• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಸಿ ಅಕ್ಕಿಯ ಸೊಗಡಿಗೆ ಮನಸೋತ ಸಾಂಸ್ಕೃತಿಕ ನಗರಿಯ ಜನ

|

ಮೈಸೂರು, ಫೆಬ್ರವರಿ 10: ಒಂದೇ ಸೂರಿನಡಿ ತರಹೇವಾರಿ ಅಕ್ಕಿ, ವಿವಿಧ ಭತ್ತದ ತಳಿಗಳ ಜೊತೆಗೆ ಸಿರಿಧಾನ್ಯ, ಬಿತ್ತನೆ ಬೀಜಗಳು, ಗೆಡ್ಡೆ ಗೆಣಸುಗಳ ಪ್ರದರ್ಶನ. ಸಾವಯವ ಕೃಷಿಯ ಅವಲಕ್ಕಿ, ಚುರುಮರಿ, ಜವಾರಿ ತರಕಾರಿ ಬೀಜ, ಬೆಲ್ಲ ಸೇರಿ ವೈವಿಧ್ಯಮಯ ಆಹಾರ ಪದಾರ್ಥಗಳಿಗೆ ಮುಗಿಬಿದ್ದ ಜನ.

ಇದು ಮೈಸೂರಿನಲ್ಲಿ ನಡೆಯುತ್ತಿರುವ ದೇಸಿ ಅಕ್ಕಿ ಮೇಳದ ಚಿತ್ರಣ. ಸಹಜ ಸಮೃದ್ಧಿ, ಭತ್ತ ಉಳಿಸಿ ಆಂದೋಲನ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದೇಸಿ ಅಕ್ಕಿ ಮೇಳದಲ್ಲಿ ಕಂಡುಬಂದ ದೃಶ್ಯವಿದು. ಈ ಮೇಳದಲ್ಲಿ 100ಕ್ಕೂ ಹೆಚ್ಚು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮೈಸೂರಿನಲ್ಲಿ ಫೆ. 9, 10 ರಂದು ದೇಸಿ ಅಕ್ಕಿ ಮೇಳ ವಸ್ತು ಪ್ರದರ್ಶನ

30 ನಮೂನೆಯ ಅಕ್ಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ನವರಾ, ಬಾಸುಮತಿ, ಅಂಬೆಮು, ದೊಡಿಗ್ಯಾ, ಕರಿಗಿಜವಿಲಿ, ಬಂಗಾರ ಕಡ್ಡಿ, ಮೈಸೂರ ಸಣ್ಣ, ರಾಜಮುಡಿ, ಇಂದ್ರಾಣಿ, ನವಲಿ, ಆಲೂರು ಸಣ್ಣ, ಬರ್ಮಾಬ್ಲಾಕ್ ಕಪ್ಪು ಅಕ್ಕಿ ಹೀಗೆ ದೇಸಿ ಅಕ್ಕಿಗಳ ದಂಡೇ ಅಲ್ಲಿದೆ.

ಇನ್ನು ಬಾಣಂತಿಯರು ಊಟಕ್ಕಾಗಿ ಬಳಸುವ ಕರಗಜವಿಲಿ, ಅಂಬೆಮೋರ, ಕೆಂಪು ಅಕ್ಕಿ ಮಾರಾಟಕ್ಕಿವೆ. ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚು ಬೆಳೆಯುವ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸಾಮಾನ್ಯವಾಗಿ ದಿನನಿತ್ಯದ ಬಳಕೆಗೆ ರಾಜಮುಡಿ ಅಕ್ಕಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು ಕೆಂಪಕ್ಕಿ, ಪಾಯಸ, ಬಿರಿಯಾನಿ, ಫಲಾವ್ ಮಾಡಲು ಗಂಧಸಾಲಿ ಸೇವಿಸುತ್ತಾರೆ. ಔಷಧಿಗಾಗಿ ಬಳಸುವ ನವರ ತಳಿಯೂ ಇದೆ.

ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ

ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ

ಅಕ್ಕಿ ಮಾರಾಟದ ಜೊತೆಗೆ ಸಿರಿಧಾನ್ಯಗಳು, ರೈತರಿಗೆ ಬೇಕಾದ ಕೃಷಿ ಪುಸ್ತಕಗಳು, ಬಿತ್ತನೆ ಬೀಜಗಳು, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೆಂಪು ಅಕ್ಕಿಯ ದೋಸೆ, ಇಡ್ಲಿ, ಕಜ್ಜಾಯ, ರಾಗಿ ದೋಸೆ, ರಾಗಿಯಿಂದ ಮಾಡಿದ ತಿನಿಸುಗಳನ್ನೂ ಮಾರಾಟಕ್ಕೆ ಇಡಲಾಗಿದೆ.

