ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರ

ಯಾರು ಏನೇ ಅಂದರೂ ಮೈಸೂರು ಸ್ವಚ್ಛನಗರಿಯ ಪಟ್ಟವನ್ನು ಕಳೆದುಕೊಂಡಿದ್ದಂತೂ ನಿಜ. ಮೈಸೂರಿಗೆ ಸ್ವಚ್ಛಭಾರತದ ಪಟ್ಟ ತಪ್ಪಿದ್ದಕ್ಕೆ ಜನಪ್ರತಿನಿಧಿಗಳು ಏನಂತಾರೆ ಎಂದು ಅವರ ಬಾಯಲ್ಲೇ ಕೇಳಿ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 05: ಸತತ 2 ವರುಷಗಳಿಂದಲೂ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಡೆದಿದ್ದ ಮೈಸೂರು ಈ ಬಾರಿಯೂ ಆ ಹೆಗ್ಗಳಿಕೆ ಪಡೆದು ಹ್ಯಾಟ್ರಿಕ್ ಸಾಧನೆ ಮಾಡುತ್ತದೆಂಬ ನಿರೀಕ್ಷೆ ಈ ಬಾರಿ ಹುಸಿಯಾಗಿದೆ. ಈ ಬಾರಿಯ ಸ್ವಚ್ಛ ನಗರಿಯ ಪಟ್ಟಿಯಲ್ಲಿ ಇಂದೋರ್ ಮೊದಲ ಸ್ಥಾನದಲ್ಲಿದೆ. ಆದರೆ ಐದನೇ ಸ್ಥಾನಕ್ಕೆ ಹಿಂಬಡ್ತಿ ಪಡೆದ ಮೈಸೂರು ಈ ಸ್ಥಾನ ಕಳೆದುಕೊಳ್ಳೋಕೆ ಕಾರಣ ಏನು ಎಂಬ ಬಗ್ಗೆ ಈಗಾಗಲೇ ನೀವು ಒನ್ ಇಂಡಿಯಾದಲ್ಲಿ ಓದಿರುತ್ತೀರಿ. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಏನು ಅನ್ನೋ ಕುತೂಹಲವೇನಾದರೂ ನಿಮಗಿದ್ದರೆ ಮುಂದೆ ಓದಿ

ಮೈಸೂರು ಅಗ್ರಸ್ಥಾನ ಕಾಯ್ದುಕೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಐದನೇ ಸ್ಥಾನಕ್ಕೆ ಕುಸಿದಿರುವುದು ತೀರಾ ಬೇಸರ ತಂದಿದೆ ಎಂದು ಮೈಸೂರು ನಗರ ಪಾಲಿಕೆಯ ಮಹಾಪೌರರು ಹೇಳಿದ್ದರೆ, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಎಡವಿದೆವು ಎಂದು ಶಾಸಕರೊಬ್ಬರು ಹೇಳಿದ್ದಾರೆ.[ಅತಿ ವಿಶ್ವಾಸ, ಸಮನ್ವಯದ ಕೊರತೆಯಿಂದಲೇ ಕೈ ತಪ್ಪಿತೆ ಸ್ವಚ್ಛ ನಗರಿ ಪಟ್ಟ ?]

ಯಾರು ಏನೇ ಅಂದರೂ ಮೈಸೂರು ಸ್ವಚ್ಛನಗರಿಯ ಪಟ್ಟವನ್ನು ಕಳೆದುಕೊಂಡಿದ್ದಂತೂ ನಿಜ. ಈ ಬಾರಿ ಕಳೆದುಕೊಂಡ ಸ್ಥಾನವನ್ನು ಮುಂದಿನ ವರ್ಷ ಪಡೆಯಲೇಬೇಕೆಂಬ ಪಣತೊಟ್ಟು ಜನಪ್ರತಿನಿಧಿಗಳು ಕೆಲಸ ಮಾಡುವ ಅಗತ್ಯವಿದೆ. ಅದೇನೇ ಇರಲಿ, ಸ್ವಚ್ಛ ಭಾರತ ಕೈತಪ್ಪಿದ್ದಕ್ಕೆ ಜನಪ್ರತಿನಿಧಿಗಳು ಏನಂತಾರೆ ಎಂದು ಅವರ ಬಾಯಲ್ಲೇ ಕೇಳಿ.

