ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೈಸೂರಿನಲ್ಲಿ ಸ್ಮಾರ್ಟ್ ವಿಎಂಎಸ್ ಸೌಲಭ್ಯ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 19 : ನಗರದ ಸಂಚಾರ ನಿಯಂತ್ರಣ ವ್ಯವಸ್ಥೆ ಅತ್ಯಾಧುನಿಕಗೊಳ್ಳುತ್ತಿದೆ! ವಾಹನಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರಿಗೆ ಸಂಚಾರ ಮಾರ್ಗಗಳ ಬಗ್ಗೆ ಸಂದರ್ಭಕ್ಕೆ ಅನುಗುಣವಾಗಿ ಮಾಹಿತಿ ನೀಡುವ ಸಂಬಂಧ ಸ್ಮಾರ್ಟ್ ವೇರಿಯಬಲ್ ಮೆಸೇಜಿಂಗ್ ಸೈನ್ಸ್ (ಸ್ಮಾರ್ಟ್ ವಿಎಂಎಸ್) ಅಳವಡಿಸಲಾಗಿದೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಮೈಸೂರು ನಗರದಲ್ಲಿಯೇ ಇಂಥ ಅತ್ಯಾಧುನಿಕವಾದ ಸ್ಮಾರ್ಟ್ ವಿಎಂಎಸ್'ಗಳನ್ನು ಅಳವಡಿಸಲಾಗಿದೆ. ಇದು ಪೂರ್ಣ ಸ್ವಯಂಚಾಲಿತವಾಗಿದ್ದು, ಸಂಚಾರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸ್ಥಳ ಆಧಾರಿತವಾಗಿ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ನೀಡಲಿದೆ.

ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ

ಇದು ಯಾವುದೇ ಕಂಟೋಲ್ ರೂಂ ಮ್ಯಾನುಯಲ್ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂಬುದು ಗಮನಾರ್ಹ. ಸ್ವಯಂಚಾಲಿತವಾಗಿ ಸಂಚಾರ ಪ್ರಗತಿಗಳು, ಸಮಯ, ಪ್ರಮುಖ ಜಂಕ್ಷನ್ ಗಳಲ್ಲಿ ವಾಹನಗಳ ದಟ್ಟಣೆ, ಶೀಘ್ರವಾಗಿ, ಸುರಕ್ಷಿತವಾಗಿ ತಮ್ಮ ಸ್ಥಳವನ್ನು ತಲುಪುವ ಸಂಬಂಧ ಅನುಸರಿಸಬೇಕಾದ ಬದಲಿ ಮಾರ್ಗಗಳ ಬಗ್ಗೆ ಹಾಗೂ ನಗರದ ಆಯಾ ಕ್ಷಣದ ತಾಪಮಾನದ ವರದಿಯ ಮಾಹಿತಿ ನೀಡುತ್ತದೆ.

Smart VMS facility is being implemented in Mysore

ತುರ್ತು ಪರಿಸ್ಥಿತಿಗಳ ಬಗ್ಗೆ ಪೊಲೀಸ್, ಅಗ್ನಿಶಾಮಕ ಪಡೆ, ಆಂಬುಲೆನ್ಸ್, ಹೈವೇ ಪೆಟ್ರೋಲ್ ನವರು ನೀಡುವ ಮಾಹಿತಿಗಳನ್ನು ಡಿಜಿಟಲ್ ಫಲಕದಲ್ಲಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕಾರ್ಯವನ್ನೂ ಸಹ ಮಾಡುತ್ತದೆ.

 ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಈ ಅತ್ಯಾಧುನಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅಧಿಕೃತ ವ್ಯಕ್ತಿಗಳಿಗೆ ಆಂಡ್ರಾಯ್ಡ್ ಅಪ್ಲಿಕೇಷನ್ ನೀಡಲಾಗಿದೆ. ಈ ಅಪ್ಲಿಕೇಷನ್ ಮೂಲಕ ನಗರದಲ್ಲಿ ನಡೆಯುವ ಪಮುಖ ಘಟನೆಗಳು ಮತ್ತು ಅಗತ್ಯ ಮಾಹಿತಿಗಳನ್ನು ಸ್ಥಳ ಆಧಾರಿತವಾಗಿ ಎಲ್‍ಇಡಿ ಪರದೆಯ ಮೇಲೆ ಪ್ರದರ್ಶಿಸುತ್ತದೆ.

ಇದರಿಂದ ಸಂಚಾರ ನಿಯಮ ಉಲ್ಲಂಘನೆಗಳನ್ನು ಕಡಿಮೆ ಮಾಡಿ ರಸ್ತೆ ಅಪಘಾತಗಳನ್ನು ತಗ್ಗಿಸಲು ನೆರವಾಗುತ್ತದೆ. ಸುರಕ್ಷತೆಯ ಬಗ್ಗೆಯೂ ಸಹ ಸಂದೇಶಗಳನ್ನು ಡಿಜಿಟಲ್ ಫಲಕದಲ್ಲಿ ಪ್ರಕಟಿಸಬಹುದಾಗಿದೆ.

 ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು? ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?

ಈ ಸಾಧನವು ಉತ್ತಮ ಗುಣಮಟ್ಟದ ಹೆಚ್ಚು ಬಾಳಿಕೆ ಬರುವ 4.8 ಮೀ. + 1.92 ಮೀ. ವರ್ಣಮಯ ಪ್ರದರ್ಶಕವನ್ನು ಹೊಂದಿದೆ. 10 ರಿಂದ 100 ಮೀಟರ್ ದೂರದಿಂದಲೇ ವೀಕ್ಷಣೆ ಮಾಡಬಹು ದಾಗಿದೆ. ಉತ್ತಮ ವೀಕ್ಷಣೆಗಾಗಿ ಪದರ್ಶಕದ (ಫಲಕ) ಹೊಳಪು ವಾತಾವರಣದ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತದೆ.

English summary
Smart VMS facility is being implemented in Mysore for the first time in the Karnataka state. Here's a Complete detail of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X