ಬಂದವರ ತಾಳ್ಮೆಗೆಡಿಸಬೇಡಿ ಎಂದು ಗರಂ ಆದ ಶ್ರೀನಿವಾಸ್ ಪ್ರಸಾದ್
ಮೈಸೂರು, ಜನವರಿ 30: ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಸಚಿವ ಸ್ಥಾನದ ಕುರಿತು ಹಲವು ಹೇಳಿಕೆಗಳು ವ್ಯಕ್ತವಾಗುತ್ತಿರುವುದು ಮತ್ತೊಂದೆಡೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್, "ಬಂದವರ ತಾಳ್ಮೆ ಪರೀಕ್ಷೆ ಮಾಡಬೇಡಿ. ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ, ಒಳ್ಳೆಯ ಆಡಳಿತ ಕೊಡಿ" ಎಂದು ಆಗ್ರಹಿಸಿದ್ದಾರೆ.
"ಪಕ್ಷ ಬಿಟ್ಟು ಬಂದ ಶಾಸಕರು ಇನ್ನೆಷ್ಟು ದಿನ ಕಾಯ್ತಾರೆ? ಪಾಪ, 17 ಜನರು ನಮ್ಮ ಪಕ್ಷಕ್ಕೆ ಬಂದು ಸರ್ಕಾರ ರಚನೆಗೆ ಕಾರಣ ಆಗಿದ್ದಾರೆ. ಅವರಿಗೆ ಸ್ಥಾನಮಾನ ಕೊಡುವುದು ಪಕ್ಷದ ಜವಾಬ್ದಾರಿ. ಪಕ್ಷಾಂತರಿ ಶಾಸಕರ ಜತೆ ಮಾತನಾಡಿರೋದು ಮುಖ್ಯಮಂತ್ರಿ. ಭರವಸೆ ಕೊಟ್ಟಿರೋದು ಸಿಎಂ ಅವರೇ. ಹಾಗಾಗಿ ಸಿಎಂ ಹೈಕಮಾಂಡ್ ಜತೆ ಮಾತನಾಡಲಿ. ಅವರು ಕೊಟ್ಟ ಭರವಸೆ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಿ" ಎಂದು ಹೇಳಿದ್ದಾರೆ.

"ಯಾರು ಯಾರಿಗೆ ಯಾವ ರೀತಿ ಮಾತು ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಆಗಲಿ, ಇನ್ನೊಬ್ಬರ ಬಗ್ಗೆ ಆಗಲಿ ನಾನು ಮಾತನಾಡಲ್ಲ. ಬಂದ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ" ಎಂದಿರುವ ಅವರು, "ಸಂಪುಟ ವಿಸ್ತರಣೆ ತಡವಾದರೆ ಏನೂ ಆಗಲ್ಲ. ಆ ಬಗ್ಗೆ ಇನ್ನೇನು ಹೇಳುವುದಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications