ವಿಡಿಯೋ- ಮೈಸೂರಲ್ಲಿ ಶೆಟರ್ ಮುರಿದು ಐ-ಫೋನ್ ದೋಚಿದ ಕಳ್ಳರು
ಮೈಸೂರು, ಮಾರ್ಚ್ 02: ಮೊಬೈಲ್ ಅಂಗಡಿ ಶೆಟರ್ ಬೀಗ ಮುರಿದು ಸುಮಾರು ೩೩ ಲಕ್ಷ ರುಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕಳ್ಳತನ ಮಾಡಿರುವ ಘಟನೆ ಮೈಸೂರು ನಗರದ ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ನಡೆದಿದೆ.
Recommended Video
ಜೆಎಸ್ಎಸ್ ಲಾ ಕಾಲೇಜು ಬಿಲ್ಡಿಂಗ್ ನ ಎಸ್ ಶಾಪಿ.ಕಾಂ ಪ್ರೈ.ಲಿ ಎಂಬ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿ ಮಾಲೀಕ ಸತೀಶ್ ಕುಮಾರ್ ಫೆಬ್ರವರಿ 28 ರಂದು ರಾತ್ರಿ 9 ಗಂಟೆಗೆ ಅಂಗಡಿ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಮಾರನೇ ದಿನ ಬೆಳಿಗ್ಗೆ 10:30 ಸುಮಾರಿಗೆ ಅಂಗಡಿ ಬಳಿ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಬೆಳಗಿನ ಜಾವ ಅಂಗಡಿಗೆ ನುಗ್ಗಿದ ಕಳ್ಳರ ಗುಂಪೊಂದು ಎಚ್ಚರಿಕೆಯಿಂದ ಶೆಟರ್ ಬೀಗ ಮುರಿದಿದ್ದಾರೆ. ಒಬ್ಬ ರಸ್ತೆ ಭಾಗದ ಕಡೆ ಮುಖ ಮಾಡಿ ಬೆಡ್ಶೀಟ್ ಅಡ್ಡ ಹಿಡಿದು ನಿಂತಿದ್ರೆ, ಉಳಿದ ಮೂವರು ಅಂಗಡಿ ಲಾಕ್ ಓಪನ್ ಮಾಡಿ ಅಂಗಡಿಯೊಳಗೆ ನುಗ್ಗಿದ್ದಾರೆ.

ಕಳ್ಳರ ಕೈಚಳಕದ ದೃಶ್ಯಗಳು ಅಂಗಡಿ ಹೊರಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಶಾಪ್ನಲ್ಲಿ ಐಫೋನ್ಗಳನ್ನೇ ಹೆಚ್ಚಾಗಿ ಕದ್ದಿರುವುದು ತಿಳಿದು ಬಂದಿದೆ. ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ನಾಲ್ವರು ಕಳ್ಳರು ಮುಂಜಾನೆ 5.30 ರ ಸಮಯದಲ್ಲಿ ದುಬಾರಿ ಐಫೋನ್ಗಳನ್ನು ಚೀಲಕ್ಕೆ ತುಂಬಿಕೊಂಡು ಸುಮಾರು 39 ಐಫೋನ್ಗಳನ್ನು ಹಾಗೂ ಇತರ ಒನ್ ಪ್ಲಸ್, ಒಪ್ಪೋ ಮತ್ತು ರಿಯಲ್ ಮಿ ಫೋನ್ಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ.

39 ಐಫೋನ್ ಸೇರಿ 33 ಲಕ್ಷ ರೂ. ಮೌಲ್ಯದ 60 ಮೊಬೈಲ್‌ಗಳನ್ನು ಕದ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications