ಮೈಸೂರು ಅರಮನೆ ಇಬ್ಬರು ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯ
ಮೈಸೂರು, ಅಕ್ಟೋಬರ್ 17 : ಮೈಸೂರು ಅರಮನೆಯ ಇಬ್ಬರು ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಅರಮನೆ ಆಯುಧಪೂಜೆ, ವಿಜಯದಶಮಿ ಆಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೊನೆಯ ತಂಗಿ ವಿಶಾಲಾಕ್ಷಿದೇವಿ ಮತ್ತು ರಾಜಮಾತೆ ಪ್ರಮೋದಾವೇವಿ ಒಡೆಯರ್ ತಾಯಿ ಪುಟ್ಟ ಚಿನ್ನಮ್ಮಣ್ಣಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ.
ಮೈಸೂರು ರಾಜವಂಶಸ್ಥೆ ವಿಶಾಲಾಕ್ಷಿದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ಪರಿಸ್ಥಿತಿ ಗಂಭೀರವಾಗಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ (86) ಅವರ ಆರೋಗ್ಯದಲ್ಲೂ ಏರುಪೇರಾಗಿದೆ. ಅವರನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ತಿಂಗಳುಗಳ ಹಿಂದೆಯೂ ಸಹ ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಚಿನ್ನಮ್ಮಣ್ಣಿ ಅವರನ್ನು ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇಬ್ಬರ ಅನಾರೋಗ್ಯ ಹಿನ್ನಲೆಯಲ್ಲಿ ಅರಮನೆ ಆಯುಧಪೂಜೆ, ವಿಜಯದಶಮಿ ಆಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ.












Click it and Unblock the Notifications