ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೊಬೈಲ್ ಟವರ್ ದಂಧೆ

|
Google Oneindia Kannada News

ಮೈಸೂರು, ಮೇ 30: ಮೊಬೈಲ್ ಟವರ್ ಗಳನ್ನು ಯಾವುದೇ ನಿಯಮ, ನೋಂದಣಿ ವ್ಯವಸ್ಥೆ ಇಲ್ಲದೆ ಅವ್ಯಾಹತವಾಗಿ ಸ್ಥಾಪಿಸುವ ಕೆಲಸ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದರ ಮೇಲೆ ಅಧಿಕಾರಿಗಳಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಕ್ಕೆ ಬರುವ ಆದಾಯವೂ ಇದರಿಂದ ಕಡಿತಗೊಂಡಿದೆ.

15 ವರ್ಷಗಳಿಂದ ಮೊಬೈಲ್ ಟವರ್ ಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ. 2014ರಲ್ಲಿ ಈ ಸಂಬಂಧ ಪ್ರಸ್ತಾವನೆಯಾಗಿ ಸರ್ಕಾರ ಅಧಿಸೂಚನೆ ಹೊರಡಿಸಿ ತಕ್ಷಣ ಹಿಂಪಡೆದ ಅವಧಿಯಲ್ಲಿ ಇದು ಮತ್ತೆ ನನೆಗುದಿಗೆ ಬಿತ್ತು. ಹಿಂದಿನ ಅಧಿಸೂಚನೆಯಲ್ಲಿ ಪ್ರತಿ ಮೊಬೈಲ್ ಟವರ್ ಗೆ ವಾರ್ಷಿಕ 12,000ರೂ ಶುಲ್ಕ ನಿಗದಿಗೊಳಿಸಲಾಗಿತ್ತು. ಇದು ಜಾರಿಯಾಗಿದ್ದರೆ ಮೈಸೂರು ನಗರವೊಂದರಲ್ಲೇ ಸರಾಸರಿ 250 ಮೊಬೈಲ್ ಟವರ್ ಲೆಕ್ಕದಲ್ಲಿ 5 ವರ್ಷದಲ್ಲಿ 1.5 ಕೋಟಿ ರೂಪಾಯಿ ಆದಾಯ ಬರಬೇಕಿತ್ತು. ಆದರೆ ಆ ಹಣ ಎಲ್ಲಿ ಹೋಯಿತು ಎಂಬುದು ಈಗ ಯಕ್ಷ ಪ್ರಶ್ನೆ.

ಇನ್ಮುಂದೆ ಮೊಬೈಲ್ ಟವರ್ ನಿರ್ಮಾಣಕ್ಕೆ ಲೈಸನ್ಸ್ ಕಡ್ಡಾಯ: ಸಚಿವ ಖಾದರ್ಇನ್ಮುಂದೆ ಮೊಬೈಲ್ ಟವರ್ ನಿರ್ಮಾಣಕ್ಕೆ ಲೈಸನ್ಸ್ ಕಡ್ಡಾಯ: ಸಚಿವ ಖಾದರ್

ನಗರ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಿಸುವ ಸಂಬಂಧ ಹೊಸ ನೋಂದಣಿ ವ್ಯವಸ್ಥೆ ಜಾರಿಗೆ ತರುವುದಾಗಿ ನಗರಾಭಿವೃದ್ಧಿ ಸಚಿವ ಖಾದರ್ ಅವರು ತಿಳಿಸಿದ್ದರು. ಆರು ತಿಂಗಳಾದರೂ ಇನ್ನೂ ಆ ನಿಯಮ ರೂಪಿಸದಿರುವುದರಿಂದ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆಡಳಿತ ಮಹಾನಗರ ಪಾಲಿಕೆ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಇದು ದೊಡ್ಡ ತಲೆನೋವಾಗಿದೆ.

Without following any rules Mobile tower construction is everywhere in Mysuru

ಮೈಸೂರು ಮಹಾನಗರ ಪಾಲಿಕೆಗೆ ಇದರಿಂದಾಗಿ ನಿರೀಕ್ಷಿತ ಆದಾಯ ಬರುತ್ತಿಲ್ಲ. ಪ್ರಸ್ತುತ ಮಹಾನಗರ ಪಾಲಿಕೆ ಮೊಬೈಲ್ ಟವರ್ ಇರುವ ಮನೆ, ಕಟ್ಟಡ ಹಾಗೂ ಖಾಲಿ ನಿವೇಶನಗಳಿಗೆ ವಾಣಿಜ್ಯ ದರದಲ್ಲಿ ಆಸ್ತಿ ತೆರಿಗೆ ವಿಧಿಸಿ ವಸೂಲಿ ಮಾಡುತ್ತಿದೆ. ಆದರೂ ಇದು ಕಡಿಮೆಯೇ. ಆಸ್ಪತ್ರೆಗಳು, ಶಾಲಾ-ಕಾಲೇಜುಗಳ 50 ಮೀಟರ್ ಸುತ್ತಳತೆಯಲ್ಲಿ ಟವರ್ ಗಳನ್ನು ನಿರ್ಮಿಸುವಂತಿಲ್ಲ ಎಂಬ ನಿಯಮವಿತ್ತು. ಇದಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಸಂಬಂಧಿಸಿದ ಕುಂದುಕೊರತೆ ಪರಿಹಾರ ಘಟಕವೊಂದನ್ನು ನಿರ್ಮಿಸುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಇದನ್ನು ಕೂಡ ಇನ್ನೂ ಜಾರಿಗೊಳಿಸಿಲ್ಲ.

ಮೊಬೈಲ್ ಟವರ್ ಹಾಕುವ ಮುನ್ನಾ ಬಿಬಿಎಂಪಿಗೆ ಶುಲ್ಕ ಕಟ್ಟಬೇಕು ಮೊಬೈಲ್ ಟವರ್ ಹಾಕುವ ಮುನ್ನಾ ಬಿಬಿಎಂಪಿಗೆ ಶುಲ್ಕ ಕಟ್ಟಬೇಕು

ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸದ ಹೊರತು ಮೊಬೈಲ್ ಟವರ್ ಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಗರ ಪಾಲಿಕೆ ಅಧಿಕಾರಿಗಳು. ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.

English summary
Without following any rules and regulationMobile tower construction is going on everywhere in Mysuru. Company and building owners are not paying license amount to Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X