ಆನೆನೂ ಸ್ಮೋಕಿಂಗ್ ಮಾಡುತ್ತೆ? ಈ ಸುದ್ದಿ ಓದಿ !

ಮೈಸೂರು, ಮಾರ್ಚ್ 27 : ಆನೆಯೊಂದು ಧೂಮಪಾನ ಮಾಡಿದ ತೆರನಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೌದು, ಗಜವೊಂದು ಹೊಗೆ ಉಗುಳುವಂತೆ ಕಾಣುವ ವಿಡಿಯೊ ತುಣುಕನ್ನು ವೈಲ್ಡ್‌ ಲೈಫ್ ಕನ್ಸರ್ವೇಷನ್ ಸೊಸೈಟಿ ಇಂಡಿಯಾ ತನ್ನ ವೆಬ್‌ ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ತಮಾಷೆಯಾಗಿ ಕಾಣಿಸುವ ಈ ವಿಡಿಯೊವನ್ನು ನಾಲ್ಕೇ ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಏನಿದು ಘಟನೆ : ಮೈಸೂರಿನಿಂದ 50 ಕಿ.ಮಿ ದೂರದಲ್ಲಿರೋ ನಾಗರ ಹೊಳೆ ಅಭಯಾರಣ್ಯದಲ್ಲಿ ಈ ದೃಶ್ಯ ಸೆರೆಯಾಗಿದೆ. ವನ್ಯಜೀವಿ ಸಂರಕ್ಷಣಾ ಅಧಿಕಾರಿ ವಿನಯ್ ಕುಮಾರ್ ಎಂಬವರು ಸೆರೆಹಿಡಿದಿದ್ದಾರೆ. ಈ ಘಟನೆ ಕಳೆದ ವರ್ಷ ಏಪ್ರಿಲ್ ನಲ್ಲಿ ನಡೆದಿದ್ದು, ಮಾರ್ಚ್ 20ರಂದು ಆ ವಿಡಿಯೋವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

video goes viral while elephant smokes, It is true?

ಆನೆ ತನ್ನ ಸೊಂಡಿಲಿನಿಂದ ಏನೋ ಒಂದು ವಸ್ತುವನ್ನು ನೆಲದಿಂದ ಹೆಕ್ಕಿ ತನ್ನ ಬಾಯೊಳಗೆ ಇಡುತ್ತದೆ. ಈ ವೇಳೆ ಧಮ್ ಎಳೆದಂತೆ ಬಾಯಿಂದ ಹೊಗೆ ಹೊರಬರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಕಾಣುವ ಹೆಣ್ಣಾನೆಗೆ ಸುಮಾರು 30-35 ವರ್ಷ ವಯಸ್ಸಾಗಿರಬಹುದೆಂದು ವಿನಯ್ ಕುಮಾರ್ ತಿಳಿಸಿದ್ದಾರೆ.

video goes viral while elephant smokes, It is true?

ಇದ್ದಿಲಿನ ಹೊಗೆ ಉಗುಳಿದ್ದಷ್ಟೇ ! ಬೆಂಕಿ ಆರಿದ್ದ ಪ್ರದೇಶದಲ್ಲಿ ಸುಮಾರು ಹೆಣ್ಣಾನೆ ಇದ್ದಿಲನ್ನು ತಿನ್ನುತ್ತಿತ್ತು. ಇದ್ದಿಲನ್ನು ಸೊಂಡಿಲಿನ ಮೂಲಕ ತುರುಕಿಕೊಳ್ಳುವಾಗ ಬಾಯಿಯನ್ನು ಸೇರುತ್ತಿದ್ದ ಬೂದಿಯನ್ನು ಅದು ಹೊರಗೆ ಹಾಕುತ್ತಿತ್ತು. ದೂರದಿಂದ ನೋಡಿದಾಗ ಈ ದೃಶ್ಯ ಆನೆ ಧೂಮಪಾನ ಮಾಡಿ ಹೊಗೆ ಉಗುಳಿದಂತೆಯೇ ಕಾಣುತ್ತಿತ್ತು. ಕುಚೋದ್ಯಕ್ಕಾಗಿ ನಾನು ಈ ದೃಶ್ಯವನ್ನು ಸೆರೆ ಹಿಡಿದೆ ಎನ್ನುತ್ತಾರೆ ದೃಶ್ಯ ಸೆರೆ ಹಿಡಿದ ವಿನಯ್ ಕುಮಾರ್. ಒಟ್ಟಾರೆ ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+