• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿವಿಎಸ್ ಮೋಟರ್ಸ್ ಟ್ರಸ್ಟಿನಿಂದ 10 ಲಕ್ಷ ಮಾಸ್ಕ್ ವಿತರಣೆ ಗುರಿ

|

ಮೈಸೂರು, ಏಪ್ರಿಲ್ 3, 2020: ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ (ಎಸ್‍ಎಸ್‍ಟಿ) ಎಂಬುದು ಟಿ.ವಿ.ಎಸ್ ಮೋಟಾರ್ ಕಂಪನಿಯ ಸಾಮಾಜಿಕ ಸೇವಾ ವಿಭಾಗವಾಗಿದ್ದು, ಇಂದು ಸುಮಾರು 10,000ಕ್ಕೂ ಅಧಿಕ ಮಾಸ್ಕ್ ಗಳನ್ನು ಮತ್ತು 3,000ಕ್ಕೂ ಅಧಿಕ ಗ್ಲೌಸ್‍ಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ವೆಂಕಟೇಶ್ ಅವರಿಗೆ ಹಸ್ತಾಂತರಿಸಿತು.

   ಮೂಕ ಪ್ರಾಣಿಗಳಿಗೆ ನೇರವಾದ ಕನ್ನಡದ ಯುವಕರು | Oneindia Kannada

   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಯಲ್ಲಿ ಇವುಗಳನ್ನು ಹಸ್ತಾಂರಿಸಲಾಗಿದ್ದು, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರೂ ಈ ಸಂದರ್ಭದಲ್ಲಿದ್ದರು. 10 ಲಕ್ಷ ಮಾಸ್ಕ್ ಗಳನ್ನು ಅಗತ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಆರೋಗ್ಯ ಸೇವಾ ಸಿಬ್ಬಂದಿ, ಪೊಲೀಸರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಕೋವಿಡ್-19 ರೋಗ ಹಬ್ಬದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಸ್ಥೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದೆ.

   ಈ ನಡುವೆ ಮೈಸೂರಿನಲ್ಲಿ ಕುಂಚ ಕಲಾವಿದರು ಬೃಹತ್ ಕೊರೋನಾ ಚಿತ್ರ ಬರೆದು ಜಾಗೃತಿ ಮೂಡಿಸಿದ್ದಾರೆ. ಕೆ ಆರ್ ನಗರದ ಮುಖ್ಯ ರಸ್ತೆಯಲ್ಲಿ ಚಿತ್ರ ಬರೆದರು. ಕೆ ಆರ್ ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಜು ನೇತೃತ್ವದಲ್ಲಿ ಜಾಗೃತಿ ಮೂಡಿಸಿದ ಕಲಾವಿದರು ಮನೆಯಲಿರಿ ಆರೋಗ್ಯವಾಗಿರಿ ಎಂದು ಮನವಿ ಮಾಡಿದರು. ಹೊರಗೆ ಬಂದರೆ ನೀನು ನಿನ್ನ ಮನೆಗೆ ಬರುವೆ ನಾನು ಎಂದು ಜಾಗೃತಿ ಮೂಡಿಸಿ ಚಿತ್ರ ರಚಿಸಿ ಯಾರೂ ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಿದರು.

   English summary
   TVS Services trust(SST) today ditributed masks to District Health Officier Dr R Venkatesh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X