ಭಿಕ್ಷೆ ಬೇಡಿ ಮೊಮ್ಮಗಳನ್ನು ಕಿಕ್ ಬಾಕ್ಸರ್ ಮಾಡಿದ ಮಂಗಳಮುಖಿ!
ಮೈಸೂರು, ಜನವರಿ 09; ಜೀವನದಲ್ಲಿ ಆತ್ಮವಿಶ್ವಾಸ, ಸಾಧಿಸುವ ಛಲವಿದ್ದರೆ ಏನ್ನನ್ನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮೈಸೂರಿನ ಮಂಗಳಮುಖಿಯೊಬ್ಬರು ಸಾಕ್ಷಿಯಾಗಿದ್ದಾರೆ. ತಾವು ಭಿಕ್ಷೆ ಬೇಡಿ ಬಂದ ಹಣದಲ್ಲಿ ಮೊಮ್ಮಗಳನ್ನು ಸಾಕಿ, ಬೆಳೆಸುವ ಜೊತೆಗೆ ಆಕೆಯನ್ನು ಕಿಕ್ ಬಾಕ್ಸರ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೂ ಅಜ್ಜಿಯ ಕನಸಿನಂತೆ ಕಿಕ್ ಬಾಕ್ಸಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡಿರುವ ಬಾಲಕಿ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ.
ಮೈಸೂರಿನ ಮಂಗಳಮುಖಿಯೊಬ್ಬರು ತಾವು ಭಿಕ್ಷೆ ಬೇಡಿ ಬಂದ ಹಣದಲ್ಲಿ ಮೊಮ್ಮಗಳನ್ನು ಸಾಕಿ, ಬೆಳೆಸುವ ಜೊತೆಗೆ ಆಕೆಯನ್ನು ಕಿಕ್ ಬಾಕ್ಸರ್ ಮಾಡಿದ್ದಾರೆ. #Mysuru #MysuruNews #Kickboxing pic.twitter.com/XSBsuSu8p3
— oneindiakannada (@OneindiaKannada) January 9, 2022
ಮೈಸೂರಿನ ಅಕ್ರಂ ಪಾಷ ಅಲಿಯಾಸ್ ಶಬನಾ ಎಂಬುವರೇ ಮಂಗಳಮುಖಿಯಾಗಿದ್ದು, ಭಿಕ್ಷೆ ಬೇಡಿ ಬದುಕು ಸಾಗಿಸುವ ಇವರು ಅದೇ ಹಣದಲ್ಲಿ ತಮ್ಮ ಮೊಮ್ಮಗಳು ಬೀಬಿ ಫಾತಿಮಾ ಎಂಬಾಕೆಗೆ ಕಿಕ್ ಬಾಕ್ಸಿಂಗ್ ತರಬೇತಿ ನೀಡಿದ್ದಾರೆ.

ಅಜ್ಜಿಯ ಕನಸಿನಂತೆ ಕಿಕ್ ಬಾಕ್ಸಿಂಗ್‌ನಲ್ಲಿ ಮೊದಲ ಹೆಜ್ಜೆಯಲ್ಲಿ ಯಶಸ್ಸು ಸಾಧಿಸಿರುವ 15 ವರ್ಷದ ಫಾತಿಮಾ, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ 'ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ 2021 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅಜ್ಜಿಯ ಆಸೆಯನ್ನು ಇಮ್ಮಡಿಗೊಳಿಸಿದ್ದಾರೆ.
ಮೈಸೂರಿನ ಸಂತ ಅಂಥೋಣಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬೀಬಿ ಫಾತಿಮಾ, ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಳೆ. ಕಠಿಣ ಪರಿಶ್ರಮ, ಸಾಧಿಸುವ ಛಲದೊಂದಿಗೆ ಕಿಕ್ ಬಾಕ್ಸಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡುವ ಹಂಬಲ ಹೊಂದಿರುವ ಫಾತಿಮಾ, ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾಳೆ. ಮೊದಲ ಪ್ರಯತ್ನದಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿರುವ ಈಕೆ ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂಬ ಆಶಯ ಹೊಂದಿದ್ದಾರೆ.
ಆದರೆ ಎಲ್ಲ ಸಾಧಕರಿಗೆ ಎದುರಾದಂತೆ ಈಕೆಯಯ ಸಾಧನೆಗೂ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಇದರಲ್ಲಿ ಬಹುಮುಖ್ಯವಾಗಿ ಈಕೆಯ ಸಾಧನೆಗೆ ಸದ್ಯ ಆರ್ಥಿಕ ಸಂಕಷ್ಟ ಎದುರಾಗಿದೆ. ಭಿಕ್ಷೆ ಬೇಡಿದ ಹಣದಲ್ಲಿ ಫಾತಿಮಾಳಿಗೆ ವಿದ್ಯಾಭ್ಯಾಸ, ಕಿಕ್ ಬಾಕ್ಸಿಂಗ್ ತರಬೇತಿ ಕೊಡಿಸುತ್ತಿರುವ ಈಕೆಯ ಅಜ್ಜಿಗೆ, ಮೊಮ್ಮಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು, ಕರೆದುಕೊಂಡು ಹೋಗುವ ಹಣಕಾಸಿನ ಸಮಸ್ಯೆಗ ಎದುರಾಗಿದೆ. ಹೀಗಾಗಿ ಸರ್ಕಾರ ಅಥವಾ ದಾನಿಗಳು ಫಾತಿಮಾಳಿಗೆ ಆರ್ಥಿಕ ನೆರವು ನೀಡಿದರೆ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಪಟುವಾಗಿ ಬೆಳೆಯಲು ಸಹಾಯವಾಗಲಿ ಎಂದು ಫಾತಿಮಾ ಮನವಿ ಮಾಡಿಕೊಂಡಿದ್ದಾಳೆ.
ಇನ್ನೂ ತಮ್ಮ ಸಾಧನೆಗೆ ನೆರವಾದವರಿಗೂ ಕೃತಜ್ಞತೆ ತಿಳಿಸಿರುವ ಬೇಬಿ ಫಾತಿಮಾ, ತಮ್ಮ ಸಾಧನೆಗೆ ಸಹಾಯ ಮಾಡಿದ ಡಾ.ರಾಘವೇಂದ್ರ ಪ್ರಸಾದ್, ಸಪ್ತಪದಿ ಫೌಂಡೇಷನ್ ಡಾ. ಕೆ. ಶ್ರೀನಿವಾಸ್, ವೈ. ಶ್ರೀನಿವಾಸ್, ಮಧು ಹಾಗೂ ಎಲ್ಲಾ ಮೈಸೂರು ಜನತೆಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ತಮ್ಮ ಸಹಾಯ ಮತ್ತು ಹಾರೈಕೆ ಇದೇ ರೀತಿ ಇರಲಿ ಎಂದು ಮೈಸೂರಿಗರನ್ನ ಕೋರಿದ್ದು, ತಾನು ಗೆದ್ದಿರುವ ಚಿನ್ನದ ಪದಕವನ್ನು ಮೈಸೂರಿನ ಜನತೆಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications