ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಗ್ಗಡಹಳ್ಳಿ ಗ್ರಾಮದ 50ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ವೈರಲ್ ಜ್ವರ!

By Yashaswini
|
Google Oneindia Kannada News

ಮೈಸೂರು , ಜೂನ್ 7 : ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಗ್ರಾಮದ 50ಕ್ಕೂ ಹೆಚ್ಚು ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಂಡಿದೆ. ತಾಲೂಕಿನ ಹುಲ್ಲಹಳ್ಳಿಯ ಸರ್ಕಾರಿ ಆಸ್ಪತ್ರೆ ಹಾಗೂ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 8ರಿಂದ 12 ವರ್ಷ ವಯಸ್ಸಿನ ಜ್ವರ ಪೀಡಿತ ಮಕ್ಕಳನ್ನು ದಾಖಲು ಮಾಡಲಾಗಿದೆ.

ಕಳೆದೊಂದು ವಾರದಿಂದ ಗ್ರಾಮದ ಮಕ್ಕಳಿಗೆ ಜ್ವರ, ಚಳಿ, ಕೆಮ್ಮು ಇದ್ದು ತೀವ್ರ ನಿತ್ರಾಣಗೊಂಡಿದ್ದಾರೆ. ಚಿಕಿತ್ಸೆ ಕೊಡಿಸುತ್ತಿದ್ದರೂ ಜ್ವರ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಗ್ರಾಮದಲ್ಲಿ ಮಕ್ಕಳಿಗೆ ಜ್ವರ ಹರಡುತ್ತಿರುವುದನ್ನು ಗಮನಿಸಿದರೆ ಯಾವುದೋ ಸಾಂಕ್ರಾಮಿಕ ರೋಗ ತಗುಲಿರುವ ಭೀತಿ ಕಾಡುತ್ತಿದೆ.

ಮುಂಗಾರು ಪೂರ್ವ ಮಳೆ: ರಾಜ್ಯದಲ್ಲಿ ಸಾವಿರ ಡೆಂಗ್ಯೂ ಪ್ರಕರಣ ದಾಖಲುಮುಂಗಾರು ಪೂರ್ವ ಮಳೆ: ರಾಜ್ಯದಲ್ಲಿ ಸಾವಿರ ಡೆಂಗ್ಯೂ ಪ್ರಕರಣ ದಾಖಲು

ಗ್ರಾಮಕ್ಕೆ ಕಳೆದ 20 ದಿನಗಳಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ. ಆ ನೀರು ಕಲುಷಿತಗೊಂಡಿದ್ದು, ಅದರ ಸೇವನೆಯಿಂದ ಜ್ವರ ಕಾಣಿಸಿಕೊಂಡಿರಬಹುದು ಎಂದು ಹೆಗ್ಗಡಹಳ್ಳಿ ಗ್ರಾಮದ ಮಹದೇವಯ್ಯ ಸಂಶಯ ವ್ಯಕ್ತಪಡಿಸಿದ್ದಾರೆ.

Viral fever has seen over 50 children in Heggadahalli village

"ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಜ್ವರ ಕಡಿಮೆಯಾಗಿಲ್ಲ. ರಾತ್ರಿ ಜ್ವರದ ತಾಪ ಹೆಚ್ಚಾಗಿ ನರಳುತ್ತಾರೆ. ಆದ್ದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಆದರೆ, ಇಲ್ಲಿ ರಕ್ತ ಪರೀಕ್ಷೆಯ ಸೌಲಭ್ಯವಿಲ್ಲ.

ಹೀಗಾಗಿ ಖಾಸಗಿ ಪ್ರಯೋಗಾಲಯದಲ್ಲಿ ₹450 ಕೊಟ್ಟು ರಕ್ತ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದೇವೆ " ಎಂದು ಗ್ರಾಮದ ಪುಟ್ಟಮ್ಮ ಹಾಗೂ ಚಂದ್ರಮ್ಮ ಅಳಲು ತೋಡಿಕೊಂಡರು. "ಪ್ರತಿ ದಿನ ಹೆಗ್ಗಡಹಳ್ಳಿ ಗ್ರಾಮದ 10ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಿಕಿತ್ಸೆ ನೀಡಿದ ನಂತರ 2-3 ದಿನದಲ್ಲಿ ಜ್ವರ ಕಡಿಮೆಯಾಗಬೇಕು. 5 ದಿನ ಕಳೆದರೂ ಜ್ವರ ಕಡಿಮೆಯಾಗುತ್ತಿಲ್ಲ.

Viral fever has seen over 50 children in Heggadahalli village

ಗ್ರಾಮದ ನೀರಿನ ಮಾದರಿಯನ್ನು ಪಡೆದು ಪರೀಕ್ಷೆ ನಡೆಸಬೇಕು. ಕಾಯಿಸಿ ಆರಿಸಿದ ನೀರಿನ ಬಳಕೆ, ಬಿಸಿ ಆಹಾರ ಸೇವನೆ ಹಾಗೂ ಸೊಳ್ಳೆಗಳು ರೋಗ ಹರಡದಂತೆ ಕ್ರಮವಹಿಸಬೇಕಿದೆ" ಎನ್ನುತ್ತಾರೆ ಆಸ್ಪತ್ರೆಯ ವೈದ್ಯೆ ಜಯಮಾಲಾ ಸಲಹೆ ನೀಡಿದರು.

ಗ್ರಾಮದಲ್ಲಿ ಬಳಸುತ್ತಿರುವ ನೀರಿನ ಮಾದರಿ ತೆಗೆದು ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಮುಂಜಾಗ್ರತಾ ಕ್ರಮದ ಅರಿವು ಮೂಡಿಸುತ್ತಿದ್ದಾರೆ.

ಮಳೆಗಾಲ ಆರಂಭವಾಗಿರುವುದರಿಂದ, ನೀರು ಮತ್ತು ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ವೈರಲ್ ಜ್ವರ ಕಾಣಿಸಿಕೊಂಡಿದೆ. 2 ದಿನದಲ್ಲಿ ನಿಯಂತ್ರಣಕ್ಕೆ ಬರಲಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಗ್ರಾಮದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಹುಡುಕುವತ್ತ ಗಮನಹರಿಸಬೇಕಿದೆ.

English summary
Viral fever has seen over 50 children in last one week in Heggadahalli village of Nanjangud taluk. Children have been admitted to the Government Hospital in Hullahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X