• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ಸಿನವರೇ, ನೀವು ಸೆಕ್ಯೂಲರ್ ಆಗಿಯೇ ಇರಿ : ಎಚ್. ವಿಶ್ವನಾಥ್

By Yashaswini
|

ಮೈಸೂರು, ಆಗಸ್ಟ್ 12 : ಕಾಂಗ್ರೆಸ್ಸಿನವರೇ ನೀವು ಸೆಕ್ಯೂಲರ್ ಆಗಿಯೇ ಇರಿ, ಅದನ್ನು ನೀವೂ ಯಾವತ್ತು ಮಿಕ್ಸ್ ಮಾಡಬೇಡಿ. ಚುನಾವಣೆಗೆ ಮುನ್ನ ನಮ್ಮನ್ನ ಬಿಜೆಪಿಯ ಬಿ ಟೀಮ್ ಎಂದಿದ್ದೀರ. ನಾವೂ ಬಿಜೆಪಿ ಜೊತೆ ಹೋಗಿ ಸರ್ಕಾರ ರಚನೆ ಮಾಡಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಕಾಂಗ್ರೆಸ್ ಗೆ ಕುಟುಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು.

ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಎಚ್ ವಿಶ್ವನಾಥ್ ಸಂದರ್ಶನ

ಕೇಂದ್ರದಲ್ಲಿರುವುದು ಕೇವಲ ಮಾತಿನ ಸರ್ಕಾರವಷ್ಟೇ. ಇಲ್ಲಿಯವರೆಗೂ ಕಾಮ್ ಕಿ ಬಾತ್ ಆಗುತ್ತಲೇ ಇಲ್ಲ. ಬರೀ ಮಾತಿನ ಆಡಳಿತ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ.

ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯು ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು. ಎಂ.ಬಿ.ಪಾಟೀಲ್ ಅವರನ್ನು ಗೆಲ್ಲಿಸೋಕೆ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದ್ದವು ಎಂದು ಗಂಭೀರವಾಗಿ ಆರೋಪಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ಎರಡೂ ಪಕ್ಷಗಳು ನಿರಾಕರಣೆ: ಪರಮೇಶ್ವರ್‌

ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಳೆಯಿಂದ ಟಿಕೆಟ್ ನೀಡಲು ಅರ್ಜಿ ಸ್ವೀಕಾರ ಪ್ರಾರಂಭವಾಗಲಿದೆ. ಇದೇ ಆಗಸ್ಟ್ ರಂದು 17ಕ್ಕೆ ಟಿಕೆಟ್ ನೀಡಲಾಗುವುದು. ಬಲಿಷ್ಠವಾಗಿ ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ. ಪ್ರಾಂತೀಯ ಪಕ್ಷವನ್ನು ಕರ್ನಾಟಕದಲ್ಲಿ ಪ್ರಬಲವಾಗಿ ಕಟ್ಟುತ್ತೇನೆ. ಇದಕ್ಕಾಗಿ ಯುವಕರ ಪಡೆಯನ್ನು ಕಟ್ಟುತ್ತಿದ್ದೇನೆ.

'ದಳಪತಿ'ಯಾದ ಎಚ್.ವಿಶ್ವನಾಥ್ ಮುಂದಿರುವ ಸವಾಲುಗಳು!

ಜೆಡಿಎಸ್​ ರಾಜ್ಯಧ್ಯಕ್ಷನಾದ ಕಾರಣ ನಾನು ಕೂಡ ಸಮನ್ವಯ ಸಮಿತಿ ಸಭೆಯಲ್ಲಿ ಭಾಗಿಯಾಗುತ್ತೇನೆ. ನನ್ನ ಕನಸುಗಳ ಬಗ್ಗೆ ಪ್ರಸ್ತಾಪ‌ ಮಾಡುತ್ತೇನೆ. ದಿನೇಶ್ ಗುಂಡೂರಾವ್ ಸಹ ಬರುತ್ತಾರೆ ಎಲ್ಲರು ಒಟ್ಟಾಗಿ‌ ಕೆಲಸ ಮಾಡುತ್ತೀವಿ. ಎಲ್ಲವೂ ಚೆನ್ನಾಗಿ ಇರುತ್ತದೆ. ಸಮನ್ವಯ ಸಮಿತಿಯಲ್ಲಿ ಸಮಸ್ಯೆ ಆಗುವುದಿಲ್ಲ.

ಜೆಡಿಎಸ್​ ಸರ್ಕಾರ ಕಾಂಗ್ರೆಸ್​ ಜನಪ್ರಿಯ ಯೋಜನೆಯಾದ ಶಾದಿ ಭಾಗ್ಯ ಯೋಜನೆಗೆ ಅನುದಾನ ಕಡಿತ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಶಾದಿ ಭಾಗ್ಯ ಯೋಜನೆಯ ಅನುದಾನವನ್ನು ಫೆಬ್ರವರಿಯಿಂದ ಸರ್ಕಾರವೇ ಕಡಿತ ಮಾಡಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಗೆ ನಾವು ಕೂಡ ಸಜ್ಜಾಗುತ್ತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆ ಭಾರತದ ಇತಿಹಾಸದಲ್ಲಿ ಒಂದು ತಿರುವನ್ನು ಪಡೆಯಲಿದೆ. ಪ್ರಾಂತೀಯ ಪಕ್ಷಗಳು ಅಧಿಕಾರ ಹಿಡಿಯಲಿವೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಂತೀಯ ನಾಯಕತ್ವ ಬರಲಿದೆ ಎಂದು ಭವಿಷ್ಯ ನುಡಿದರು.

ಹುಟ್ಟುಹಬ್ಬ ಸಂಭ್ರಮದಲ್ಲಿ ಪ್ರಜ್ವಲ್ , ಚುನಾವಣೆ ಸ್ಪರ್ಧೆ ಬಗ್ಗೆ ಸುಳಿವು!

ಪ್ರಜ್ವಲ್ ರೇವಣ್ಣರನ್ನು ಕೊಂಡಾಡಿದ ವಿಶ್ವನಾಥ್

ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, ಪ್ರಜ್ವಲ್ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಆತನಿಗೆ ಸಾಕಷ್ಟು ದೂರದೃಷ್ಟಿ ಇದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿದೆ. ಹೀಗಾಗಿ ಆತ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುವ ಭರವಸೆಯ ನಾಯಕನಾಗಲಿದ್ದಾರೆ ಎಂದು ಬಣ್ಣಿಸಿದರು.

ರಾಜಕೀಯ ಇತಿಹಾಸ ಹೊಂದಿರುವ ಕುಟುಂಬದಿಂದ ಬಂದಿರುವ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಎನ್ನುವುದು ಬೇರೆ ವಿಷಯ. ಆದರೆ ಆತನಿಗೆ ಒಳ್ಳೆಯ ದೂರ ದೃಷ್ಟಿ ಇದೆ. ಹೀಗಾಗಿ ಮುಂದೆ ಒಳ್ಳೆಯ ನಾಯಕನಾಗಿ ಬೆಳೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

English summary
JDS president H Vishwanath Says Let Congress be Secular, Never mix it yourself. Also spoke about Congress and BJP. Vishwanath said, Congress and BJP were allied in the last assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X