Get Updates
Get notified of breaking news, exclusive insights, and must-see stories!

Siddaramaiah vs Somanna: ವರುಣಾದಲ್ಲಿ 24,000 ಮತದಾರರ ಸಂಖ್ಯೆ ಹೆಚ್ಚಳ- ಯಾರಿಗೆ ಲಾಭ? ಇನ್‌ಸೈಡ್‌ ಸ್ಟೋರಿ

ಮೈಸೂರು, ಮೇ 12: ಶನಿವಾರ ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಫಲಿತಾಂಶವನ್ನು ಕರ್ನಾಟಕದ ಜನರು ಅತ್ಯಂತ ಕುತೂಹಲದಿಂದ ನೋಡುತ್ತಿದ್ದಾರೆ. 2018 ರ ಚುನಾವಣೆಗೆ ಹೋಲಿಸಿದರೆ ವರುಣಾದಲ್ಲಿ 24,000 ಮತದಾರರ ಸಂಖ್ಯೆ ಹೆಚ್ಚಳವಾಗಿದೆ.

ಪ್ರತಿಪಕ್ಷದ ನಾಯಕ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಚಿವ, ಲಿಂಗಾಯತ ಸಮುದಾಯಕ್ಕೆ ಸೇರಿದ ವಿ ಸೋಮಣ್ಣ ಅವರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಹೈ-ಪ್ರೊಫೈಲ್ ಚುನಾವಣಾ ಕದನವು ರಾಜ್ಯದಲ್ಲಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

Siddaramaiah vs Somanna

ಮೇ 10 ರಂದು ನಡೆದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ 1,98,740 ಜನರು ಮತ ಚಲಾಯಿಸಿದ್ದಾರೆ. ಶೇಕಡಾವಾರು 84.74 ಕ್ಕೆ ತಲುಪಿದೆ. 2018 ರ ಚುನಾವಣೆಯಲ್ಲಿ, 2,21,050 ಮತದಾರರಲ್ಲಿ 1,74,457 ಜನರು ಮತ ಚಲಾಯಿಸಿದ್ದರು. ಆಗ ಮತದಾನದ ಪ್ರಮಾಣ ಶೇ 79.2 ಆಗಿತ್ತು.

ಈ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಬಿಜೆಪಿ ಶ್ರಮಿಸಿದೆ. ವಿ ಸೋಮಣ್ಣ ಅವರು ಹಳ್ಳಿಗಳಿಗೆ ಭೇಟಿ ಮತ ನೀಡಲು ಮನವಿ ಮಾಡಿಕೊಂಡಿರುವುದು ಈ ಬಾರಿ ಮತದಾನ ಹೆಚ್ಚಳಕ್ಕೆ ಕಾರಣವಾಗಿದೆ.

Siddaramaiah vs Somanna

ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರ ಬಲವರ್ಧನೆ ಮಾಜಿ ಸಿಎಂಗೆ ನೆರವಾಗಲಿದೆ ಎಂದು ಸಿದ್ದರಾಮಯ್ಯ ಪಾಳಯ ನಂಬಿದೆ. ತಮ್ಮ ನಾಯಕ 25,000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಅವರು ಹೇಳುತ್ತಾರೆ.

ಲಿಂಗಾಯತ ಪ್ರಾಬಲ್ಯವಿರುವ ಭಾಗದಲ್ಲಿ ಹೆಚ್ಚಿನ ಮತದಾನವಾಗಿರುವುದು ಸೋಮಣ್ಣ ಅವರಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಲಿಂಗಾಯತರು ಪ್ರಬಲವಾಗಿರುವ ನಂಜನಗೂಡು ತಾಲೂಕಿನಲ್ಲಿ ಭಾರೀ ಮತದಾನವಾಗಿದೆ. ಸೋಮಣ್ಣ ಬೆಂಬಲಿಗರು ಬಿಜೆಪಿ ಸುಮಾರು 5,000-11,000 ಮತಗಳ ಅಂತರದಿಂದ ಗೆಲ್ಲಲಿದೆ ಎಂದು ಹೇಳಿದ್ದಾರೆ ಎಂದು 'ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ. ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಇಬ್ಬರೂ ನಾಯಕರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ.