ರೈತ ಶಿವಾನಂದ ಶಂಕರ ಲಂಗಟಿ ಹೇಳುವಂತೆ

ರೈತ ಶಿವಾನಂದ ಶಂಕರ ಲಂಗಟಿ ಹೇಳುವಂತೆ

ಅಕ್ಕಿಯನ್ನು ಪಾಲಿಷ್ ಮಾಡುವುದರಿಂದ ಅದರಲ್ಲಿರುವ ಖನಿಜಾಂಶ, ರಬ್ಬರ್ ಅಂಶ ಮತ್ತು ಪೌಷ್ಠಿಕಾಂಶ ಸತ್ವಗಳು ಹೋಗಿ ಬಿಡುತ್ತವೆ. ಇದರಿಂದ ಸಕ್ಕರೆ ಖಾಯಿಲೆ ಬರುತ್ತದೆ. ಆದ್ದರಿಂದ ದೇಸಿ ಅಕ್ಕಿಯನ್ನೇ ಬಳಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ರೈತ ಶಿವಾನಂದ ಶಂಕರ ಲಂಗಟಿ.

ಭತ್ತದ ಬೆಂಬಲ ಬೆಲೆ ಪರ್ಯಾಯ ಮಾರ್ಗಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ

ಇದು ಮೊಳಕೆ ಅಕ್ಕಿ

ಇದು ಮೊಳಕೆ ಅಕ್ಕಿ

ಇತ್ತ ಭತ್ತ ಮೊಳಕೆಯೊಡುತ್ತದೆ. ಆದರೆ, ಅಕ್ಕಿ. ಹೌದು, ಈ ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಟ್ಟರೆ ಮೊಳಕೆ ಬರುತ್ತದೆ. ಇದಕ್ಕೆ ಮೊಳಕೆ ಅಕ್ಕಿ ಎಂದೇ ಹೆಸರಿಡಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಶಂಕರ್ ಲಂಗಟಿ ಎಂಬುವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಈ ತಳಿಯ ಭತ್ತ ಬೆಳೆದಿದ್ದಾರೆ. ಮಳೆ ಕಡಿಮೆ ಇದ್ದರೂ ಬೆಳೆ ಚೆನ್ನಾಗಿ ಬರುತ್ತದೆ. ಕೆ.ಜಿ.ಅಕ್ಕಿ ಬೆಲೆ 50 ರೂ. ಹೆಚ್ಚಾಗಿ ಕೇರಳ ಕಡೆಯವರು ಖರೀದಿ ಮಾಡುತ್ತಾರೆ. ದೋಸೆಗೆ ಒಳ್ಳೆಯದು ಎಂದು ಹೇಳುತ್ತಾರೆ.

ಜನರಲ್ಲಿ ಅರಿವು ಮುಖ್ಯ

ಜನರಲ್ಲಿ ಅರಿವು ಮುಖ್ಯ

ದ್ಯುತಿ ಸಂಶ್ಲೇಷಣೆ ಕ್ರಿಯೆಯಿಂದ ಬೆಳೆ ಬೆಳೆದು, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸೂರ್ಯನ ಶಾಖದಿಂದ ನೈಸರ್ಗಿಕವಾಗಿ ಮಾಡುತ್ತಿರುವ ಸಹಜ ಕೃಷಿಕ ಎಂ.ಕೆ.ಕೈಲಾಶ್ ಮೂರ್ತಿ ಬೆಳೆದ ಬೆಳೆಗಳು ಗಮನ ಸೆಳೆಯುತ್ತಿವೆ. , ಕಡಿಮೆ ನೀರು ಆಶ್ರಯಿಸಿ ವಿವಿಧ ಹಣ್ಣು-ತರಕಾರಿ, ಭತ್ತ, ಧಾನ್ಯಗಳನ್ನು ಬೆಳೆಯುತ್ತಿದ್ದೇನೆ. ಸಹಜ ಕೃಷಿಯಿಂದ ಪ್ರಕೃತಿ ಸಂಪತ್ತು ಸಂರಕ್ಷಣೆಯಾಗುತ್ತದೆ. ಪಾಲಿಶ್ ಮಾಡದ, ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಅಕ್ಕಿರವೆ, ಅಕ್ಕಿ ಹಿಟ್ಟು, ಹೆಸರು, ಅಲಸಂದೆ, ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದೇನೆ. ಸಹಜ ಕೃಷಿ ಬಗ್ಗೆ ಜನರಲ್ಲಿ ಅರಿವು ಮುಖ್ಯ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣಿಕೆಗೆ ಕಡಿವಾಣ ಇಲ್ಲವೆ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2 days Desi Rice Fair and Technical Workshop held in Mysuru. Drew a good response from public. Over 200 native paddy variety growers from across Karnataka, including Mandya, Mysuru and Chamarajanagar districts, have displayed their varieties of desi rice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more