• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುತ್ತೂರು ಎಂದರೆ ಬರೀ ಜಾತ್ರೆಯಲ್ಲ, ಶೈಕ್ಷಣಿಕತೆಯ ಮಹಾಸಂಗಮ

|

ಹತ್ತೂರೇ ಬೆರಗಾಗಿ ನೋಡುವಂತಹ ಜಾತ್ರೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನದ್ದು. ಇಂದಿನಿಂದ ಆರು ದಿನಗಳ ಕಾಲ ನಡೆಯುವ ಈ ಜಾತ್ರೆ ಬರೀ ಜಾತ್ರೆಯಾಗಿ ಉಳಿಯದೆ ಆಧ್ಯಾತ್ಮಿಕ, ಲೌಕಿಕ, ಶೈಕ್ಷಣಿಕ ಸಂಗಮವಾಗಿ ಹತ್ತು ಹಲವು ವಿಶೇಷತೆಗಳೊಂದಿಗೆ ನಡೆಯುವುದೇ ವಿಶೇಷ.

ವೈಭವದ ಸುತ್ತೂರು ಶಿವರಾತ್ರೀಶ್ವರ ಜಾತ್ರೆಯೊಳಗೊಂದು ಸುತ್ತು...

ಜಾತ್ರೆ ಎಂದರೆ ಸಾಮಾನ್ಯವಾಗಿ ಪೂಜೆ ಪುನಸ್ಕಾರ, ಮೆರವಣಿಗೆ, ರಥೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಸುತ್ತೂರು ಜಾತ್ರೆಯಲ್ಲಿ ಮಾತ್ರ ಇದೆಲ್ಲವನ್ನು ಮೀರಿದ ಕೃಷಿ, ವಿಜ್ಞಾನ, ಶೈಕ್ಷಣಿಕ, ಆರೋಗ್ಯ ಮೇಳಗಳು ನಡೆಯುವುದನ್ನು ಕಾಣಬಹುದಾಗಿದೆ. ಜಾತ್ರೆಯ ಸಂದರ್ಭ ಸುತ್ತೂರು ಶ್ರೀ ಮಠವು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

 ಬಾಡಿಗೆ ಮನೆಯಲ್ಲಿ ಆರಂಭವಾದ ವಿದ್ಯಾರ್ಥಿನಿಲಯ

ಬಾಡಿಗೆ ಮನೆಯಲ್ಲಿ ಆರಂಭವಾದ ವಿದ್ಯಾರ್ಥಿನಿಲಯ

ಪುಟ್ಟ ಹಳ್ಳಿಯಿಂದ ಆರಂಭವಾಗಿ ಪಟ್ಟಣ, ದೇಶ ವಿದೇಶಗಳ ಮಟ್ಟಕ್ಕೆ ಬೆಳೆದು ಜಗದ್ವಿಖ್ಯಾತವಾಗಿ ನಿಂತಿರುವುದು ಸುತ್ತೂರು ಶ್ರೀ ಮಠದ ಸಾಧನೆಯಾಗಿದೆ. ಸುತ್ತೂರು ಶ್ರೀ ಮಠದ ಶೈಕ್ಷಣಿಕ ಸಾಧನೆಗೆ ಸಮನಾಗಿ ನಿಲ್ಲುವ ಮಠ ಮತ್ತೊಂದಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಕಷ್ಟವನ್ನು ಕಂಡು ಹಿಂದಿನ ಜಗದ್ಗುರುಗಳಾಗಿದ್ದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಮೊದಲಿಗೆ ಬಾಡಿಗೆ ಮನೆಯೊಂದರಲ್ಲಿ 1941ರಲ್ಲಿ ಕೇವಲ ಹನ್ನೆರಡು ಮಂದಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಆರಂಭಿಸಿದರು. ಅನ್ನ ಮತ್ತು ಶಿಕ್ಷಣ ದಾಸೋಹದ ಬೀಜ ಬಿತ್ತಿದರು. ಅದು ಮುಂದೆ ಹಲವಾರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ಬೆಳೆದಿದ್ದು ವಿಶೇಷವಾಗಿದೆ.

