• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಚಲಿಂಗ ದರ್ಶನ ವೇಳಾಪಟ್ಟಿ, ಬಸ್ ಸೌಲಭ್ಯ

By Mahesh
|

ಬೆಂಗಳೂರು, ನ.28: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ ತಲಕಾಡಿನ ಪಂಚಲಿಂಗ ದರ್ಶನ ಉತ್ಸವ ನ.28 ರಂದು ಆರಂಭಗೊಂಡಿದೆ. ಡಿ. 8ರ ತನಕ ನಡೆಯಲಿದೆ. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಒದಗಿದೆ.

ಪ್ರಯುಕ್ತ ಕರಾರಸಾ ನಿಗಮವು ಭಕ್ತಾಧಿಗಳ/ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ನ.27ರಿಂದ ಡಿ.8ರವರೆಗೆ ಬೆಂಗಳೂರಿನ ಮೈಸೂರಿ ರಸ್ತೆ ಬಸ್ ನಿಲ್ದಾಣ, ಕನಕಪುರ, ಮೈಸೂರು, ಮಳವಳ್ಳಿ, ಕೊಳ್ಳೇಗಾಲ, ಟಿ.ನರಸೀಪುರ, ಚಾಮರಾಜನಗರ, ಗುಂಡ್ಲುಪೇಟೆ ಗಳಿಂದ ತಲಕಾಡಿಗೆ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಹಾಗೂ ತಲಕಾಡಿನಲ್ಲಿರುವ ಐದು ಪಂಚಲಿಂಗ ದೇವಾಲಯಗಳಿಗೆ (ವಡೆಯಾಂಡಳ್ಳಿ, ಕಾವೇರಿ ವೃತ್ತ, ಅರ್ಕೇಶ್ವರ ದೇವಸ್ಥಾನ, ಮುಡುಕು ತೊರೆ ನಡುವೆ) ಸಂಪರ್ಕ ಸಾರಿಗೆಗಳ ಸೌಲಭ್ಯವನ್ನು ಕಲ್ಪಿಸಿದೆ. ಸದರಿ ಸಾರಿಗೆಗಳ ಪ್ರಯೋಜನವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳಬಹುದು.

ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನಿಂದ ಕಾವೇರಿ ನದಿ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದೆ. ಕರ್ನಾಟಕ ಮೀಸಲು ಪೊಲೀಸ್ ಪಡೆ ಸ್ನಾನಘಟ್ಟದ ಬಳಿ ಭಕ್ತಾದಿಗಳ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ.

ಪಂಚಲಿಂಗ ದರ್ಶನಕ್ಕಾಗಿ 112 ಕೋಟಿ ರು ಮಂಜೂರಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ವ್ಯಯಿಸಲಾಗಿದೆ. 12 ಕೋಟಿ ದರ್ಶನ ಮಹೋತ್ಸವ ಹಬ್ಬದ ಸಂಭ್ರಮಕ್ಕೆ ಮೀಸಲಿಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ. ಎಲ್ಲೆಲ್ಲಿ ವಾಹನಗಳ ಏಕಮುಖ ಸಂಚಾರ, ಮದ್ಯ ಮಾರಾಟ ನಿಷೇಧ, ಪಂಚಲಿಂಗ ದರ್ಶನ ವೇಳಾಪಟ್ಟಿ ವಿವರ ಮುಂತಾದ ಸುದ್ದಿಗಳನ್ನು ಮುಂದೆ ಓದಿ...

ವಾಹನಗಳ ಏಕಮುಖ ಸಂಚಾರ

ವಾಹನಗಳ ಏಕಮುಖ ಸಂಚಾರ

ದಿನಾಂಕ 24-11-2013 ರಿಂದ 15-12-2013 ರವರಗೆ ಟಿ.ನರಸೀಪುರ ಕಡೆಯಿಂದ ಬರುವ ವಾಹನಗಳಿಗೆ ವಡೆಯಾಂದಹಳ್ಳಿ ಬಸ್ ನಿಲ್ದಾಣ, ಸರಗೂರು ಹ್ಯಾಂಡ್ ಪೋಸ್ಟ್ ಗಳಿಂದ ಬರುವ ವಾಹನಗಳಿಗೆ ತಲಕಾಡಿನ ಹೊರವಲಯದಲ್ಲಿರುವ ಕೆ.ಇ.ಬಿ. ಪವರ್ ಹೌಸ್ ಬಳಿ ಹಾಗೂ ಬೆಳಕವಾಡಿ ಕಡೆಯಿಂದ ಬರುವ ವಾಹನಗಳಿಗೆ ಅರ್ಕೇಶ್ವರ ದೇವಸ್ಥಾನದ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ

