ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸೆ.7ರಂದು ರಾಜ್ಯಕ್ಕೆ ಪ್ರಧಾನಿ; ಶೀಘ್ರವೇ ಸಂತ್ರಸ್ತರಿಗೆ ಸಿಹಿ ಸುದ್ದಿ": ಸಿಎಂ

|
Google Oneindia Kannada News

Recommended Video

ಪ್ರಧಾನಿ ಮೋದಿ ಬರ್ತಾರೆ ಒಳ್ಳೆ ಸುದ್ದಿ ತರ್ತಾರೆ ಎಂದ ಯೆಡಿಯೂರಪ್ಪ | Oneindia Kannada

ಮೈಸೂರು, ಆಗಸ್ಟ್ 29: "ಸಂತ್ರಸ್ತರಿಗೆ ಆದಷ್ಟು ಬೇಗ ಸಿಹಿ ಸುದ್ದಿ ಬರಲಿದೆ. ಸೆಪ್ಟೆಂಬರ್ 7ರಂದು ಪ್ರಧಾನಿಗಳು ಕರ್ನಾಟಕಕ್ಕೆ ಬರಲಿದ್ದಾರೆ. ಕೇಂದ್ರಕ್ಕೆ ರಾಜ್ಯದ ಅತಿವೃಷ್ಟಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು" ಎಂದು ಹೇಳಿದರು ಮುಖ್ಯಮಂತ್ರಿ ಯಡಿಯೂರಪ್ಪ.

ಕೆಆರ್ ಎಸ್ ನಲ್ಲಿ ಬಾಗಿನ ಅರ್ಪಿಸಲು ಇಂದು ಮೈಸೂರಿಗೆ ಆಗಮಿಸಿದ್ದ ಯಡಿಯೂರಪ್ಪನವರು, "ಮೊದಲು ಸಂತ್ರಸ್ತರಿಗೆ 10 ಸಾವಿರ ಕೊಡಲಿದ್ದೇವೆ. ಪ್ರಧಾನಿ ಮೋದಿಯವರು ಸೆಪ್ಟೆಂಬರ್ 7ಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ವೇಳೆಯಲ್ಲಿ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಲಾಗುವುದು. ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಲಾಗುವುದು. ಸಂತ್ರಸ್ತರಿಗೆ ಆದಷ್ಟು ಬೇಗ ಕೇಂದ್ರದಿಂದ ಶುಭ ಸುದ್ದಿ ಸಿಗಲಿದೆ" ಎಂದು ಭರವಸೆ ನೀಡಿದರು.

ತುಂಬಿ ತುಳುಕುತ್ತಿರುವ ಕಾವೇರಿಗೆ ಇಂದು ಸಿಎಂ ಬಾಗಿನ ಸಮರ್ಪಣೆತುಂಬಿ ತುಳುಕುತ್ತಿರುವ ಕಾವೇರಿಗೆ ಇಂದು ಸಿಎಂ ಬಾಗಿನ ಸಮರ್ಪಣೆ

ಆದರೆ ಮೂವರು ಡಿಸಿಎಂಗಳ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಕೋಪಗೊಂಡು, ಏನನ್ನೂ ಪ್ರತಿಕ್ರಿಯಿಸದೇ ಹೊರಟರು. ಇದೇ ಸಂದರ್ಭದಲ್ಲಿ, ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡ್ಡಿದ್ದ ಶಾಸಕ ರಾಮದಾಸ್ ಅವರು ಸಿಎಂ ಸ್ವಾಗತಿಸಲು ಆಗಮಿಸಿದರು.

Very Soon Floodvictims Will Get Good News Said Yediyurappa In Mysuru

ಕಾಶ್ಮೀರವಾಯ್ತು, ಬಿಜೆಪಿಯ ಮುಂದಿನ ಗುರಿ ರಾಮಮಂದಿರ ನಿರ್ಮಾಣ: ನಳಿನ್ ಕುಮಾರ್ಕಾಶ್ಮೀರವಾಯ್ತು, ಬಿಜೆಪಿಯ ಮುಂದಿನ ಗುರಿ ರಾಮಮಂದಿರ ನಿರ್ಮಾಣ: ನಳಿನ್ ಕುಮಾರ್

ಕಳೆದ ಕೆಲ ದಿನಗಳಿಂದ ಯಾವುದೇ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಳದೆ ಇದ್ದ ಶಾಸಕ ರಾಮದಾಸ್, ಇಂದು ಮೈಸೂರಿಗೆ ಸಿ.ಎಂ ಆಗಮನದ ಹಿನ್ನಲೆ ಹೆಲಿಪ್ಯಾಡ್ ಬಳಿ ಸ್ವಾಗತಿಸಲು ಬಂದರು. ನಂತರ ಸಿಎಂ ಜೊತೆ ಚಾಮುಂಡಿ ಬೆಟ್ಟ ಕೆಆರ್ ಎಸ್ ಗೆ ತೆರಳಿದರು.

English summary
"Good news is coming soon for the floodvictims. The Prime Minister will be coming to Karnataka on September 7" said Chief Minister Yeddyurappa in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X