• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈ ಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಯದುವೀರ್ ಒಡೆಯರ್ ಬೆಂಬಲ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 16: ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಕ್ಕರೆ ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ ಎಂದು ಫೇಸ್‌ಬುಕ್ ನಲ್ಲಿ ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ ನೀಡಿ ಪೋಸ್ಟ್ ಮಾಡಿದ್ದಾರೆ.

ಮೈ ಶುಗರ್ ಕಾರ್ಖಾನೆಯ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ, ಆದರೆ ಈ ಪ್ರತಿರೋಧ ಕಳವಳಕ್ಕೆ ಕಾರಣವಾಗಿದೆ. ರೈತರು ಬೆಳೆದ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಅಗತ್ಯವಿದೆ ಎಂದಿದ್ದಾರೆ.

"ಒಂದು ಶುಗರ್ ಫ್ಯಾಕ್ಟರಿ ನಡೆಸೋಕೆ ಆಗದಷ್ಟು ಸರ್ಕಾರ ದಿವಾಳಿಯಾಗಿದೆಯಾ''

ಸಕ್ಕರೆ ಕಾರ್ಖಾನೆ ನಡೆಸಲು ಸರ್ಕಾರದ ವೈಫಲ್ಯ ಹಾಗೂ ಸಂಪೂರ್ಣ ಖಾಸಗೀಕರಣ ವಿರುದ್ಧ ಸಾರ್ವಜನಿಕರ ಭಾವನೆ ಒಂದು ಆಯ್ಕೆಯಾಗಿದೆ. ಆದರೆ ಕಾರ್ಯಾಚರಣೆ ಹಾಗೂ ನಿರ್ವಹಣೆ ಅಡಿಯಲ್ಲಿ ಕಾರ್ಖಾನೆ ನಡೆಸಬೇಕಿದ್ದು, ಖಾಸಗೀಕರಣ ವಿರುದ್ಧ ಸಾರ್ವಜನಿಕರ ಭಾವನೆಯನ್ನು ತೃಪ್ತಿಪಡಿಸಬೇಕಿದೆ. ಆ ಮೂಲಕ ಕಾರ್ಖಾನೆ ಸಮೃದ್ಧಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು.

ಖಾಸಗೀಕರಣವಾದರೆ ಮಂಡ್ಯ ಜಿಲ್ಲೆ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸಬೇಕಾಗಿಲ್ಲ. ಖಾಸಗೀಕರಣಕ್ಕೆ ಫೇಸ್‌ಬುಕ್‌ ಮೂಲಕ ತಮ್ಮ ಬೆಂಬಲ ನೀಡಿ ಯದುವೀರ್ ಒಡೆಯರ್ ಪೋಸ್ಟ್‌ ಹಾಕಿದ್ದಾರೆ. ಮೈಶುಗರ್ ಕಾರ್ಖಾನೆಯನ್ನು ಮೈಸೂರಿನ ಮಹಾರಾಜರು ಸ್ಥಾಪಿಸಿದ ಸಕ್ಕರೆ ಕಾರ್ಖಾನೆಯಾಗಿದೆ.

English summary
Yaduveer Wadiyar has supported the privatization of the Mysugar factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X