ವಡೆಯಾಂದಹಳ್ಳಿ ಸರ್ಕಲ್ ನಿಂದ ತಲಕಾಡು ಮುಖ್ಯ ಸರ್ಕಲ್, ತಲಕಾಡು ಮುಖ್ಯ ಸರ್ಕಲ್‍ನಿಂದ ಬೆಳಕವಾಡಿ ರಸ್ತೆಯ ಅರ್ಕೇಶ್ವರ ದೇವಸ್ಥಾನದವರೆಗೆ, ವಿಜಾಪುರ ಗ್ರಾಮದ ರಸ್ತೆಯಿಂದ - ಕಾಳಬಸವನಹುಂಡಿ ಗ್ರಾಮದ ಮಾರ್ಗ - ಮುಡುಕುತೊರೆ ಬಸ್ ನಿಲ್ದಾಣದವರೆಗೆ ಏಕ ಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಶಿಖಾ ಆದೇಶಿಸಿದ್ದಾರೆ.

ಮದ್ಯ ಮಾರಾಟ ನಿಷೇಧ

ಮದ್ಯ ಮಾರಾಟ ನಿಷೇಧ

ಪಂಚಲಿಂಗ ದರ್ಶನ ಮಹೋತ್ಸವದ ಅಂಗವಾಗಿ ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿರುವ ಕಿರಣ್ ವೈನ್ ಸ್ಟೋರ್, ಲಕ್ಷ್ಮೀಶ್ರೀನಿವಾಸ್ ವೈನ್ ಸ್ಟೋರ್ ಮತ್ತು ಸಮೀಕ್ಷಾ ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ದಿನಾಂಕ 30-11-2013ರ ಮದ್ಯ ರಾತ್ರಿಯಿಂದ ದಿನಾಂಕ 03-12-2013 ರ ಮದ್ಯ ರಾತ್ರಿಯವರೆಗೆ ಮದ್ಯಮಾರಾಟ ಮಾಡುವುದನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಆದೇಶ ಹೊರಡಿಸಿದ್ದಾರೆ. ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಸದರಿ ಮದ್ಯ ಅಂಗಡಿ ಬಾರ್ ಮತ್ತು ರೆಸ್ಟೊರೆಂಟ್ ಮುಚ್ಚುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಪಂಚಲಿಂಗ ದರ್ಶನದ ವೇಳಾಪಟ್ಟಿ

