ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರೆಗೂ ಮುನ್ನ ಮೈಸೂರಿನಲ್ಲಿ ಝಗಮಗಿಸಲಿವೆ 2,540 ಎಲ್ಇಡಿ ಬಲ್ಬ್ ಗಳು

|
Google Oneindia Kannada News

ಮೈಸೂರು, ಜುಲೈ 9: ನಾಡಹಬ್ಬ ದಸರಾ ಆರಂಭಕ್ಕೂ ಮುನ್ನವೇ ಅರಮನೆ ನಗರಿಯಲ್ಲಿ 2,540 ಎಲ್ಇಡಿ ಬಲ್ಬ್ ಗಳು ಬೆಳಗಲಿವೆ ಎಂದು ಸಹಾಯಕ ಆಯುಕ್ತ ಶಿವಾನಂದ ಮೂರ್ತಿ ತಿಳಿಸಿದ್ದಾರೆ.

 ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು

ಈ ಕುರಿತು ಮಾಹಿತಿ ನೀಡಿರುವ ಅವರು, ಎಲ್ಇಡಿ ಬಲ್ಬ್ ಅಳವಡಿಕೆ ಹಿನ್ನೆಲೆಯಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಂಸ್ಥೆಯಿಂದ ಈಗಾಗಲೇ ಸರ್ವೆ ಮಾಡಿಸಲಾಗಿದೆ. ನಗರದಲ್ಲಿ ಒಟ್ಟು 73,548 ಕಂಬಗಳಿವೆ. ಇವುಗಳಲ್ಲಿ 22,488 ಕಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. 8,848 ಕಂಬಗಳಲ್ಲಿ ಈಗಾಗಲೇ ಎಲ್ಇಡಿ ಬಲ್ಬ್ ಗಳಿವೆ. 4100 ಕಂಬಗಳಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಲಾಗಿದೆ ಎಂದರು.

There will be 2540 LED bulbs in roads of Mysore before dasara

ಮೊದಲ ಹಂತದಲ್ಲಿ 2,540 ಸಣ್ಣ ಕಂಬಗಳಿಗೆ ದಸರಾ ಬರುವ ಒಳಗೆ 1.40 ಕೋಟಿ ವೆಚ್ಚದಲ್ಲಿ ಬಲ್ಬ್ ಮಾಡಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಈ ಬಾರಿ ದಸರಾ ಮಹೋತ್ಸವಕ್ಕೂ ಮುನ್ನ ವಿಶೇಷ ಆಕರ್ಷಣೆಯಾಗಿ ನಗರದ ಹಲವು ರಸ್ತೆಗಳು ಎಲ್ಇಡಿ ಬಲ್ಬ್ ಗಳಿಂದ ಝಗಮಗಿಸಲಿದ್ದು, ನಗರದ ಅಂದ ಮತ್ತಷ್ಟು ಹೆಚ್ಚಾಗಲಿದೆ.

English summary
There will be 2,540 LED bulbs in roads of Mysore before dasara. This decision has been taken in Mysuru City Corporation meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X