ಜೋಡಿ ನಂದಿ ವಿಗ್ರಹ ನೋಡಲು ಅರಸಿನಕೆರೆಗೆ ಯದುವೀರ್ ಭೇಟಿ
ಮೈಸೂರು, ಜುಲೈ 19: ಈಚೆಗೆ ಪತ್ತೆಯಾಗಿರುವ ಜೋಡಿ ನಂದಿ ವಿಗ್ರಹವನ್ನು ನೋಡಲು ಮೈಸೂರಿನ ಅರಸಿನಕೆರೆ ಗ್ರಾಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಭೇಟಿ ನೀಡಿ ಈ ವಿಗ್ರಹಗಳ ಬಗ್ಗೆ ಮಾಹಿತಿ ಕಲೆಹಾಕಿದರು.
ವಿಗ್ರಹಗಳ ಕುರಿತು ತಿಳಿಯಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಈ ಮುನ್ನವೇ ಯುದವೀರ್ ಗ್ರಾಮಸ್ಥರಿಗೆ ತಿಳಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಅರಸಿನಕೆರೆ ಗ್ರಾಮಕ್ಕೆ ಪುರಾತತ್ವ ತಜ್ಞರಾದ ಡಾ. ರಂಗರಾಜು ಅವರೊಂದಿಗೆ ಬಂದು ಗ್ರಾಮದಲ್ಲಿ ಒಂದು ಸುತ್ತು ಹಾಕಿದರು. ಗ್ರಾಮದ ಮುಖಂಡರ ಜೊತೆಯೂ ಮಾತುಕತೆ ನಡೆಸಿದರು.

ಪುರಾತತ್ವ ತಜ್ಞರು ಹಾಗೂ ಗ್ರಾಮಸ್ಥರಿಂದ ನಂದಿ ವಿಗ್ರಹದ ಕುರಿತಾಗಿ ಮಾಹಿತಿ ಪಡೆದರು. ಎಚ್ ಡಿ ಕೋಟೆ - ಮೈಸೂರು ಮಾರ್ಗದ ಜಯಪುರ ಹೋಬಳಿಯ ಅರಸಿನಕೆರೆ ಮಾರ್ಗದಲ್ಲಿ ಮಣ್ಣಿನಲ್ಲಿ ಹುದುಗಿದ್ದ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿದ್ದು, ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಜಿಲ್ಲಾಡಳಿತ ವಿಗ್ರಹಗಳ ಸಂರಕ್ಷಣೆಗೆ ಮುಂದಾಗಿತ್ತು.












Click it and Unblock the Notifications