ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೊರೊನಾ ಆರೋಗ್ಯ ಸಿಬ್ಬಂದಿಗೆಂದೇ ಬಂದ "ಸ್ಮಾರ್ಟ್ ನರ್ಸ್‌"

By Coovercolly Indresh
|
Google Oneindia Kannada News

ಮೈಸೂರು, ಏಪ್ರಿಲ್ 30: ವಿಶ್ವವನ್ನೇ ಭೀತಿಯ ಮಡಿಲಲ್ಲಿ ನೂಕಿರುವ ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಪಾತ್ರ ಅಪರಿಮಿತವಾದುದ್ದು. ಈ ಕೊರೊನಾ ವಾರಿಯರ್ಸ್ ತಮ್ಮ ಜೀವನವನ್ನೂ ಲೆಕ್ಕಿಸದೆ ಕೊರೊನಾ ಪೀಡಿತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ.

ಅವರಿಗೆ ಸಹಕಾರಿಯಾಗಲೆಂದೇ ಮೈಸೂರಿನಲ್ಲಿ ತಂತ್ರಜ್ಞರ ತಂಡವೊಂದು "ರೋಬೊ ನರ್ಸ್" (ಸ್ಮಾರ್ಟ್ ನರ್ಸ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಲು ಈ ರೋಬೊ ಇದೀಗ ಸಜ್ಜಾಗಿದೆ. ಇದರ ಕಾರ್ಯ ವೈಖರಿ ಹೇಗಿದೆ? ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ? ಇಲ್ಲಿದೆ ಅದರ ವಿವರ...

 ಸೋಂಕಿನ ಕಡಿವಾಣಕ್ಕೆ ʻಸ್ಮಾರ್ಟ್ ನರ್ಸ್ʼ

ಸೋಂಕಿನ ಕಡಿವಾಣಕ್ಕೆ ʻಸ್ಮಾರ್ಟ್ ನರ್ಸ್ʼ

ಕೊರೊನಾ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹಳ ಮುಖ್ಯ. ಆದರೆ, ಎಲ್ಲ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆ, ಉಪಚಾರದ ವಿಚಾರದಲ್ಲಿ ಆರೋಗ್ಯ ಸಿಬ್ಬಂದಿ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದಿರುವುದರಿಂದ ಹಲವೆಡೆ ವೈದ್ಯಕೀಯ ಸಿಬ್ಬಂದಿಯೇ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಸಾವನ್ನಪ್ಪಿರುವ ನಿದರ್ಶನಗಳೂ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ʻಸ್ಮಾರ್ಟ್ ನರ್ಸ್ʼ ಸಹಕಾರಿಯಾಗಬಲ್ಲದು ಎಂಬುದು ಇದರ ತಯಾರಕರ ಅಭಿಪ್ರಾಯ.

'ಸೂರ್ಯನ ಬೆಳಕು, ಶಾಖ, ತೇವಾಂಶ ಕೊರೊನಾವನ್ನು ದುರ್ಬಲಗೊಳಿಸುತ್ತದೆ''ಸೂರ್ಯನ ಬೆಳಕು, ಶಾಖ, ತೇವಾಂಶ ಕೊರೊನಾವನ್ನು ದುರ್ಬಲಗೊಳಿಸುತ್ತದೆ'

 ಮೈಸೂರಿನ ಡಿಎಂ ಟೆಕ್ಟ್ರಿಕ್ಸ್ ಸಂಸ್ಥೆಯಿಂದ ವಿನ್ಯಾಸ

ಮೈಸೂರಿನ ಡಿಎಂ ಟೆಕ್ಟ್ರಿಕ್ಸ್ ಸಂಸ್ಥೆಯಿಂದ ವಿನ್ಯಾಸ

ಮೈಸೂರಿನ ಡಿಎಂ ಟೆಕ್ಟ್ರಿಕ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಇಶಾಕ್ ರಾಜೇಂದ್ರನ್, ವ್ಯವಸ್ಥಾಪಕ ನಿರ್ದೇಶಕ ಶ್ರೀವಲ್ಲಿ ಶ್ರೀನಿವಾಸನ್ ಹಾಗೂ ವಿನ್ಯಾಸಕ ಪ್ರಮೋದ್ ಈ ಮೂವರು ರೋಬೊ ನರ್ಸ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಔಷಧೋಪಚಾರ ಮಾಡುವ ಆರೋಗ್ಯ ಸಿಬ್ಬಂದಿಯ ಕೆಲಸವನ್ನು ಈ ಸ್ಮಾರ್ಟ್ ನರ್ಸ್ ನಿರ್ವಹಿಸಬಲ್ಲದು.

