ಕಲಾಮಂದಿರ ಗೋಮಾಂಸ ಪ್ರಕರಣ: ಶೀಘ್ರ ಕ್ರಮಕ್ಕೆ ಸೂಚನೆ
ಮೈಸೂರು, ಜೂನ್ 29: ಇತ್ತೀಚೆಗೆ ಕಲಾಮಂದಿರದ ಮನೆಯಂಗಳದಲ್ಲಿ ಕಾರ್ಯಕ್ರಮವೊಂದರಲ್ಲಿ ಗೋಮಾಂಸವನ್ನು ಸೇವಿಸಲು ಕಾರಣಕರ್ತರಾದವರ ಮೇಲೆ ಶೀಘ್ರವೇ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಸಿ. ಮಹದೇವಪ್ಪ ನಿರ್ದೇಶಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ತಿಳಿಸಿದ್ದಾರೆ.
ಜೂನ್ 25 ರಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುದಾನ ಪಡೆದ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲವರು ಗೋಮಾಂಸ ಸೇವಿಸಿದ್ದರು. ನಿಯಮ ಬಾಹಿರವಾಗಿದೆ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.













Click it and Unblock the Notifications