 ಶಿಕ್ಷಣ ಕಾಶಿಯಾಗಿ ರೂಪುಗೊಂಡ ಸುತ್ತೂರು ಮಠ

ಶಿಕ್ಷಣ ಕಾಶಿಯಾಗಿ ರೂಪುಗೊಂಡ ಸುತ್ತೂರು ಮಠ

ಇದೀಗ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಕಾಲದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ ಎಂಬ ನಾಮಾಂಕಿತದಲ್ಲಿ ಬೆಳೆದು ನಿಂತಿದೆ. ಜೆ.ಎಸ್.ಎಸ್. ಡೀಮ್ಡ್ ಯೂನಿವರ್ಸಿಟಿಯಾಗಿಯೂ ಖ್ಯಾತಿ ಪಡೆದಿದೆ. ಒಂದು ರೀತಿ ಸುತ್ತೂರು ಶ್ರೀ ಕ್ಷೇತ್ರ ಜೆ.ಎಸ್.ಎಸ್. ಮಹಾವಿದ್ಯಾಪೀಠದಿಂದಾಗಿ ಶಿಕ್ಷಣ ಕಾಶಿಯಾಗಿ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

 ಅಧಿಕಾರಿಗಳಾಗಿ ಹೊರಬರುವ ವಿದ್ಯಾರ್ಥಿಗಳು

ಅಧಿಕಾರಿಗಳಾಗಿ ಹೊರಬರುವ ವಿದ್ಯಾರ್ಥಿಗಳು

ಒಬ್ಬ ವಿದ್ಯಾರ್ಥಿ ಶಿಶುವಿಹಾರದ ವಿದ್ಯಾರ್ಥಿಯಾಗಿ ಪ್ರವೇಶಿಸಿದರೆ ಸಾಕು, ಆತ ಉನ್ನತ ಪದವಿಯೊಡನೆ ಶಿಕ್ಷಕನೋ, ವೈದ್ಯನೋ, ವಿಜ್ಞಾನಿಯೋ, ಇಂಜಿನಿಯರೋ, ಇನ್ಯಾವುದಾದರೊಂದು ಅಧಿಕಾರಿಯಾಗಿ ಹೊರಬರಲು ಸಾಧ್ಯವಾಗಲಿದೆ. ಇಲ್ಲಿ ಶಿಶುವಿಹಾರದಿಂದ ಹಿಡಿದು ವೈದ್ಯಕೀಯ, ತಾಂತ್ರಿಕ ಕಾಲೇಜುಗಳ ತನಕ ಎಲ್ಲಾ ಬಗೆಯ ಉನ್ನತ ಶಿಕ್ಷಣದ ಕಾಲೇಜುಗಳು ಇವೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಲ್ಲಿ ಯಾವುದೂ ಇಲ್ಲ ಎಂಬ ಮಾತೇ ಇಲ್ಲ.

 ಐನೂರಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು

ಐನೂರಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು

ಹತ್ತಾರು ಪ್ರಾಥಮಿಕ ಶಿಕ್ಷಕರ ಮತ್ತು ಪ್ರೌಢ ಶಿಕ್ಷಕರ ತರಬೇತಿಯ ಡಿ.ಎಡ್, ಬಿ.ಎಡ್, ಸಿ.ಪಿ.ಎಡ್, ಬಿ.ಪಿ.ಎಡ್ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಆಯುರ್ವೇದ ಕಾಲೇಜುಗಳು, ಕಾನೂನು ಕಾಲೇಜುಗಳು, ಹಿಂದಿ ವಿದ್ಯಾಲಯ, ಸಂಸ್ಕೃತ ಪಾಠಶಾಲೆ, ನರ್ಸಿಂಗ್ ಕಾಲೇಜುಗಳು, ಫಾರ್ಮಸಿ ಕಾಲೇಜುಗಳು, ಕೇಂದ್ರೀಯ ಶಾಲೆಗಳು, ವೃತ್ತಿಪರ ಶಿಕ್ಷಣ ಸಂಸ್ಥೆಗಳು, ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಐನೂರಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಇಲ್ಲಿದ್ದು, ಅವುಗಳೆಲ್ಲವೂ ಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತಿವೆ. ಸುತ್ತೂರಿನಂತಹ ಪುಟ್ಟ ಗ್ರಾಮದಿಂದ ಹಿಡಿದು ದೂರದ ಅಮೆರಿಕಾದಂಥ ವಿದೇಶಗಳವರೆಗೂ ಜೆ.ಎಸ್.ಎಸ್. ವಿದ್ಯಾಸಂಸ್ಥೆಗಳು ಬೆಳೆದಿವೆ. ಪ್ರತಿ ವರ್ಷವೂ ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಸುತ್ತೂರು ಮಠವು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗೆ ಕೈಗನ್ನಡಿಯಾಗಿದೆ.

English summary
Sutturu fair held in nanjanagud of mysuru is not only about fair, its a centre of all education. The six-day fair is a spiritual, secular, educational confluence with specialties,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X