ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ತಿ.ನರಸೀಪುರ ಮಹಾಕುಂಭಮೇಳಕ್ಕೆ ವೇದಿಕೆ ಸಿದ್ಧ

|
Google Oneindia Kannada News

ಮೈಸೂರು, ಫೆಬ್ರವರಿ 15 : ಮೈಸೂರಿನ ತಿ.ನರಸೀಪುರದಲ್ಲಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ.17, 18 ಮತ್ತು 19ರಂದು ಕುಂಭಮೇಳ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮೈಸೂರು ಜಿಲ್ಲಾ ಉಪವಿಭಾಗಾಧಿಕಾರಿ ಶಿವೇಗೌಡ ಅವರು ಕುಂಭಮೇಳದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ್ದಾರೆ. 'ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತಿ.ನರಸೀಪುರ ಕ್ಷೇತ್ರದಲ್ಲಿ ಮಹಾ ಕುಂಭಮೇಳ ಆಚರಿಸಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದರು.

ಮೈಸೂರು : ಕುಂಭಮೇಳಕ್ಕೆ ಸೇನೆಯಿಂದ ಸೇತುವೆ ನಿರ್ಮಾಣಮೈಸೂರು : ಕುಂಭಮೇಳಕ್ಕೆ ಸೇನೆಯಿಂದ ಸೇತುವೆ ನಿರ್ಮಾಣ

'ಕಾವೇರಿ, ಕಪಿಲ ಹಾಗೂ ಗುಪ್ತಗಾಮಿ ಸ್ಫಟಿಕ ಸರೋವರದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ' ಎಂದು ತಿಳಿಸಿದರು.

ತಿ.ನರಸೀಪುರ ಕುಂಭಮೇಳದ ಜೊತೆ ಈ ಸ್ಥಳಗಳನ್ನು ವೀಕ್ಷಿಸಬಹುದುತಿ.ನರಸೀಪುರ ಕುಂಭಮೇಳದ ಜೊತೆ ಈ ಸ್ಥಳಗಳನ್ನು ವೀಕ್ಷಿಸಬಹುದು

ಈ ಬಾರಿ ಸೆಸ್ಕ್‌ನಿಂದ ಪಟ್ಟಣ ಹಾಗೂ ಕುಂಭಮೇಳ ನಡೆಯುವ ಸ್ಥಳಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಭಕ್ತರಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.

ತಿ.ನರಸೀಪುರ ಕುಂಭಮೇಳದ ಪೂರ್ಣ ಮಾಹಿತಿ ನೀಡಿದ ಶ್ರೀ ಸೋಮೇಶ್ವರನಾಥ ಸ್ವಾಮೀಜಿತಿ.ನರಸೀಪುರ ಕುಂಭಮೇಳದ ಪೂರ್ಣ ಮಾಹಿತಿ ನೀಡಿದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ

ತಾತ್ಕಾಲಿಕ ಸೇತುವೆ ನಿರ್ಮಾಣ

ತಾತ್ಕಾಲಿಕ ಸೇತುವೆ ನಿರ್ಮಾಣ

ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದ ಕಪಿಲಾ ನದಿಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳದ ತನಕ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಕೆಎಸ್ಆರ್‌ಟಿಸಿ ನಿಲ್ದಾಣದಿಂದ ಅಗಸ್ತೇಶ್ವರ ದೇವಾಲಯದ ತನಕ ಭಕ್ತರನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ.

ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

ಮೊದಲು ಬಾರಿಗೆ ಸೇನೆಯ ನೆರವು

ಮೊದಲು ಬಾರಿಗೆ ಸೇನೆಯ ನೆರವು

ಕುಂಭಮೇಳದಲ್ಲಿ ಭಕ್ತಾದಿಗಳಿಗೆ ನದಿಯ ದ್ವೀಪದ ಮಧ್ಯಕ್ಕೆ ತೆರಳಲು ಅನುಕೂಲವಾಗುವಂತೆ ಭಾರತೀಯ ಸೇನಾಪಡೆಯ ನೆರವಿನಿಂದ ಪ್ರಪ್ರಥಮ ಬಾರಿಗೆ ತೇಲುವ ಸೇತುವೆ ನಿರ್ಮಾಣ ಮಾಡಲಾಗಿದೆ. 160 ಮೀಟರ್ ಉದ್ದ ಮತ್ತು 3 ಮೀಟರ್ ಅಗಲದ ಸೇತುವೆ ಗುಂಜಾ ನರಸಿಂಹ ಸ್ವಾಮಿ ದೇವಾಲಯದ ಭಾಗದಿಂದ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಸಭಾ ಮಂಟಪ, ಯಾಗ ಮಂಟಪದ ವೇದಿಕೆಗೆ ಸಂಪರ್ಕ ಕಲ್ಪಿಸುತ್ತದೆ.

ಭಕ್ತರ ರಕ್ಷಣೆಗೆ ಅಗತ್ಯ ಕ್ರಮ

ಭಕ್ತರ ರಕ್ಷಣೆಗೆ ಅಗತ್ಯ ಕ್ರಮ

ಸಾರ್ವಜನಿಕರು ಕಾವೇರಿ, ಕಪಿಲಾ ನದಿಗಳಲ್ಲಿ ಅಪಾಯವಿರುವ ಕಡೆ ಪುಣ್ಯಸ್ನಾನ ಮಾಡದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ 80 ಕ್ಕೂ ಹೆಚ್ಚು ಈಜುಗಾರರು ಹಾಗೂ ನಾಲ್ಕು ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಅಗತ್ಯ ವ್ಯವಸ್ಥೆಗಳು

ಅಗತ್ಯ ವ್ಯವಸ್ಥೆಗಳು

ಕುಂಭಮೇಳಕ್ಕೆ ಆಗಮಿಸುವ ಮಹಿಳಾ ಭಕ್ತರು ಬಟ್ಟೆ ಬದಲಾಯಿಸಲು ಹಾಗೂ ಶೌಚಾಲಯಕ್ಕಾಗಿ 200 ತಾತ್ಕಾಲಿಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಆಳವಡಿಸಲಾಗಿದೆ.

ಅಗತ್ಯ ಪೊಲೀಸ್ ಭದ್ರತೆ

ಅಗತ್ಯ ಪೊಲೀಸ್ ಭದ್ರತೆ

ಕುಂಭಮೇಳಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನಲೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಮೂರು ತಾತ್ಕಾಲಿಕ ಆಸ್ಪತ್ರೆ, ಒಂದು ಆಯುಷ್ ಆಸ್ಪತ್ರೆ, ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. 5 ಸಹಾಯವಾಣಿ ಮತ್ತು 1400 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

English summary
Stage set for T.Narasipura Kumbh mela 2019. Kumbha Mela will be held from February 17 to 19, 2019 at Mysuru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X