ಈಜಲು ಹೋಗಿ ಮಸಣ ಸೇರಿದ ಮಸಣಾಪುರ ವಿದ್ಯಾರ್ಥಿಗಳು
ಮೈಸೂರು, ಡಿಸೆಂಬರ್, 07: ಕಬಿನಿ ನಾಲೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರದ ಮಸಣಾಪುರ ಗ್ರಾಮದಲ್ಲಿ ಡಿಸೆಂಬರ್ 06ರ ಭಾನುವಾರದಂದು ನಡೆದಿದೆ.
ಹೊಂಗನೂರು ಗ್ರಾಮದ ನಿತಿನ್ (17) ರಮೇಶ್ (17) ಸಾವನ್ನಪ್ಪಿದ ದುರ್ದೈವಿಗಳು. ಈ ವಿದ್ಯಾರ್ಥಿಗಳಿಬ್ಬರು ಮಸಣಾಪುರ ಗ್ರಾಮದ ಪಕ್ಕದಲ್ಲಿರುವ ಕಬಿನಿ ಕಾಲುವೆಯಲ್ಲಿ ಈಜಲು ಹೋಗಿದ್ದಾರೆ. ಈ ಸಂದರ್ಭ ಇಬ್ಬರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ.[ಉತ್ತರಕ್ರಿಯೆ ನಡೆಸಲು ಬಂದ ಮಗ ನೇತ್ರಾವತಿ ನದಿ ಪಾಲಾದ]

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ನಿತಿನ್ ಮತ್ತು ರಮೇಶ್ ಮನೆಗೆ ಹೇಳಿ ನಾಲೆಗೆ ಈಜಲು ಹೋಗಿದ್ದಾರೆ. ಎಷ್ಟೇ ಹೊತ್ತಾದರೂ ಇವರಿಬ್ಬರೂ ಮನೆಗೆ ಮರಳಿ ಬಂದಿರಲಿಲ್ಲ. ಪೋಷಕರು ಗಾಬರಿಗೊಂಡಾಗ ಇವರಿಬ್ಬರು ಕಬಿನಿ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.[ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!]
ಮಕ್ಕಳು ಮೃತಪಟ್ಟಿರುವ ಘಟನೆ ಪೋಷಕರಿಗೆ ತಿಳಿಯುತ್ತಿದ್ದಂತೆ ನಾಲೆ ಬಳಿ ಜನರು ತೆರಳಿ ದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಈ ಸಂದರ್ಭದಲ್ಲಿ ಹೆತ್ತಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications