ನಮಗೂ ಕಾಲ ಬಂದೇ ಬರುತೈತೆ : ಮೈಸೂರಿನಲ್ಲಿ ಡಿಕೆಶಿ
Recommended Video

ಮೈಸೂರು, ಆಗಸ್ಟ್ 30 : "ದುಃಖ ದೂರ ಮಾಡುವ ದೇವಿ ದರ್ಶನ ಪಡೆಯಲು ಬಂದಿದ್ದೇನೆ. ದುಃಖ ಎಂದ್ರೆ ಕೇವಲ ನನಗಷ್ಟೇ ಅಲ್ಲ. 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ. ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಬಂದಿದ್ದೇನೆ."
ಮೈಸೂರಿನಲ್ಲಿರುವ ತಾಯಿ ಚಾಮುಂಡೇಶ್ವರಿಯ ಕ್ಷೇತ್ರಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆಡಿದ ಮಾತುಗಳಿವು.
ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ಪ್ರಶ್ನೆಗೂ ಮರು ಪ್ರಶ್ನೆದಾಟಿಯಲ್ಲಿ ಉತ್ತರ ನೀಡಿದರು.
ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಸಮಂಜಸವಾಗಿದೆ. ವಿಜಯ್ ಮುಳುಗುಂದ ರಾಜಕೀಯವಾಗಿ ಬೆಳೆಯುತ್ತಿದ್ದ. ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಾಗ ಉಸ್ತುವಾರಿ ವಹಿಸಿದ್ದ. ಆತನ ಮನೆ ಮೇಲೆ ದಾಳಿ ಮಾಡಿದ್ದನ್ನು ಮಾಧ್ಯಮದಿಂದ ತಿಳಿದಿದ್ದೇನೆ.

ದುಃಖ ದೂರ ಮಾಡುವ ದೇವಿ ದರ್ಶನ ಪಡೆಯಲು ಬಂದಿದ್ದೇನೆ. ದುಃಖ ಎಂದ್ರೆ ಕೇವಲ ನನಗಷ್ಟೇ ಅಲ್ಲ. 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ. ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಬಂದಿದ್ದೇನೆ. ಮಾಧ್ಯಮದವರು ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ನನ್ನ ಮಾವನ ಮನೆ ಕಾದಿದ್ದೀರಿ ನಿಮಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

'ಈ ದಾಳಿಗಳಿಂದ ನನ್ನ ಆತ್ಮಸ್ಥೈರ್ಯ ಕುಸಿದಿದೆ ಅನ್ನಿಸುತ್ತಿದೆಯೇ? ಮಾಧ್ಯಮದವರಿಗೆ ನಾನು ಸುಮ್ಮನಾದೆ ಎನ್ನಿಸುತ್ತಿದೆಯೇ? ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ. ಸಮಯ ಬಂದಾಗ ಬಳಕೆ ಮಾಡುತ್ತೇವೆ. ನಾನು ದೇವಿ ದರ್ಶನ ಪಡೆದಿದ್ದೇನೆ. ಸ್ನೇಹಿತರು ಹೋಮ ಮಾಡಿಸಿದ್ದಾರೆ' ಎಂದು ತಿಳಿಸಿದರು.
ಐಟಿ ದಾಳಿಗಳಿಂದ ಎದರಿಸಿ ಡಿಕೆಶಿಯನ್ನು ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಿಮಗೆ ಹಾಗೆ ಅನಿಸಿದರೆ ಹಾಗೇ ಅಂದುಕೊಳ್ಳಿ ಎಂದರು. ಕಾಕತಾಳೀಯವೆಂಬಂತೆ, ಅವರು ಕಷ್ಟ ನೀಗಲೆಂದು ಕಬ್ಬಾಳಮ್ಮ ದೇಶವಿ ದರುಶನ ಪಡೆಯುತ್ತಿರುವಾಗಲೇ ಅವರ ಬೆಂಬಲಿಗರ ಮೇಲೆ ದಾಳಿ ನಡೆದಿದೆ. ಗ್ರಹಚಾರ ಕೆಟ್ಟರೆ ದೇವರು ಯಾರನ್ನೂ ಬಿಡುವುದಿಲ್ಲ!












Click it and Unblock the Notifications