ಪಂಚಲಿಂಗ ದರ್ಶನದ ವೇಳಾಪಟ್ಟಿ

* ನ.28 :ಅಂಕುರಾರ್ಪಣ, ಯಾಗಶಾಲೆ ಪ್ರವೇಶ

* ನ.29 : ಧ್ವಜಾರೋಹಣ, ರಕ್ಷಾಬಂಧನ,ರಾಜಬಲಿ ಪ್ರದಾನ

* ನ.30 : ಪುಷ್ಪಮಂಟಪ ರೋಹಣೋತ್ಸವ

*ಡಿ.01 : ವೃಷಭ ವಾಹನೋತ್ಸವ

*ಡಿ.02 : ಬೆಳಗ್ಗೆ 7.30ಕ್ಕೆ ಮಹಾಭಿಷೇಕ, 9.30 ರಿಂದ ರಾತ್ರಿ 12ರವರೆಗೆ

ಪಂಚಲಿಂಗ ದರ್ಶನ, ರಾತ್ರಿ ಗಜಾರೋಹಣ

*ಡಿ.03 : ಮದ್ದಿವ್ಯಬ್ರಹ್ಮರಥೋತ್ಸವ, ನಟೇಶೋತ್ಸವ

ಹಂಸವಾಹನೋತ್ಸವ

*ಡಿ. 04 : ಶಯನೋತ್ಸವ, ಅಶ್ವಾರೋಹಣ,

ಮಹಾಭೂತಾರೋಹಣ, ಪೂರ್ವಕ ಮೃಗಯಾತ್ರೋತ್ಸವ

*ಡಿ.05 : ತೀರ್ಥಸ್ನಾನ, ತೆಪ್ಪೋತ್ಸವ, ಧ್ವಜಾರೋಹಣ

*ಡಿ.06 : ಮಹಾಭಿಷೇಕ

*ಡಿ.07 : ನಂದೀವಾಹನೋತ್ಸವ

ಕಾರ್ತಿಕ ಮಾಸದಲ್ಲಿ ದರ್ಶನ ಭಾಗ್ಯ

ಕಾರ್ತಿಕ ಮಾಸದಲ್ಲಿ ದರ್ಶನ ಭಾಗ್ಯ

ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬರುವ ಸಂದರ್ಭದಲ್ಲಿ ಸೂರ್ಯ ವೃಶ್ಚಿಕ ಮಾಸದ ಐದನೇ ಸೋಮವಾರ ಅಮಾವಾಸ್ಯೆ ದಿನ ಪಂಚಲಿಂಗ ದರ್ಶನಕ್ಕೆ ನಡೆಯುತ್ತದೆ. ಈ ಪುಣ್ಯಕಾಲ 3,5,7,12,13 ಹೀಗೆ ಎಷ್ಟು ವರ್ಷಗಳ ಅಂತರದಲ್ಲಿ ದರ್ಶನ ಮಹೋತ್ಸವ ನಡೆಯುತ್ತದೆ

ನೀರಿನ ವ್ಯವಸ್ಥೆ, ಸ್ನಾನಘಟ್ಟ

ನೀರಿನ ವ್ಯವಸ್ಥೆ, ಸ್ನಾನಘಟ್ಟ

ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ 10 ಕಡೆಗಳಲ್ಲಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ, 11 ಕಡೆ ತಾತ್ಕಾಲಿಕ ಹಾಗೂ 5 ಕಡೆ ಶಾಶ್ವತ ಶೌಚಾಲಯಗಳ ವ್ಯವಸ್ಥೆ ಮಾಡಲಿದೆ.

1300 ಬಟ್ಟೆ ಬದಲಾಯಿಸುವ ತಾತ್ಕಾಲಿಕ ಹಾಗೂ ಶಾಶ್ವತ ಕೊಠಡಿಗಳ ನಿರ್ಮಾಣ. 4 ಕಡೆಗಳಲ್ಲಿ ತಾತ್ಕಾಲಿಕ ವಾಹನ ನಿಲುಗಡೆ ಪ್ರದೇಶಗಳ ಅಭಿವೃದ್ಧಿ. ಮುಡುಕುತೊರೆ ಗ್ರಾಮದಲ್ಲಿ ಶಾಶ್ವತ ಪ್ರವಾಸಿ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಶಾಶ್ವತ ವಿಶ್ರಾಂತಿಗೃಹ ನಿರ್ಮಾಣ ಮಾಡಬೇಕಿದೆ ಎಂಬ ಕೂಗು ಇದ್ದೇ ಇದೆ.

ವಿದ್ಯುತ್ ಅಲಂಕಾರ

ವಿದ್ಯುತ್ ಅಲಂಕಾರ

ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ, ಎಲ್ಲಾ ದೇವಸ್ಥಾನಗಳ ಒಳಗಡೆ ಸಿ,ಸಿ ಕ್ಯಾಮರಾ ಅಳವಡಿಸುವುದು, ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಆವರನ್ನು ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ಮಾಡುವುದು. ಇದರ ಬಂದೋಬಸ್ತ್‌ಗಾಗಿ 20 ಜನ ಡಿ.ವೈ,ಎಸ್,ಪಿ 60 ಜನ ಇನ್ಸ್‌ಪೆಕ್ಟರ್, 4000 ಪೇದೆಗಳನ್ನು ನೇಮಿಸಲಾಗಿದೆ

ದರ್ಶನ ಮಹೋತ್ಸವ

ದರ್ಶನ ಮಹೋತ್ಸವ

2009ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಿತ್ತು. ಡಿಸೆಂಬರ್ 2 ರಂದು ಬೆಳಗ್ಗೆ 10 ರಿಂದ ರಾತ್ರಿ 12 ರ ತನಕ ವಿಶೇಷ ಪೂಜೆ ಆಯೋಜನೆಗೊಂಡಿದೆ. ಸುಮಾರು ಮೂರುವರೆ ಲಕ್ಷ ಜನ ಭಕ್ತಾದಿಗಳ ನಿರೀಕ್ಷೆಯಿದೆ. ಡಿಸೆಂಬರ್ 7 ರ ತನಕ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು ಜಾರಿಯಲ್ಲಿರುತ್ತದೆ ಎಂದು ವೈದ್ಯನಾಥೇಶ್ವರ ದೇಗುಲದ ಪ್ರಧಾನ ಅರ್ಚಕ ಎನ್ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.

