆ. ಇದು ಜೈನ ಕ್ಷೇತ್ರ. ಇಲ್ಲಿ ಸುಮಾರು 15 ಮೀ. ಎತ್ತರದ ಬ್ರಹ್ಮದೇವ ಕಂಬವಿದೆ ಹೀಗೆ ಅತ್ಯಂತ ವರ್ಣರಂಜಿತ ಕ್ಷೇತ್ರವಾಗಿರುವ ನಾಗಮಂಗಲ ಐತಿಹಾಸಿಕವಾಗಿಯೂ ಮಹತ್ವ ಪಡೆದುಕೊಂಡಿದೆ.
ಶಿಂಷಾ, ಲೋಕಪಾವನಿ, ಹೇಮಾವತಿ ನದಿ ಹಾಗೂ ಕೆಲವು ಕೆರೆಗಳು ಕ್ಷೇತ್ರದ ನೀರಿನ ಮೂಲಗಳಾಗಿದ್ದು, ಕೃಷಿ ಹೈನುಗಾರಿಕೆ ಇಲ್ಲಿನ ಕಸುಬುಗಳಾಗಿವೆ. ಮಂಡ್ಯ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರ ನಾಗಮಂಗಲದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.
ನಾಗಮಂಗಲ ಕ್ಷೇತ್ರದ ರಾಜಕೀಯ ಹಿನ್ನೆಲೆ
1952ರಿಂದ ಸಾಮಾನ್ಯ ಕ್ಷೇತ್ರವಾಗಿರುವ ನಾಗಮಂಗಲ ವಿಧಾನಸಭೆ ಕ್ಷೇತ್ರ ಎರಡು ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಕುರುಬ ಸಮುದಾಯದ ವ್ಯಕ್ತಿಗಳನ್ನ ಶಾಸಕರನ್ನಾಗಿ ಮಾಡಿದೆ. ಮೂರು ಉಪ ಚುನಾವಣೆಗಳು ಹಾಗೂ 15 ಸಾರ್ವತ್ರಿಕ ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ 9 ನಾಯಕರು ಅಧಿಕಾರ ನಡೆಸಿದ್ದಾರೆ. 1952ರಿಂದ 1999ರವರೆಗೆ ಎಂ. ಶಂಕರಲಿಂಗೇಗೌಡ ನಾಗಮಂಗಲ ಕ್ಷೇತ್ರದ ಮೊದಲ ಶಾಸಕರಾಗಿದ್ದಾರೆ. ಕೆ. ಸಿಂಗಾರಿಗೌಡ,ಟಿ. ಮರಿಯಪ್ಪ , ಟಿ.ಎನ್. ಮಾದಪ್ಪಗೌಡ , ಹೆಚ್.ಟಿ. ಕೃಷ್ಣಪ್ಪ, ಚಿಗರೀಗೌಡ, ಎಲ್.ಆರ್.ಎನ್. ಚಲುವರಾಯಸ್ವಾಮಿ ಶಿವರಾಮೇಗೌಡ ಕ್ಷೇತ್ರದ ಶಾಸಕರಾಗಿದ್ದಾರೆ.

2004ರಲ್ಲಿ ಎರಡನೇ ಬಾರಿಗೆ ಎನ್. ಚಲುವರಾಯಸ್ವಾಮಿ ಜೆಡಿಎಸ್ ನಿಂದ ಆಯ್ಕೆಯಾಗುತ್ತಾರೆ. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್‌ಗೌಡ ಕ್ಷೇತ್ರದ ಶಾಸಕರಾಗುತ್ತಾರೆ. 2013ರ ಚುನಾವಣೆಯಲ್ಲಿ ಎನ್. ಚಲುವರಾಯಸ್ವಾಮಿ ಹಾಗೂ 2018ರ ಚುನಾವಣೆಯಲ್ಲಿ ಸುರೇಶ್‌ಗೌಡ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗುತ್ತಾರೆ
ನಾಗಮಂಗಲ ಕ್ಷೇತ್ರದ ಪ್ರಸ್ತುತ ರಾಜಕರಣ
ನಾಗಮಂಗಲದಲ್ಲಿ ಬಹುತೇಕರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ. ಸದ್ಯ ಕ್ಷೇತ್ರದ ರಾಜಕೀಯ ಚಿತ್ರಣ ಮತ್ತೆ ಬದಲಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಎಐಸಿಸಿ ಸದಸ್ಯರಾಗಿರುವ ಎನ್.ಚಲುವರಾಯಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು,ಜೆಡಿಎಸ್‌ನ ಅಭ್ಯರ್ಥಿಯಾಗಿ ಹಾಲಿ ಶಾಸಕ ಸುರೇಶ್‌ಗೌಡ ಅವರ ಹೆಸರು ಘೋಷಣೆಯಾಗಿದೆ.