ನಮ್ಮಿಂದ ತಪ್ಪಾಗಿದೆ

ನಮ್ಮಿಂದ ತಪ್ಪಾಗಿದೆ

ಸಾಂಸ್ಕøತಿಕ ನಗರಿ ಮೈಸೂರು ಮೂರನೇ ಬಾರಿ ಸ್ವಚ್ಛನಗರಿ ಎಂಬ ಪ್ರಶಂಸೆಗೆ ಪಾತ್ರವಾಗಲಿದೆ ಎಂಬ ವಿಶ್ವಾಸವಿತ್ತು. ಆದರೆ 5ನೇ ಸ್ಥಾನಕ್ಕಿಳಿದಿರುವುದು ಬೇಸರ ತಂದಿದೆ. ಕಳೆದ ಬಾರಿ 10 ಲಕ್ಷ ಜನ ಸಂಖ್ಯೆಯುಳ್ಳ 73 ನಗರಗಳನ್ನು ಮಾತ್ರ ಸಮೀಕ್ಷೆ ಮಾಡಲಾಗಿತ್ತು. ಈ ಬಾರಿ 1 ಲಕ್ಷ ಜನ ಸಂಖ್ಯೆಗಿಂತ ಮೇಲ್ಪಟ್ಟ 434 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಾರ್ವಜನಿಕರಿಂದ ಸರಿಯಾಗಿ ಪ್ರತಿಕ್ರಿಯೆ ಸಿಗದೇ ಇರುವ ಕಾರಣದಿಂದಲೂ ನಮಗೆ ನಂ.1 ರ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ನಗರಪಾಲಿಕೆಯ ಎಲ್ಲ ಸದಸ್ಯರ ಜೊತೆಗೂ ಚರ್ಚಿಸಿ ಹಾಗೂ ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಮತ್ತೆ ಮೊದಲ ಸ್ಥಾನ ಗಳಿಸಲು ಬದ್ಧರಾಗುತ್ತೇವೆ. -ಎಂ.ಜೆ.ರವಿಕುಮಾರ್, ಮಹಾಪೌರರು

ಸ್ವಚ್ಛತೆಗೆ ಬೇಕಿತ್ತು ಸಾರ್ವಜನಿಕರ ಸಹಕಾರ

ಸ್ವಚ್ಛತೆಗೆ ಬೇಕಿತ್ತು ಸಾರ್ವಜನಿಕರ ಸಹಕಾರ

ಸಾಂಸ್ಕøತಿಕ ನಗರಿಗೆ ಎರಡು ಬಾರಿ ಒಲಿದು ಬಂದಿದ್ದ ಸ್ವಚ್ಛ ನಗರಿ ಪಟ್ಟವನ್ನು ಮೂರನೇ ಬಾರಿ ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವುದು ಬೇಸರ ತಂದಿದೆ. ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 5ನೇ ಸ್ಥಾನಕ್ಕಿಳಿದಿರುವುದು ನೋವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಿ, ಮುಂದಿನ ಸಲ ಒಳ್ಳೆಯ ಫಲಿತಾಂಶ ತರಬೇಕಿದೆ. -ವಾಸು, ಶಾಸಕರು, ಚಾಮರಾಜ ಕ್ಷೇತ್ರ[ಸ್ವಚ್ಛ ನಗರಗ ಪಟ್ಟಿಯಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡ ಮೈಸೂರು]

ಅಪ್ಡೇಟ್ ಆಗಬೇಕಿತ್ತು

ಅಪ್ಡೇಟ್ ಆಗಬೇಕಿತ್ತು

ಸ್ಪರ್ಧೆಯ ವೇಗಕ್ಕೆ ನಾವು ಹೊಂದಿಕೊಂಡು ಹೋಗಬೇಕಿತ್ತು. ಕಳೆದ ಬಾರಿ ಪಾಸ್ಲಿಕ್ ಮುಕ್ತ, ಕಸ ವಿಲೇವಾರಿ, ಒಳಚರಂಡಿ ಸೇರಿ ದಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಅಂಕ ಗಳಿಸಲಾಗಿತ್ತು. ಆದರೆ ಇದನ್ನು ಅಪ್ಡೇಟ್ ಮಾಡಬೇಕಿತ್ತು. ಇಂದೋರ್ ಎಲೆಕ್ಟ್ರೋ ಜನರಸ್ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳ ವುದರ ಜೊತೆಗೆ ಪೌರಕಾರ್ಮಿಕರಿಗೆ ಆಧುನಿಕ ಉಪಕರಣಗಳನ್ನು ನೀಡಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸಾಕಷ್ಟು ಶ್ರಮಿಸಿದೆ. ಇದು ಸಾಂಸ್ಕೃತಿಕ ನಗರಿಗೆ ಎಚ್ಚರಿಕೆ ಗಂಟೆ. -ಎಸ್.ಎ.ರಾಮದಾಸ್, ಮಾಜಿ ಸಚಿವ[ಮೂರನೇ ಬಾರಿಗೂ ತುಂಬ ಕ್ಲೀನ್ ಎಂದು ಭೇಷ್ ಎನಿಸಿಕೊಂಡ ಮೈಸೂರು!]

