ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಕಬಿನಿಯಲ್ಲಿ ಆನೆ ದಾಳಿ- ಕೂದಲೆಳೆ ಅಂತರದಲ್ಲಿ ಜೀಪ್ ಪಾರು

|
Google Oneindia Kannada News

ಮೈಸೂರು ಸೆಪ್ಟೆಂಬರ್ 9: ಕಬಿನಿ ಸಫಾರಿ ವೇಳೆ ಆನೆಯೊಂದು ಜೀಪ್ ಮೇಲೆ ದಾಳಿಗೆ ಮುಂದಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆ ದಾಳಿಗೆ ಹೆದರಿ ಜೀಪ್ ಚಾಲಕ ಹಿಂಬದಿಯಾಗಿ ಜೀಪ್ ಚಲಾಯಿಸಿದ್ದಾನೆ. ಆನೆ ವೇಗದಲ್ಲಿಯೇ ಹಿಂಬದಿಯಲ್ಲಿ ಜೀಪ್ ಚಲಾಯಿಸಿದ್ದರಿಂದ ಕೊಂಚ ದೂರ ಓಡಿಬಂದ ಆನೆ ವಾಪಸ್ ಹೋಗಿದೆ. ಕೋಪಗೊಂಡ ಆನೆಯಿಂದ ಕೂದಳೆಲೆಯಲ್ಲಿ ಅಂತರದಲ್ಲಿ ಜೀಪ್ ಪಾರಾಗಿದೆ. ಆನೆಯ ಓಟದಲ್ಲಿ ಕೊಂಚ ವೇಗ ಪಡೆದುಕೊಂಡಿದ್ದರು ಅಥವಾ ಜೀಪ್‌ನ ವೇಗ ಕಡಿಮೆಯಾಗಿದ್ದರೂ ಸಹ ಅಪಾಯ ಕಟ್ಟಿಟ್ಟಬುತ್ತಿಯಾಗಿತ್ತು. ಅದೃಷ್ಟವಶಾತ್ ಆನೆ ಕೊಂಚ ದೂರ ಓಡಿ ವಾಪಾಸ್‌ ಹೋಗಿದೆ. ಜೀಪಿನಲ್ಲಿದ್ದ ಪ್ರಯಾಣಿಕರು ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದು ಭೀತಿ ಹುಟ್ಟಿಸುವಂತಿದೆ.

ಆನೆಗೆ ಕೋಪ ಬಂದರೆ ಅದು ಬಿಡುವ ಮಾತಿಲ್ಲ. ಅದರ ದಾಳಿಗೆ ಸಿಕ್ಕರೆ ಉಳಿಸುವ ಮಾತೇ ಇಲ್ಲ. ಹೀಗಾಗಿ ಆನೆಯ ಕೋಪಕ್ಕೆ ಗುರಿಯಾಗಲು ಯಾರೂ ಬಯಸುವುದಿಲ್ಲ. ಆದರೂ ಕೆಲವೊಂದು ಬಾರಿ ಪ್ರಯಾಣಿಕರ ಹಿಂಸೆಯಿಂದಲೂ, ವಾಹನಗಳ ಕಿರಿಕಿರಿಗೂ ಆನೆಗಳು ಕೋಪಗೊಂಡುಬಿಡುತ್ತವೆ. ಇಂತಹ ಹಲವಾರು ದೃಶ್ಯಗಳು, ಪ್ರಾಣಕ್ಕೆ ಕುತ್ತು ತಂದ ಘಟನೆಗಳು ಸಂಭವಿಸಿರುವುದು ಇದೆ.

ವಿಶ್ವ ಆನೆ ದಿನ: ದೈತ್ಯ, ಸಂವೇದನಾಶೀಲ ಪ್ರಾಣಿ ಬಗ್ಗೆ ತಿಳಿಯಿರಿವಿಶ್ವ ಆನೆ ದಿನ: ದೈತ್ಯ, ಸಂವೇದನಾಶೀಲ ಪ್ರಾಣಿ ಬಗ್ಗೆ ತಿಳಿಯಿರಿ

ಕಬಿನಿ ಹಿನ್ನೀರು ಅರಣ್ಯ ಸಫಾರಿಯು ಕಬಿನಿ ನದಿಯಲ್ಲಿ ಅರಣ್ಯ ಸಂಚಾರಿ ಅನುಭವ ನೀಡುತ್ತದೆ. ಇಲ್ಲಿ ಕರ್ನಾಟಕ ಅರಣ್ಯ ಇಲಾಖೆ ಎರಡು ತರಹದ ಸಫಾರಿಗಳನ್ನು ನಡೆಸುತ್ತದೆ. ಒಂದು- ಜೀಪ್ ಸಫಾರಿ ಹಾಗೂ ಎರಡು - ಕಬಿನಿ ನದಿಯಲ್ಲಿ ದೋಣಿ ಸಫಾರಿ. ದೋಣಿ ಸಫಾರಿಯ ಅವಧಿ 90 ನಿಮಿಷದ್ದಾಗಿದೆ ಹಾಗೂ ಪ್ರವಾಸಿಗರು ಆನೆಗಳು ನದಿಯ ದಡದಲ್ಲಿ ಮಣ್ಣಿನ ಸ್ನಾನ ಮಾಡುವುದನ್ನು ನೋಡಬಹುದು, ಅಪರೂಪದ ಪಕ್ಷಿಗಳಾದ - ಕಾರ್ಮೋರಂಟ್, ಕೊಕ್ಕರೆಗಳನ್ನು, ಡಾರ್ಟರ್‌ಗಳನ್ನು ಜೊತೆಗೆ ಮೊಸಳೆ ಹಾಗೂ ಹಾವುಗಳನ್ನು ನದಿ ದಡದಲ್ಲಿ ಕಾಣಬಹುದು.

Video: Elephant attack in Kabini- Jeep escape

ಇನ್ನೂ ಜೀಪ್ ಸಫಾರಿ ಕೂಡ ಕಾಡಾನೆ ಆನೆ, ಜಿಂಕೆ ಹಾಗೂ ಇನ್ನಿತರ ಪ್ರಾಣಿಗಳನ್ನು ನೋಡಲು ಅದ್ಬುತ ಅನುಭವವನ್ನು ನೀಡುತ್ತದೆ. ರೋಮಾಂಚಕಾರಿ ಅನುಭವವನ್ನು ಪಡೆಯಲು ಬಹುತೇಕರು ಕ್ಯಾಂಪಿಂಗ್‌, ಟ್ರೆಕ್ಕಿಂಗ್‌, ಪ್ಯಾರಾಗ್ಲೈಡಿಂಗ್, ಬಂಗೀ ಜಂಪಿಂಗ್‌ನಂತಹ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಕಬಿನಿ ಸಫಾರಿ ಕೂಡ ಒಂದು.

English summary
A scene of an elephant attacking a jeep during a Kabini safari has gone viral on social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X