ದರ್ಶನ ಮಹೋತ್ಸವ ಇತಿಹಾಸ

ದರ್ಶನ ಮಹೋತ್ಸವ ಇತಿಹಾಸ

1911,1924,1938,1952,1959,1965,1979,1986,1993 ನಂತರ 2000 ಇಸವಿಯಾದ ಮೇಲೆ ಮೂರನೇ ಬಾರಿಗೆ ಪಂಚಲಿಂಗ ದರ್ಶನ ಮಹೋತ್ಸವ ಆಯೋಜನೆಗೊಂಡಿರುವುದು ವಿಶೇಷ. ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬಂದು ಅದರಲ್ಲೂ ಕಡೆ ಸೋಮವಾರದ ದಿನ ಪೂರ್ಣ ಚಂದಿರನ ಜತೆ ಲಿಂಗರೂಪಿ ಪರಮಶಿವನ ದರ್ಶನ ಪಡೆಯುವುದರಲ್ಲಿ ಭಕ್ತರು ಧನ್ಯತೆ ಕಾಣುತ್ತಾರೆ.

ಪಂಚಲಿಂಗಗಳು

ಪಂಚಲಿಂಗಗಳು

ತಲಕಾಡು ಗ್ರಾಮದಲ್ಲಿರುವ ವೈದ್ಯನಾಥೇಶ್ವರ, ಪಾತಾಳೇಶ್ವರ(ವಾಸುಕೀಶ್ವರ), ಮರಳೇಶ್ವರ(ಸೈಕತೇಶ್ವರ), ವಿಜಯಪುರ ಗ್ರಾಮದಲ್ಲಿರುವ ಅರ್ಕೇಶ್ವರ ಹಾಗೂ ಮುಡುಕುತೊರೆಯಲ್ಲಿರುವ ಮಲ್ಲಿಕಾರ್ಜುನ ಶಿವ ಲಿಂಗಗಳನ್ನು ಏಕಕಾಲಕ್ಕೆ ದರ್ಶನ ಮಾಡುವ ಭಾಗ್ಯ ಭಕ್ತರಿಗೆ ಒದಗಿ ಬಂದಿದೆ.

ದರ್ಶನ ಮಾಡುವ ಕ್ರಮ

ದರ್ಶನ ಮಾಡುವ ಕ್ರಮ

ಗಜರಾಣ್ಯ ಕ್ಷೇತ್ರದಲ್ಲಿ ಒಂದು ದಿನ ಇದ್ದರೆ ಶಿವನ ಸಾನ್ನಿಧ್ಯ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ. ವೈದ್ಯನಾಥೇಶ್ವರ ದೇಗುಲದ ಗೋಕರ್ಣ ತೀರ್ಥ ಕೊಳದಲ್ಲಿ ಮಿಂದು ಶಿವಲಿಂಗಕ್ಕೆ ಚೌಡೇಶ್ವರಿಗೆ ಪೂಜೆ ಸಲ್ಲಿಸಬೇಕು. ಇದಕ್ಕೂ ಮುನ್ನ ಶಕ್ತಿ ಗಣಪತಿಗೆ ನಮಿಸಲೇಬೇಕು.

ಉತ್ತರವಾಹಿನಿಯಲ್ಲಿ ಮಿಂದು ಅರ್ಕೇಶ್ವರ, ಪೂರ್ವ ವಾಹಿನಿಯಲ್ಲಿ ಮಿಂದು ಪಾತಾಳೇಶ್ವರ, ಪಶ್ಚಿಮವಾಹಿನಿಯಲ್ಲಿ ಮಿಂದು ಮಲ್ಲಿಕಾರ್ಜುನ, ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನಿಗೆ ಬಿಲ್ವಪತ್ರೆ, ಅಭಿಷೇಕ ಪೂಜೆ ಸಲ್ಲಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Talakadu Panchalinga Darshana begins from November 28 will end on December 8, nearly three million pilgrims from across the State and the country are expected to converge at Talakadu, the ancient capital of the Gangas which has temples belonging to the earliest period of Karnataka’s history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more