ಮೂರು ಮಂಗಗಳ ಸಾವು; ಮೈಸೂರಿಗೀಗ ಮಂಗನ ಕಾಯಿಲೆ ಭೀತಿ

ಮೈಸೂರು, ಏಪ್ರಿಲ್ 20: ಕೊರೊನಾದಿಂದ ಕಷ್ಟದಲ್ಲಿರುವ ಮೈಸೂರಿನಲ್ಲಿ ಇದೀಗ ಮಂಗನ ಕಾಯಿಲೆಯ ಭೀತಿಯೂ ಆವರಿಸಿದೆ. ಕೆಲವೇ ದಿನಗಳ ಹಿಂದೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿತ್ತು. ಇದೀಗ ಮಂಗನ ಕಾಯಿಲೆ ಶಂಕೆ ವ್ಯಕ್ತಗೊಂಡಿರುವುದು ಜನರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಮೈಸೂರಿನ ಹಡಜನ ಗ್ರಾಮದಲ್ಲಿ ಮೂರು ಕೋತಿಗಳು ಸತ್ತುಬಿದ್ದಿವೆ. ಹಡಜನ ಗ್ರಾಮದ ಓಶೋ ಆಶ್ರಮದಲ್ಲಿ ಮೂರು ಕೋತಿಗಳು ಸತ್ತು, ಮತ್ತೂ ಎರಡು ಮಂಗಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಮಂಗನ ಕಾಯಿಲೆ ಇರಬಹುದೇ ಎಂಬ ಅನುಮಾನ ಹುಟ್ಟುಹಾಕಿದೆ.

Three Monkeys Death Triggers Monkey Fever Fear In Mysuru

ಮಂಗಗಳ ಸಾವಿನ ಸಂಬಂಧ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಆರೋಗ್ಯ ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ನಡುವೆ ಈ ವಿದ್ಯಮಾನ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+