Get Updates
Get notified of breaking news, exclusive insights, and must-see stories!

ಟಿ.ನರಸೀಪುರದಲ್ಲಿ ಬೈಕ್ ಅಪಘಾತ; ಬಸ್ ಗೆ ಕಾಯುತ್ತಿದ್ದ ಮೂವರ ಸಾವು

ಮೈಸೂರು, ಫೆಬ್ರವರಿ 21: ಬಸ್​ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಬೈಕ್ ಹರಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಕಡೆಯಿಂದ ವೇಗವಾಗಿ ಬಂದ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಡ್ಡಲಾಗಿ ಬಂದ ಮೊಪೆಡ್​ಗೆ ಗುದ್ದಿದ್ದಾನೆ. ಆಗ ಬಸ್​ಗೆ ಕಾಯುತ್ತಿದ್ದವರ ಮೇಲೆ ಬೈಕ್ ಹರಿದು ಒಟ್ಟು ಮೂವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್​ ಸವಾರ ಸಾಯಿಮಾನ್ ಸೇಠ್​ ವೇಗವಾಗಿ ಬರುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Three Killed In Bike Accident Near T Narasipura

ಮೃತರನ್ನು ಚಿಕ್ಕಣ್ಣಮ್ಮ, ಬಸವರಾಜು ಹಾಗೂ ದಾಸಪ್ಪ ಎಂದು ಗುರುತಿಸಲಾಗಿದೆ. ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಸವಾರನ ಸ್ಥಿತಿಯೂ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತಕ್ಕೆ ಕಾರಣವಾದ ವ್ಯಕ್ತಿ ಕೇರಳದವ ಎನ್ನಲಾಗಿದೆ. ಈ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+