ಸ್ವಚ್ಛತೆಗೆ ಕಾರ್ಯಪಡೆ ರಚನೆಯಾಗಲಿ

ಸ್ವಚ್ಛತೆಗೆ ಕಾರ್ಯಪಡೆ ರಚನೆಯಾಗಲಿ

ರಾಜ್ಯಾದ್ಯಂತ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಮೈಸೂರಿಗೆ ಹ್ಯಾಟ್ರಿಕ್ ಸ್ವಚ್ಛ ನಗರಿ ಎಂಬ ಪಟ್ಟ ಸಿಗಲಿದೆ ಎಂಬ ನಿರೀಕ್ಷೆ ಇಟ್ಟು ಕೊಂಡಿದ್ದರು. ಆದರೆ 5ನೇ ಸ್ಥಾನಕ್ಕೆ ಕುಸಿದಿರುವುದು ಆಘಾತವಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಪಡೆಯೊಂದನ್ನು ರಚನೆ ಮಾಡಿ, ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಮೈಸೂರು ಸ್ವಚ್ಛನಗರಿ ಪಟ್ಟ ಅಲಂಕರಿಸುವಂತೆ ದುಡಿಯಬೇಕಿದೆ. -ಜಿ.ಟಿ.ದೇವೇಗೌಡ, ಶಾಸಕರು[ಬಹಿರ್ದೆಸೆ ಮುಕ್ತ ಭಾರತ : ಮೋದಿ ಸರಕಾರದ ರಿಪೋರ್ಟ್ ಕಾರ್ಡ್]

ನಿರೀಕ್ಷೆ ಹಳ್ಳಗೆಡಿಸಿದೆ

ನಿರೀಕ್ಷೆ ಹಳ್ಳಗೆಡಿಸಿದೆ

ಸಾಂಸ್ಕøತಿಕ ನಗರಿ ಮೈಸೂರು ಸ್ವಚ್ಛ ನಗರಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ಹುಸಿಯಾಗಿರುವುದು ಅತ್ಯಾಶ್ಚರ್ಯವಾಗಿದೆ. ಇದರಿಂದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸಾರ್ವಜನಿಕರಾಗಲಿ ಕುಗ್ಗದೆ, ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಕೊಂಡು ಸ್ವಚ್ಛನಗರಿಯಲ್ಲಿ ಮೈಸೂರು ಪ್ರಥಮ ಸ್ಥಾನ ಪಡೆಯಲು ಬೇಕಾಗುವ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ. -ಸಾ. ರಾ ಮಹೇಶ್, ಶಾಸಕ

ಬೇಸರದ ಸಂಗತಿ

ಬೇಸರದ ಸಂಗತಿ

ಸ್ವಚ್ಛ ಭಾರತ್ ಸ್ಪರ್ಧೆಯಲ್ಲಿ 1ನೇ ಸ್ಥಾನವನ್ನು ಕಳೆದುಕೊಂಡಿದ್ದು ನಮಗೆ ಬೇಸರ ತರಿಸಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಹೆಚ್ಚು ಮಂದಿ ಸಾರ್ವಜನಿಕರು ನಗರದ ಬಗ್ಗೆ ಅಭಿಪ್ರಾಯ ತಿಳಿಸಲು ಮುಂದಾಗಲಿಲ್ಲ. ಶೌಚಾಲಯ ಕಟ್ಟಲು ನೀಡಲಾಗಿದ್ದ ನಿಗದಿತ ಗುರಿಯನ್ನು ನಾವು ತಲುಪಲಾಗಲಿಲ್ಲ.. ಮುಂದಿನ ದಿನಗಳಲ್ಲಿ ಸ್ವಚ್ಛ ನಗರಕ್ಕೆ ಸಂಬಂಧಿಸಿದಂತೆ ಮತ್ತೆ ಮೊದಲನೇ ಸ್ಥಾನ ಪಡೆಯಲು ಅನುಸರಿಸಬೇಕಾದ ಮಾರ್ಗಗಳನ್ನು ಎಲ್ಲರೊಂದಿಗೆ ಚರ್ಚೆ ನಡೆಸಿ ಕಾರ್ಯ ಗತಗೊಳಿಸುತ್ತೇವೆ. ಈ - ಜಿ.ಜಗದೀಶ್, ನಗರ ಪಾಲಿಕೆ ಆಯುಕ್ತರು[ಯುನೈಟೆಡ್ ವೇ ಬೆಂಗಳೂರಿನ ಸ್ವಚ್ಛ ಶಾಲೆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ]

English summary
What are the reasons for Mysuru to not getting cleanest city award this year? Here are the reasons given by representatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X