ಮೈಸೂರು: ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು
ಮೈಸೂರು, ಡಿಸೆಂಬರ್, 09: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇಬ್ಬರು ವಿದ್ಯಾರ್ಥಿಗಳಿಬ್ಬರು ಕಬಿನಿ ಹೊಳೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದ ಘಟನೆ ಇನ್ನೂ ಮರೆಯಾಗಿಲ್ಲ. ಇದೀಗ ಮತ್ತೊಂದು ಘಟನೆ ಸಂಭವಿಸಿದೆ.
ಕಬಿನಿ ಹೊಳೆಯಲ್ಲಿ ಈಜಲು ತೆರಳಿದ ಶಿವಕುಮಾರ್ (20) ಮತ್ತು ಮತ್ತೊಬ್ಬ ವಿದ್ಯಾರ್ಥಿ ನೀರು ಪಾಲಾದ ಘಟನೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ಮಲ್ಲನ ಮೂಲೆ ಮಠದ ಸಮೀಪ ಬುಧವಾರ ನಡೆದಿದ್ದು, ಇನ್ನೊಬ್ಬ ವಿದ್ಯಾರ್ಥಿಯ ಶವ ಪತ್ತೆಯಾಗಿಲ್ಲ.[ಈಜಲು ಹೋಗಿ ಮಸಣ ಸೇರಿದ ಮಸಣಾಪುರ ವಿದ್ಯಾರ್ಥಿಗಳು]

ನೀರು ಪಾಲಾದ ಇಬ್ಬರು ವಿದ್ಯಾರ್ಥಿಗಳು ದೇವನೂರಿನ ಡಿಪ್ಲೊಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಸ್ ಕ್ಯಾಂಪಸ್ ಗೆ ಬಂದಿದ್ದ ಅವರು ಬುಧವಾರ ಸಂಜೆ 5ರ ವೇಳೆಯಲ್ಲಿ ಕಬಿನಿ ಹೊಳೆಯಲ್ಲಿ ಈಜಲು ಹೋಗಿದ್ದಾರೆ.[ ಶಿವಮೊಗ್ಗದ ಬಾಲಕರು ತುಂಗೆ ಪಾಲು]
ಈಜಲು ಹೋಗಿ ಮೃತಪಟ್ಟ ಇಬ್ಬರಲ್ಲಿ ಶಿವಕುಮಾರ್ ಎಂಬಾತ ಮೈಸೂರು ತಾಲೂಕು ಕಡಕೊಳ ಸಮೀಪದ ಕೆ.ಎಂ. ಹುಂಡಿಯ ನಿವಾಸಿಯಾದ ಕೆಂಡಪ್ಪರವರ ಮಗ ಎಂದು ತಿಳಿದು ಬಂದಿದೆ. ಮತ್ತೊಬ್ಬ ವಿದ್ಯಾರ್ಥಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದ್ದು, ಇನ್ನೂ ಮೃತದೇಹಗಳು ಪತ್ತೆಯಾಗಿಲ್ಲ.












Click it and Unblock the Notifications