ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಒಡಲು ಸೇರಿದ ಶ್ರೀಕಂಠದತ್ತ ಒಡೆಯರ್ ಅಸ್ಥಿ

|
Google Oneindia Kannada News

ಮೈಸೂರು, ಡಿ. 13 : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಸ್ಥಿಯನ್ನು ಗುರುವಾರ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ, ಸಂಗಮ ಹಾಗೂ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಹರಿದ್ವಾರ ಮತ್ತು ವಾರಣಾಸಿಯಲ್ಲೂ ಅಸ್ಥಿ ವಿಸರ್ಜನೆ ನಡೆಯಲಿದೆ ಎಂದು ಅರಮನೆ ಕಾರ್ಯದರ್ಶಿ ಹೇಳಿದ್ದಾರೆ.

ಮಂಗಳವಾರ ಒಡೆಯರ್ ಅಂತ್ಯಕ್ರಿಯೆ ನಡೆದ ಮಧುವನದಲ್ಲಿ ಬುಧವಾರ ಬೆಳಗ್ಗೆ ಅರಮನೆ ಪುರೋಹಿತರಾದ ಚಂದ್ರಶೇಖರ ಶಾಸ್ತ್ರೀ ಅವರ ನೇತೃತ್ವದಲ್ಲಿ ಅಸ್ಥಿ ಸಂಚಲನದ ವಿಧಿವಿಧಾನಗಳು ನಡೆದವು. ಒಡೆಯರ್ ಅಂತ್ಯಕ್ರಿಯೆ ನೆರವೇರಿಸಿದ್ದ ಕಾಂತರಾಜ ಅರಸ್, ಪಶ್ಚಿಮ ವಾಹಿನಿಯಲ್ಲಿ ಅಸ್ಥಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದರು. ಹರಿದ್ವಾರ, ವಾರಣಾಸಿಗಳಲ್ಲೂ ಈ ಪ್ರಕ್ರಿಯೆ ನಡೆಯಲಿದೆ. (ಪಂಚಭೂತಗಳಲ್ಲಿ ಶ್ರೀಕಂಠದತ್ತ ಒಡೆಯರ್ ಲೀನ)

Srikantadatta Narasimharaja Wadiyar

ಅಸ್ಥಿ ಸಂಚಲನ ಕ್ರಿಯೆಯ ಆರಂಭದಲ್ಲಿ ಅಗ್ನಿಸ್ಪರ್ಶಮಾಡಿದ ಸ್ಥಳದಲ್ಲಿ ಮೊದಲು ಹಾಲು, ತುಪ್ಪ ಅರ್ಪಿಸಿ ಪಂಚಗವ್ಯ ಪ್ರೋಕ್ಷಣೆ ಮಾಡಲಾಯಿತು. ರುದ್ರಾಭಿಷೇಕ, ವೇದ ಆರಾಧನೆ ಹಾಗೂ ಶೈಲಾರಾಧನೆಯನ್ನು ಪುರೋಹಿತರು ಮುಗಿಸಿದರು. ನಂತರ ಅಸ್ಥಿ, ಚಿತಾಭಸ್ಮ ಸಂಗ್ರಹ ಕಾರ್ಯ ನಡೆಯಿತು. ಕಾಂತರಾಜ ಅರಸ್ ಅಸ್ಥಿ ಹಿಡಿದು ಪಶ್ಚಿಮವಾಹಿನಿ ಕಡೆ ನಿರ್ಗಮಿಸುತ್ತಿದ್ದಂತೆ ಮಧುವನವನ್ನು ಶುದ್ಧಗೊಳಿಸಲಾಯಿತು. (ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ)

ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ನದಿ ಹರಿವಿನ ಪಶ್ಚಿಮವಾಹಿನಿಯಲ್ಲಿ ಕಾಂತರಾಜೇ ಅರಸ್ ಮಧ್ಯಾಹ್ನ 2.20 ರಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಡಾ.ಭಾನುಪ್ರಕಾಶ್ ಶರ್ಮಾ, ಹಾಗೂ ಅರಮನೆ ಪುರೋಹಿತರ ತಂಡ ವಿಧಿ ವಿಧಾನಗಳನ್ನು ನೆರವೇರಿಸಿತು. ಅರಮನೆಯ ಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ, ಸೂಪರಿಡೆಂಟ್ ನರಸಿಂಹನ್ ಮತ್ತು ಸಿಬ್ಬಂದಿ, ತಹಸೀಲ್ದಾರ್ ಬಿ.ಸಿ ಶಿವಾನಂದಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು. (ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್)

ಒಟ್ಟು ಐದು ಕಡೆ ಅಸ್ಥಿ ವಿಸರ್ಜನೆ : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಸ್ಥಿ ವಿಸರ್ಜನೆಯನ್ನು ಒಟ್ಟು ಐದು ಸ್ಥಳದಲ್ಲಿ ಮಾಡಲಾಗುತ್ತೆ. ಗುರುವಾರ ಪಶ್ಚಿಮ ವಾಹಿನಿ, ಸಂಗಮ ಹಾಗೂ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಈ ಕಾರ್ಯ ಪೂರ್ಣಗೊಂಡಿದೆ. ಹರಿದ್ವಾರ, ವಾರಣಾಸಿಯಲ್ಲೂ ಈ ಪ್ರಕ್ರಿಯೆ ನಡೆಯಲಿದೆ.

English summary
A part of the ashes of Srikantadatta Narasimharaja Wadiyar was immersed in the waters of Paschimavahini and Sangam in Srirangapatna and Tirumakudalu on Thursday, December 12. Kantharaj Urs immersed the ashes after the last rites at Madhuvana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X