ಮೈಸೂರು ವಿವಿಯ 3 ಚಿತ್ರಗಳು ಪ್ರಕೃತಿ ಸಾಕ್ಷ್ಯ ಚಲನಚಿತ್ರೋತ್ಸವಕ್ಕೆ ಆಯ್ಕೆ
ಮೈಸೂರು, ಡಿಸೆಂಬರ್. 19 : ರಾಷ್ಟ್ರೀಯ ಪ್ರಕೃತಿ ಸಾಕ್ಷ್ಯ ಚಿತ್ರಗಳ 2016 ಚಲನಚಿತ್ರೋತ್ಸವಕ್ಕೆ ಮೈಸೂರು ವಿವಿಯ 3 ಪ್ರಕೃತಿ ಸಾಕ್ಷ್ಯ ಚಿತ್ರಗಳು ಆಯ್ಕೆಯಾಗಿವೆ.
ಇದೆ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯದ ಮೂರು ಚಿತ್ರಗಳು ಕರ್ನಾಟಕದಿಂದ ಆಯ್ಕೆಯಾಗಿವೆ. ಮೈಸೂರು ವಿವಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಿಂದ ಈ ಮೂರು ಚಿತ್ರಗಳು ಸಾಕ್ಷ್ಯ ಚಿತ್ರಗಳು ನಿರ್ಮಿಸಲ್ಪಟ್ಟಿವೆ.
ಇದೆ ಡಿಸೆಂಬರ್ 28 ರಿಂದ 30ರವರೆಗೆ ಚಂಡೀಗಡದ ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಟೆಕ್ನಿಕಲ್ ಟೀಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಅಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

ಮೈಸೂರು ವಿವಿಯ ಪರಿಸರ ವಿಭಾಗದಿಂದ ನಿರ್ಮಿಸಲ್ಪಟ್ಟ 'ಡಿಜಿಡಬ್ಲ್ಯೂಟಿ-ಎ ಕಾಸ್ ಫಾರ್ ಕನ್ಸರ್ನ್', 'ಗುರುಕಾಕ್ - ದಿ ಗ್ರೀನ್ ಮ್ಯಾನ್' ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹೆಜ್ಜೆ ಟೆಕ್ನಾಲಜಿ ಮೀಟ್ಸ್ ಬಂಡಿಪುರ ವೈಲ್ಡ್‍ಲೈಫ್ ಸಾಕ್ಷ್ಯ ಚಿತ್ರಗಳೇ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.












Click it and Unblock the Notifications