ಕಾರ್ಯ ಗ್ರಾಮದಲ್ಲಿ ಬೂತ್ ಪರಿಶೀಲನೆಗೆ ಬಂದ ವಿ ಸೋಮಣ್ಣಗೆ ಅಡ್ಡಿ: ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ
ವರುಣಾ, ಮೇ 10: ವರುಣಾದಲ್ಲಿ ಅಭ್ಯರ್ಥಿಯಾಗಿರುವ ವಿ ಸೋಮಣ್ಣ ಅವರು ಬೂತ್ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ವಿ ಸೋಮಣ್ಣ ಕಣಕ್ಕಿಳಿದ್ದಾರೆ. ಹೀಗಾಗಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಬುಧವಾರ ಕಾರ್ಯ ಗ್ರಾಮದಲ್ಲಿ ಬೂತ್ ಪರಿಶೀಲನೆಗೆ ಹೋಗಿದ್ದ ಸಂದರ್ಭದಲ್ಲಿ ವಿ ಸೋಮಣ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

ಈ ವೇಳೆ ಹೈಡ್ರಾಮಾ ನಡೆದಿದೆ. ಭೂತ್ ಪರಿಶೀಲನೆಗೆ ವಿ ಸೋಮಣ್ಣ ಹೋಗಿದ್ದಾಗ ನೀವೇಕೆ ಇಲ್ಲಿ ಬಂದಿದ್ದೀರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ವಾತಾವರಣ ಬಿಸಿಯಾಯಿತು. ಆಗ ಅವರೊಂದಿಗೆ ಇದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರ ಘೋಷಣೆ ಕೂಗಿ ಕೇಳಿಬಂದಿತು.
ಮೈಸೂರಿನ 11 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತ ಮತದಾನ ನಡೆಯುತ್ತಿದೆ. ವರುಣಾದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಇದೆ. ಕಾರ್ಯ ಗ್ರಾಮದಲ್ಲಿ ಬೂತ್ ಪರಿಶೀಲನೆಗೆ ವಿ ಸೋಮಣ್ಣ ಹೋಗಿದ್ದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಕೂಡ ಇದ್ದರು. ವಾತಾವರಣ ಬಿಸಿಯಾದಾಗ ವಿ ಸೋಮಣ್ಣ ತಾವೇ ವಾಪಸ್ಸು ಹೋದರು ಎನ್ನಲಾಗಿದೆ.












Click it and Unblock the Notifications