Siddaramaiah vs Somanna

ಎಲ್ಲಾ ಹಿಂದುಳಿದ ವರ್ಗದವರು ಪಕ್ಷವನ್ನು ಬೆಂಬಲಿಸಲು ಬಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡರೆ, ಬಿಜೆಪಿ ಕಾರ್ಯಕರ್ತರು ಈ ಬಾರಿ ದಲಿತರು ಮತ್ತು ಲಿಂಗಾಯತರು ಹೆಚ್ಚಿನ ಶೇಕಡಾವಾರು ಸಂಖ್ಯೆಯಲ್ಲಿ ಕಾಣಿಸಿಕೊಂಡು ಸೋಮಣ್ಣ ಅವರಿಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಸೋಮಣ್ಣ ಇಬ್ಬರೂ ತಮಗೆ ಎಲ್ಲಾ ಸಮುದಾಯಗಳ ಬೆಂಬಲವಿದೆ ಮತ್ತು ಅವರೆಲ್ಲರೂ ತಮಗೆ ಮತ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸೋಮಣ್ಣ ಅವರನ್ನು ಬೆಂಬಲಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಇದು ಲಿಂಗಾಯತ ಮತಗಳಲ್ಲಿ ಶೇ 40 ರಷ್ಟು ವಿಭಜನೆಯಾಗುವ ಸೂಚನೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.

Siddaramaiah vs Somanna

ಆದಾಗ್ಯೂ, ಅನುಭವಿ ರಾಜಕಾರಣಿ ಸೋಮಣ್ಣ ಅವರು ಕಣಕ್ಕೆ ಇಳಿಯುವ ಮೊದಲು ಪಕ್ಷದೊಳಗಿನ ಅಸಮಾಧಾನವನ್ನು ಸೂಕ್ಷ್ಮವಾಗಿ ಪರಿಹರಿಸಿದ್ದಾರೆ. ಆ ಮೂಲಕ ವರುಣಾದ ಯಡಿಯೂರಪ್ಪ ಅವರ ಬೆಂಬಲಿಗರನ್ನು ಸೋಮಣ್ಣ ಸೆಳೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ ಅವರು ಸುಲಭವಾಗಿ ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. 'ಬಿಜೆಪಿ ನಾಯಕರು ಜಾತಿ ಕಾರ್ಡ್ ಆಡಲು ಪ್ರಯತ್ನಿಸಿದರು. ಆದರೆ, ಅವರು ವಿಫಲರಾಗಿದ್ದಾರೆ. ಜೆಡಿಎಸ್ ಬೆಂಬಲಿಗರು ಸಹ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ, ನಾನು ಗೆಲ್ಲುತ್ತೇನೆ' ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಮತ್ತು ಕರ್ನಾಟಕದ ಹೊರಗಿನ ಜನರು ವರುಣಾದಲ್ಲಿ ಅವರನ್ನು ಪ್ರೀತಿ ಮತ್ತು ಗೌರವದಿಂದ ಬೆಂಬಲಿಸುತ್ತಾರೆ ಎಂದು ಸಿದ್ದರಾಮಯ್ಯ ಗುರುವಾರ ಟ್ವೀಟ್ ಮಾಡಿದ್ದಾರೆ.

'ನಾನು ಅವರಲ್ಲಿ ಪ್ರತಿಯೊಬ್ಬರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಆದರೆ ಅವರ ಅಚಲ ಬೆಂಬಲಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ಸೋಮಣ್ಣ ಕೂಡ ತಮಗೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌ ಮಾತನಾಡಿ, ಮತದಾನದ ಶೇಕಡಾವಾರು ಹೆಚ್ಚಳದಿಂದ ಕಾಂಗ್ರೆಸ್‌ ಪರವಾಗಿರುವುದು ಸೂಚಿಸುತ್ತದೆ ಎಂದು ಹೇಳಿದ್ದಾರೆ.

'ಈ ಬಾರಿ ಎಲ್ಲಾ ಸಮುದಾಯಗಳ ದೈನಂದಿನ ವೇತನದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಲಿಂಗಾಯತ ಸೇರಿದಂತೆ ಇತರೆ ಸಮುದಾಯದ ಮತದಾರರು ಕೂಡ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ. ನನ್ನ ಅಂದಾಜಿನ ಪ್ರಕಾರ, ಸಿದ್ದರಾಮಯ್ಯ ವಿರುದ್ಧ ಯಾವುದೇ ಅಸಮಾಧಾನವಿಲ್ಲ ಮತ್ತು ಈ ಅಂಶ ಅವರಿಗೆ ಅನುಕೂಲವಾಗಲಿದೆ. ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತಿದೆ' ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+