• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ

|

ಮೈಸೂರು, ಜುಲೈ 27: ಕರ್ನಾಟಕ ರಾಜ್ಯ ಮುಕ್ತ ವಿವಿ 2013-14 ಹಾಗೂ 2014-15ರಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಈ ವಿವಿಯಲ್ಲೇ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ ಡಿ ಪಡೆಯುವ ಅವಕಾಶವನ್ನು ನೀಡಲಾಗಿದೆ. ಇತ್ತೀಚೆಗೆ ನಡೆದ ಕೌನ್ಸಿಲ್ ಅಕಾಡೆಮಿ ಸಭೆಯಲ್ಲಿ ಈ ನಿರ್ಧಾರವನ್ನು ವಿವಿ ಪ್ರಕಟಿಸಿದೆ.

 ಮುಂದಿನ ಐದು ವರ್ಷದವರೆಗೆ ಕೆಎಸ್ ಒಯುಗೆ ಮಾನ್ಯತೆ ಮುಂದಿನ ಐದು ವರ್ಷದವರೆಗೆ ಕೆಎಸ್ ಒಯುಗೆ ಮಾನ್ಯತೆ

ಮುಕ್ತ ವಿವಿಯಲ್ಲಿ ಸುಮಾರು 95 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇದರಲ್ಲಿ 43 ಸಾವಿರ ವಿದ್ಯಾರ್ಥಿಗಳು ಪದವಿ ಪಾಸಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ಇನ್ನೂ ಪರೀಕ್ಷೆಯನ್ನು ತೆಗೆದುಕೊಂಡಿಲ್ಲ. ಈ ಎರಡು ಶೈಕ್ಷಣಿಕ ಸಾಲಿನಲ್ಲಿ ಪ್ರವೇಶವನ್ನು ಪಡೆದು ಉತ್ತೀರ್ಣರಾದವರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡಲು ವಿವಿ ನಿರ್ಧಾರ ಪ್ರಕಟಿಸಿದೆ.

ಇದರ ಜೊತೆಗೆ ವಿವಿ ಪದವಿಯಲ್ಲಿ ಪಾಸಾಗಿದ್ದರೂ ಅಂಕಪಟ್ಟಿ ಹಾಗೂ ಪದವಿ ಪತ್ರವನ್ನು ವಿತರಿಸಿಲ್ಲವೆಂದು ಕೆಲ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದಂತೆ 15 ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿ ಪತ್ರ ನೀಡಲಾಯಿತು. ನಂತರ ಕೆಲವು ವಿದ್ಯಾರ್ಥಿಗಳು ಇದೇ ಆದೇಶದನ್ವಯ ತಮಗೂ ಅಂಕಪಟ್ಟಿ ಹಾಗೂ ಪದವಿ ಪತ್ರ ನೀಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಪಾಸಾಗಿರುವ ಉಳಿದ ವಿದ್ಯಾರ್ಥಿಗಳಿಗೂ ಅಂಕಪಟ್ಟಿ ನೀಡುವ ಕುರಿತು ಜುಲೈ 29ರಂದು ನಡೆಯುವ ವಿವಿ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿದೆ.

English summary
Karnataka State Open University has decided to offer Post Graduate and PHD course for 2013-14 and 2014-15 batch students. VV announced the decision at a recent council academy meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X