ಮೈಸೂರಿನಲ್ಲಿ ವೈಭವದ ರಥಸಪ್ತಮಿ ಆಚರಣೆ:ಕುಟುಂಬ ಸಮೇತ ಯದುವೀರ್ ಪೂಜೆ
Recommended Video

ಮೈಸೂರು, ಫೆಬ್ರವರಿ 12: ವೈಭವದ ರಥಸಪ್ತಮಿ ಪ್ರಯುಕ್ತ ಅರಮನೆ ಆವರಣದಲ್ಲಿ ಇಂದು ಮಂಗಳವಾರ ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿಶ್ರೀ ಲಕ್ಷ್ಮಿರಮಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಪ್ರಸನ್ನಕೃಷ್ಣ, ಶ್ರೀವೇದವರಹಸ್ವಾಮಿ, ಶ್ರೀಖಿಲ್ಲೆ ವೆಂಕಟರಮಣಸ್ವಾಮಿ ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ರಾಜ ಮಹಾರಾಜರುಗಳು ರಥಸಪ್ತಮಿಯ ಶುಭದಿನದಂದು ವಿಶೇಷ ಪೂಜೆ ನಂತರ ಅರಮನೆ ಆವರಣದಲ್ಲಿರುವ 8 ದೇವಾಲಯಗಳ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಸಹ ಮುಂದುವರೆಯುತ್ತಿದೆ.
ರಾಜವಂಶಸ್ಥ ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ, ಪುತ್ರ ಆದ್ಯವೀರ ಒಡೆಯರ್ ಅರಮನೆಯ ಮುಂಭಾಗದಲ್ಲಿ ಉತ್ಸವ ಮೂರ್ತಿಯ ದರ್ಶನ ಪಡೆದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ವಿಶಿಷ್ಟ ರೀತಿಯ ಸೂರ್ಯ ನಮಸ್ಕಾರ :
ರಥ ಸಪ್ತಮಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ವಿಶೇಷ ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿ ಆಚರಣೆ ಮಾಡಲಾಯಿತು.
ನಗರದ ವಿವಿಧ ಯೋಗ ಸಂಘ ಸಂಸ್ಥೆಗಳಿಂದ ಮುಂಜಾನೆ ಸೂರ್ಯ ನಮಸ್ಕಾರ ಮಾಡುವ ಮೂಲಕ ರಥ ಸಪ್ತಮಿ ಆಚರಣೆ ಮಾಡಲಾಯಿತು. ಮುಂಜಾನೆ 5:30ಕ್ಕೆ ನಗರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಸಾವಿರಾರು ಯೋಗ ಪಟುಗಳು 108 ಸೂರ್ಯ ನಮಸ್ಕಾರ ಮಾಡಿದರು. ಅಲ್ಲದೇ ಇತರೆ ಯೋಗ ಸಂಘ ಸಂಸ್ಥೆಗಳಿಂದ ನಗರದ ವಿವಿಧ ವೃತ್ತಗಳಲ್ಲಿ 108 ಸೂರ್ಯ ನಮಸ್ಕಾರ ಮಾಡಲಾಯಿತು.












Click it and Unblock the Notifications