ಇನ್ನು ಜೆಡಿಎಸ್‌ನಲ್ಲಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷದಿಂದ ಉಚ್ಚಾಟನೆಗೊಂಡು ಸ್ವಾಭಿಮಾನಿ ಪರ್ವ ಆರಂಭಿಸಿದ್ದಾರೆ. ಇನ್ನು ಬಿಜೆಪಿಯಿಂದ ಇತ್ತೀಚಿಗೆ ಪಕ್ಷ ಸೇರ್ಪಡೆಗೊಂಡ ಶಾಸಕ ಸುರೇಶ್‌ಗೌಡರ ಮಾಜಿ ಆಪ್ತ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಅಖಾಡಕ್ಕೆ ಬರಲು ಸಿದ್ಧತೆ ನಡೆಸಿದ್ದು, ಸದ್ಯ ಈ ವಿಚಾರದಿಂದ ಪಕ್ಷ ಹಿಂದೆ ಸರಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ.
2018 ನಾಗಮಂಗಲ ವಿಧಾನಸಭಾ ಚುನಾವಣಾ ಫಲಿತಾಂಶ
2018 ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸುರೇಶ್ ಗೌಡ ಕಣಕ್ಕಳಿದಿದ್ದು, 112,396 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ.ಚಲುವರಾಯಸ್ವಾಮಿ 64,729 ಮತಗಳನ್ನು ಪಡೆದು 47,667 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
Nagamangala Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಸುರೇಶ್ ಗೌಡ(ಜೆಡಿಎಸ್) | 112,396 | ಚೆಲುವರಾಯಸ್ವಾಮಿ(ಕಾಂಗ್ರೆಸ್) | 64,729 |
| 2013 | ಎನ್. ಚಲುವರಾಯಸ್ವಾಮಿ (ಜೆಡಿಎಸ್) | 89,203 | ಸುರೇಶ್ ಗೌಡ (ಕಾಂಗ್ರೆಸ್) | 68,840 |
| 2008 | ಸುರೇಶ್ ಗೌಡ (ಕಾಂಗ್ರೆಸ್) | 69,259 | ಎನ್. ಚಲುವರಾಯಸ್ವಾಮಿ (ಜೆಡಿಎಸ್) | 63,766 |
ನಾಗಮಂಗಲ ಕ್ಷೇತ್ರದ ಮತದಾರರ ವಿವರ
ನಾಗಮಂಗಲ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 1 ಲಕ್ಷ 18 ಸಾವಿರದಷ್ಟು ಒಕ್ಕಲಿಗ ಮತದಾರರಿದ್ದಾರೆ. 36 ಸಾವಿರ ದಲಿತ ಮತದಾರರಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಗೆಲುವು ನಿರ್ಧರಿಸಲು ಸಾಧ್ಯವಿಲ್ಲ ಯಾಕೆಂದರೆ. ನಾಗಮಂಗಲ ಕ್ಷೇತ್ರದ ಮತದಾರರ ಮನದಾಳವನ್ನ ಅರಿಯಲು ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಕ್ಷೇತ್ರದ ಜನ ಅಚ್ಚರಿಯ ಫಲಿತಾಂಶಗಳನ್ನೇ ನೀಡಿದ್ದಾರೆ.
ಜಾತಿವಾರು ಮತದಾರರ ವಿವರ
ಒಕ್ಕಲಿಗರು- 1,18,000
ಪರಿಶಿಷ್ಟರು- 36,000
ಕುರುಬರು- 23,000
ಮುಸ್ಲಿಂ -10,000
ಲಿಂಗಾಯಿತರು- 3,000
ವಿಶ್ವಕರ್ಮ- 5,000
ಇತರರು- 18,000
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications