'ಶ್ರೀರಾಮುಲು ಆಪ್ತನ ಮೇಲೆ ಐಟಿ ದಾಳಿ: ಬಿಜೆಪಿ ಪ್ರಾಯೋಜಿತ ನಾಟಕ'
ಮೈಸೂರು, ಮೇ 09: ಬಿಜೆಪಿ ನಾಯಕ ಶ್ರೀರಾಮುಲು ಬೆಂಬಲಿಗನ ಮೇಲೆ ಐಟಿ ದಾಳಿ ನಡೆದಿರುವುದು ಬಿಜೆಪಿ ಪ್ರಾಯೋಜಿತ ನಾಟಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರ ದಾರಿ ತಪ್ಪಿಸಲು ಶ್ರೀರಾಮುಲು ಆಪ್ತನ ಮೇಲೆ ದಾಳಿ ನಡೆಸಲಾಗಿದೆ.ಈ ನಾಟಕ ಜನರಿಗೆ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಭಾವಿಸಿ ನಿಂತಿದೆ ಎಂದು ಕುಟುