ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮಗೆ ಬಿಜೆಪಿಯವರು ವಿರೋಧಿಗಳು, ಸುಮಲತಾ ಅಲ್ಲ:ಸಿದ್ದರಾಮಯ್ಯ

|
Google Oneindia Kannada News

Recommended Video

Lok Sabha Elections 2019 : ಸಿದ್ದು ಟಾರ್ಗೆಟ್ ಏನು ಅಂಥ ಗೊತ್ತಾ?

ಮೈಸೂರು, ಏಪ್ರಿಲ್ 14:ನಮ್ಮ ಚುನಾವಣೆಯ ಟಾರ್ಗೆಟ್ ಮೋದಿ ಸೋಲಿಸುವುದಲ್ಲ. ಕೋಮುವಾದಿ ಬಿಜೆಪಿಯನ್ನು ಮಣಿಸುವುದು. ಸುಳ್ಳು ಹೇಳುವ ಮೋದಿಯ ಬಗ್ಗೆ ಏನು ಕೇಳಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಮೈಸೂರಿನ ಚಾಮುಂಡೇಶ್ವರಿಯಲ್ಲಿ ನಡೆದ ಪಕ್ಷದ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ದೇವೇಗೌಡರು ಜೊತೆಯಾದ ಮೇಲೆ ಪರಿಸ್ಥಿತಿ ಉತ್ತಮವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ ಎಂದರು.

ಪ್ರತಾಪ್ ಸಿಂಹ ಸಂದರ್ಶನ:'ರಾಜಕಾರಣಕ್ಕೆ ಹೊಸಬರು ಬರಲು ಸಾಧ್ಯವಾಗುತ್ತಿಲ್ಲ'ಪ್ರತಾಪ್ ಸಿಂಹ ಸಂದರ್ಶನ:'ರಾಜಕಾರಣಕ್ಕೆ ಹೊಸಬರು ಬರಲು ಸಾಧ್ಯವಾಗುತ್ತಿಲ್ಲ'

ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ, ನಾವೇ 82, ಜೆಡಿಎಸ್ 37 ಸ್ಥಾನ ಗೆದ್ದಿದ್ದರು. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ಜಾತಿ, ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರು ಬಡವರ ಬಗ್ಗೆ,‌ ರೈತರ ಬಗ್ಗೆ, ಮಹಿಳೆಯರ ಬಗ್ಗೆ ಮಾತಾನಾಡೋಲ್ಲ. ನಮಗೆ ಬಿಜೆಪಿ, ಪ್ರತಾಪ್ ಸಿಂಹ ವಿರೋಧಿಗಳು. ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Sumalatha is not our enemy:Siddaramaiah

ನಾನು ಜಿ.ಟಿ. ದೇವೇಗೌಡ ರಾಜಕೀಯವಾಗಿ ಒಂದಾಗಿದ್ದೇವೆ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ. ಹಾಗೇನಾದ್ರೂ ಹೇಳಿದ್ರೆ ರಾಜಕೀಯದಲ್ಲಿ ಇರಲ್ಲ ಅಂತ ಸಿದ್ದರಾಮಯ್ಯ ಘೋಷಿಸಿಕೊಂಡರು.

 ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ

ಎಲ್ಲಾದ್ರೂ ಸರಿ ಮೋದಿ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧ. ಮೋದಿ ಸಂಸತ್​ಗೂ ಬರಲ್ಲ, ಮಾಧ್ಯಮಗಳ ಕೈಗೂ ಸಿಗಲ್ಲ, ಪುಕ್ಕಲ ಎಂದ ಸಿದ್ದರಾಮಯ್ಯ ನಾನು ಇನ್ನು ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದರು.

English summary
Lok Sabha Elections 2019:Former Prime Minister Said that Siddaramaiah Modi's defeat is not our election target.Communal BJP is our target.Similarly in Mandya, Sumalatha is not our enemy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X