Mysuru: ಮಹಿಳೆಯರಿಗೆ ಸಿಹಿಸುದ್ದಿ: ಸಾಂಸ್ಕೃತಿಕ ನಗರಿಯಲ್ಲಿ ಮೊದಲ ಬಾರಿಗೆ 'ಸಿಲ್ಕ್ ಫ್ಯಾಬ್' ಮೇಳ
ಮೈಸೂರು, ಜನವರಿ 11: ಹೊಸ ವರುಷ 2025ರ ಆರಂಭದ ಸಂಭ್ರಮದಲ್ಲಿರುವಾಗಲೇ ಮಕರ ಸಂಕ್ರಾಂತಿಯ ಹರುಷಕ್ಕೆ ಸಿದ್ಧತೆಗಳು ಕೂಡ ಆರಂಭಗೊಂಡಿವೆ. ಮನೆಯ ಅಲಂಕಾರ, ಸಂಕ್ರಾಂತಿಯ ವಿಶಿಷ್ಟ ಖಾದ್ಯಗಳ ತಯಾರಿಯೂ ಭರದಿಂದಲೇ ಸಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬಗಳ ಸಂಭ್ರಮ, ಆಚರಣೆ ವಿಶಿಷ್ಟ ಆಗಿರುವುದರಿಂದ ಪ್ರತಿ ಹಬ್ಬವೂ ನೆನಪಿನಲ್ಲಿ ಉಳಿಯುವಂತಾಗಬೇಕು ಎಂಬುದು ಮೈಸೂರಿಗರ ಅಭಿಲಾಷೆ.
ಈ ಅಭಿಲಾಷೆಗೆ ಪೂರಕವಾಗಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್ ವಿಶಿಷ್ಟವಾದ 'ಸಿಲ್ಕ್ ಫ್ಯಾಬ್' ಮೇಳ ಹಮ್ಮಿಕೊಂಡಿದೆ. ಮೈಸೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 'ಸಿಲ್ಕ್ ಫ್ಯಾಬ್'ನಲ್ಲಿ ರೇಷ್ಮೆ ಸೀರೆಗಳ ಮತ್ತು ಕೈಮಗ್ಗ ವಸ್ತುಗಳ ಮೆರುಗು ಕಣ್ತುಂಬಿಕೊಳ್ಳಲು ಹೆಬ್ಬಾಳ ರಿಂಗ್ ರಸ್ತೆಯಲ್ಲಿರುವ ಜೆಎಸ್‌ಎಸ್‌ಎಸ್ ಮೈಸೂರು ಅರ್ಬನ್ ಹಾತ್‌ಗೆ ಭೇಟಿ ನೀಡಿ.

ಈ ಬಾರಿಯ ಮೇಳ ರೇಷ್ಮೆ ಸೀರೆಗಳ ಕುರಿತ ವಿಶಿಷ್ಟ ಅನುಭವ ನೀಡುತ್ತಿದೆ. ಒಂದೇ ಸೂರಿನಡಿ ರೇಷ್ಮೆ ಸೀರೆಗಳು, ಕೈಮಗ್ಗ ಉತ್ಪನ್ನಗಳು ಮನಸೆಳೆಯುತ್ತಿವೆ. ಈ ಕಾರಣದಿಂದಲೇ ಅತಿ ಹೆಚ್ಚು ಜನಾಕರ್ಷಣೆ ಪಡೆದಿರುವ ಈ ಮೇಳಕ್ಕೆ ಸಾರ್ವಜನಿಕರ ಸ್ಪಂದನೆಯೂ ಉತ್ತಮವಾಗಿದ್ದು, ಇಲ್ಲಿನ ವೈಶಿಷ್ಟ್ಯ ಕಂಡವರು ಸಂತೃಪ್ತರಾಗುತ್ತಿದ್ದಾರೆ. ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ವಸ್ತುಗಳು ಇಲ್ಲಿ ಸಿಗುತ್ತಿದೆ.
ಜನವರಿ 5ರಂದು ಆರಂಭಗೊಂಡಿರುವ ಈ ಮೇಳ ಜನವರಿ 18ರವರೆಗೆ ನಡೆಯಲಿದ್ದು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ (ಎನ್‌ಎಚ್‌ಡಿಸಿ) ವು ಈ ಮೇಳವನ್ನು ಜೆಎಸ್‌ಎಸ್ ಮೈಸೂರು ಅರ್ಬನ್‌ಹಾತ್‌ನಲ್ಲಿ ಆಯೋಜಿಸಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇಕಾರರದಿಂದಲೇ ನೇರವಾಗಿ ಗ್ರಾಹಕರಿಗೆ ಸಿಗುತ್ತಿರುವುದು ಈ ಮೇಳದ ವಿಶೇಷವಾಗಿದೆ.