 5 ಕೆ.ಜಿ. ತೂಕದ ವಸ್ತುಗಳನ್ನು ಹೊತ್ತು ಸಾಗಿಸುವ ಸಾಮರ್ಥ್ಯ

5 ಕೆ.ಜಿ. ತೂಕದ ವಸ್ತುಗಳನ್ನು ಹೊತ್ತು ಸಾಗಿಸುವ ಸಾಮರ್ಥ್ಯ

ಇದು ಒಂದು ಬಾರಿಗೆ 100 ಮೀಟರ್‌ ವರೆಗೂ ಚಲಿಸಬಲ್ಲದು. ಔಷಧಿ, ತಿಂಡಿ, ಊಟ ಹೊತ್ತು 10 ರಿಂದ 15 ಕೊಠಡಿಗಳಿಗೆ ಸಾಗಿಸಿ ರೋಗಿಗಳಿಗೆ ನೀಡುವ ಕೆಲಸ ಮಾಡುತ್ತದೆ. ಈಗ ಒಮ್ಮೆಗೆ 5 ಕೆ.ಜಿ. ತೂಕದ ವಸ್ತುಗಳನ್ನು ಹೊತ್ತು ಸಾಗಿಸುವ ಸಾಮರ್ಥ್ಯ ಇದಕ್ಕಿದೆ. ಇದರ ಮಧ್ಯಭಾಗದಲ್ಲಿ ಸ್ಯಾನಿಟೈಸರ್ ತುಂಬಿದ ಡಬ್ಬಿಯನ್ನಿಟ್ಟು ಪೈಪ್ ಅಳವಡಿಸಲಾಗಿರುತ್ತದೆ. ಆಗಾಗ ಪೈಪ್ ಮುಂದೆ ಕೈಯೊಡ್ಡಿದರೆ ಸಾಕು ಸ್ಯಾನಿಟೈಸರ್ ಬರುತ್ತದೆ.

ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!

 ಐದು ಸಾವಿರ ರೂ ವೆಚ್ಚದಲ್ಲಿ ತಯಾರಿ

ಐದು ಸಾವಿರ ರೂ ವೆಚ್ಚದಲ್ಲಿ ತಯಾರಿ

ಈ ತಂತ್ರಜ್ಞಾನಕ್ಕೆ 12 ವೋಲ್ಟ್ ಬ್ಯಾಟರಿ ಅಳವಡಿಸಿದ್ದು, ಸುಮಾರು 3 ಗಂಟೆಗಳ ಕಾಲ ಇದು ಕೆಲಸ ಮಾಡುತ್ತದೆ. ಆಂಡ್ರಾಯ್ಡ್ ಮೊಬೈಲ್ ಆಪ್ ಮೂಲಕವೂ ಇದನ್ನು ನಿಯಂತ್ರಿಸಬಹುದಾಗಿದೆ. ಈ ನರ್ಸ್‌ ನ ತಯಾರಿಕಾ ವೆಚ್ಚ ಕೇವಲ ಐದು ಸಾವಿರ ರೂಪಾಯಿಗಳಾಗಿದ್ದು, ಇನ್ನೂ ತಂತ್ರಜ್ಞಾನ ಅಭಿವೃದ್ಧಿಪಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ತೂಕ ಹೆಚ್ಚು ಭರಿಸುವ, ಹೆಚ್ಚು ಸಾಮರ್ಥ್ಯದ ಬ್ಯಾಟರಿಯನ್ನೂ ಅಳವಡಿಸಬಹುದಾಗಿದೆ.

ಕೊರೊನಾ ನಡುವೆ ಮಕ್ಕಳಲ್ಲಿ ವಿಚಿತ್ರ ಕಾಯಿಲೆ: ಬೆಚ್ಚಿಬಿದ್ದ ಯು.ಕೆ ಪೋಷಕರು!ಕೊರೊನಾ ನಡುವೆ ಮಕ್ಕಳಲ್ಲಿ ವಿಚಿತ್ರ ಕಾಯಿಲೆ: ಬೆಚ್ಚಿಬಿದ್ದ ಯು.ಕೆ ಪೋಷಕರು!

English summary
Smart nurse technology introduced by mysuru DM Techtrics to help corona warriors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X