• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾರೆ ಮೈಸೂರಿನ 1.5 ಲಕ್ಷ ಯೋಗಪಟುಗಳು

|

ಮೈಸೂರು, ಮೇ 28 : ಇದೇ ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಈ ಬಾರಿ 1.5 ಲಕ್ಷದಷ್ಟು ಯೋಗಪಟುಗಳು ಯೋಗವನ್ನು ಪ್ರದರ್ಶಿಸಿ ಮತ್ತೊಮ್ಮೆ ವಿಶ್ವ ದಾಖಲೆ ಬರೆಯಲು ತಯಾರಾಗುತ್ತಿದ್ದಾರೆ. ಇದಕ್ಕಾಗಿ ಮೈಸೂರಿನ ವಿವಿಧೆಡೆ ಪ್ರತಿ ಭಾನುವಾರದಂದು ಯೋಗಪಟುಗಳು ಪೂರ್ವಾಭ್ಯಾಸವನ್ನೂ ನಡೆಸುತ್ತಿದ್ದಾರೆ.

ನಗರದ ಸೌಗಂಧಿಕಾ ಉದ್ಯಾನವನ, ಕುವೆಂಪುನಗರದ ವಿಶ್ವಮಾನವ ಉದ್ಯಾನವನ ಸೇರಿದಂತೆ ಹಲವೆಡೆ ಬೆಳಗ್ಗೆ 6.30 ರಿಂದ 7.15ರವರೆಗೆ ಪೂರ್ವಾಭ್ಯಾಸದಲ್ಲಿ ಸಾವಿರಾರು ಯೋಗಪಟುಗಳು ಭಾಗಿಯಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಗಿನ್ನಿಸ್ ದಾಖಲೆ ಸೇರಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ದಾಖಲೆಗೆ ಪೂರಕವಾಗಿ 45 ನಿಮಿಷಗಳ ಅಭ್ಯಾಸದಲ್ಲಿ ಯೋಗಪಟುಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ, ಸಂಕಲ್ಪ, ಧ್ಯಾನ, ಶಾಂತಿ ಮಂತ್ರವನ್ನು ತಿಳಿಸಿಕೊಡಲಾಗುತ್ತಿದೆ.

ಯೋಗ ಪ್ರದರ್ಶನ:ಮತ್ತೊಂದು ವಿಶ್ವ ದಾಖಲೆಗೆ ಸಿದ್ಧವಾಗುತ್ತಿದೆ ಮೈಸೂರು

ಮೈಸೂರು ಯೋಗ ಫೆಡರೇಶನ್ ಅಡಿಯಲ್ಲಿ ವಿವಿಧ ಯೋಗ ತಂಡಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಈ ಬಾರಿ ಯೋಗದಲ್ಲಿ ವಿಶ್ವದಾಖಲೆ ಬರೆಯಲು ಶ್ರಮ ಹಾಕುತ್ತಿದ್ದಾರೆ. ಜೆಎಸ್ಎಸ್ ಸಂಸ್ಥೆಯ ಶ್ರೀಹರಿ ನೇತೃತ್ವದಲ್ಲಿ ವಿವಿಧ ಯೋಗ ಸಂಘಟನೆಗಳ ಪ್ರಮುಖರು ಹಾಗೂ ಯೋಗ ಸಂಸ್ಥೆಗಳು ವಿಶ್ವದಾಖಲೆಗೆ ಒಗ್ಗಟ್ಟಿನಿಂದ ಕೈಜೋಡಿಸಿವೆ. ಮೈಸೂರು ಯೋಗ ಒಕ್ಕೂಟದ ಆಶ್ರಯದಲ್ಲಿ ಕಳೆದ 2017ರಲ್ಲಿ ಸಾಮೂಹಿಕ ಯೋಗ ಪ್ರದರ್ಶಿಸಿ ವಿಶ್ವದಾಖಲೆಗೆ ಸೇರಿದ್ದರು. ಆದರೆ ಕಳೆದ ವರ್ಷ ಮತ್ತೊಮ್ಮೆ ದಾಖಲೆ ಮಾಡುವ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ 2017ರಲ್ಲಿ ಮಾಡಿರುವ ದಾಖಲೆ ಮತ್ತು ಕಳೆದ ವರ್ಷ ರಾಜಸ್ಥಾನದಲ್ಲಿ ಬಾಬಾ ರಾಮದೇವ್ ಪತಂಜಲಿ ಯೋಗ ಸಂಸ್ಥೆ ನಡೆಸಿದ್ದ ದಾಖಲೆಯನ್ನು ಈ ಬಾರಿ ಮುರಿಯುವ ಉತ್ಸಾಹದಲ್ಲಿದ್ದಾರೆ ಮೈಸೂರಿನ ಯೋಗಪಟುಗಳು. ಇನ್ನು ಈ ನಿಟ್ಟಿನಲ್ಲಿ 1.5 ಲಕ್ಷ ಯೋಗಪಟುಗಳನ್ನು ಸೇರಿಸಲು ಈಗಾಗಲೇ ಸಿದ್ಧತೆ ನಡೆದಿದೆ.

English summary
on behalf of International Yoga Day (June 21), Yoga Federation of Mysuru (YFM), in association with several Yoga Associations is organising yoga rehearsals at several places in the city. it is planning to gather one lakh fifty thousand yoga practitioners to gain guinness world record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X