ಸಿಲ್ಕ್ ಫ್ಯಾಬ್ ಮೇಳದಲ್ಲಿ ದೇಶದ ಸುಮಾರು 60 ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಾಗುತ್ತಿವೆ. 17 ರಾಜ್ಯಗಳ ರೇಷ್ಮೆ ಸೀರೆಗಳು ಮತ್ತು ಕೈಮಗ್ಗ ಉತ್ಪನ್ನಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಕರ್ನಾಟಕದ ರೇಷ್ಮೆ ಸೀರೆ , ಕಾಟನ್ ಸೀರೆಗಳು, ನೆಲ ಹೊದಿಕೆಗಳು, ಬೆಡ್ ಶೀಟ್‌ಗಳು, ಪರಿಶುದ್ಧ ಕಾಂಜೀವರಂ ಸೀರೆಗಳು, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯದ ತಸ್ಸರ್ ಸೀರೆಗಳು, ಪಶ್ಚಿಮ ಬಂಗಾಳದ ಕಾಂತಾ ಸೀರೆ, ಬಲಚುರಿ ಸೀರೆ, ಭುಟಿಕ್ ಸೀರೆ, ಕಾಟನ್ ಸೀರೆ, ಉತ್ತರ ಪ್ರದೇಶ ರಾಜ್ಯದ ಬನಾರಸಿ ಸಿಲ್ಕ್ ಸೀರೆಗಳು, ಚಿಕನ್ ಎಂಬ್ರಾಯ್ಡರಿ ಸೀರೆಗಳು, ಮಧ್ಯ ಪ್ರದೇಶದ ಚಂದೇರಿ ಮಹೇಶ್ವರಿ ಸಿಲ್ಕ್ ಸೀರೆಗಳು, ಒಡಿಶಾಸ ಸಂಬಲ್ಪುರಿ ಸೀರೆ, ಇಕ್ಕತ್ ಸೀರೆಗಳು, ಬೋಂಕಾಯಿ ಸೀರೆ, ಕಾಶ್ಮೀರದ ಪಶ್ಮೀನಾ ಶಾಲ್‌ಗಳು, ಆಂಧ್ರಪ್ರದೇಶದ ಗೊದ್ವಲ್, ಕಲಮ್‌ಕಾರಿ ಸೀರೆಗಳು,

ಪೋಚಂಪಲ್ಲಿ ಸೀರೆಗಳು, ಛತ್ತೀಸಘಡದ ಸೀರೆಗಳು, ಹರಿಯಾಣದ ಫರ್ನಿಷಿಂಗ್ ಉತ್ಪನ್ನಗಳು, ಮಣಿಪುರ ರಾಜ್ಯದ ಸ್ಟೋಲ್ ಮತ್ತು ಬೆಡ್‌ಶೀಟ್ , ಮಹಾರಾಷ್ಟ್ರ ಮತ್ತು ರಾಜಸ್ಥಾನ್ ರಾಜ್ಯದ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು, ಅಸ್ಸಾಂ ರಾಜ್ಯದ ರೇಷ್ಮೆ ಸೀರೆಗಳು ಮತ್ತು ಡ್ರೆಸ್ ಮೆಟೀರಿಯಲ್‌ಗಳು ಹಾಗೂ ಕರಕುಶಲಕರ್ಮಿಗಳು ತಯಾರಿಸಿರುವ ಕರಕುಶಲ ವಸ್ತುಗಳು ಲಭ್ಯವಿವೆ.
ಮೈಸೂರಿನ ರಿಂಗ್‌ರಸ್ತೆಯ ಹೆಬ್ಬಾಳು ಕೈಗಾರಿಕಾ ವಲಯದ ಜೆಎಸ್‌ಎಸ್ ಮೈಸೂರು ಅರ್ಬನ್‌ಹಾತ್‌ನಲ್ಲಿ ನಡೆಯುವ ಈ ಮೇಳ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಇರಲಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಜನವರಿ 18ರವೊಳಗೆ ಭೇಟಿ ನೀಡಿ ನಿಮ್ಮಿಷ್ಟದ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿಸಿ.












Click it and Unblock the Notifications