ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನಲ್ಲಿ ಕಾಡಾನೆ ತುಳಿತದಿಂದ ಆದಿವಾಸಿ ಯುವಕ ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 21; ಕಾಡಾನೆಯೊಂದು ನಡೆಸಿದ ದಾಳಿಯಿಂದಾಗಿ ಆದಿವಾಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ನಂಜನಗೂಡು ಜಿಲ್ಲೆಯಲ್ಲಿನ ವೆಂಕಟಗಿರಿ ಆದಿವಾಸಿ ಕಾಲೋನಿಯ ಕೆಂಪ ಮತ್ತು ಚಿಕ್ಕಮ್ಮ ಎಂಬುವರ ಪುತ್ರ ಗಣೇಶ (25) ಎಂದು ಗುರುತಿಸಲಾಗಿದೆ.

ನಂಜನಗೂಡು ಸಮೀಪದ ಡೋರನಕಟ್ಟೆ ಕಾಲೋನಿಯ ಸಮೀಪ ಈ ಘಟನೆ ನಡೆದಿದೆ. ಈತ ನಿನ್ನೆ ಬಂಕಹಳ್ಳಿ ಗ್ರಾಮದಿಂದ ಕೆಲಸವನ್ನು ಮುಗಿಸಿಕೊಂಡು ತನ್ನ ಮನೆಗೆ ಹಿಂದಿರುಗುತ್ತಿದ್ದ. ಈ ಸಂದರ್ಭದಲ್ಲಿ ವೆಂಕಟಗಿರಿ ಕಾಲೋನಿ ಮತ್ತು ಡೋರನಕಟ್ಟೆ ಕಾಲೋನಿಯ ಮಧ್ಯೆ ಕಾಡಾನೆಯ ತುಳಿತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಏಕಾಏಕಿ ಕಾಡಾನೆಯು ಎದುರಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ದಾಳಿಗೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Mysuru: Young Boy Dies By An Elephant Attack At Nanjanagud

 ದಾಳಿ ಮಾಡಿದ ಸೀಳುನಾಯಿಗಳನ್ನು ಅಟ್ಟಾಡಿಸಿದ ಹೆಣ್ಣಾನೆ ದಾಳಿ ಮಾಡಿದ ಸೀಳುನಾಯಿಗಳನ್ನು ಅಟ್ಟಾಡಿಸಿದ ಹೆಣ್ಣಾನೆ

ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ರವಿಕುಮಾರ್, ಆರ್.ಎಫ್.ಒ ಮಂಜುನಾಥ್ ಅವರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿದ ನಂತರ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಅರಣ್ಯ ಅಧಿಕಾರಿಗಳು ಮೃತನ ಕುಟುಂಬದವರಿಗೆ ಭರವಸೆ ನೀಡಿದ್ದಾರೆ.

English summary
A Young boy has been killed in an elephant attack at venkatagiri adivasi colony near nanjanagud of mysuru district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X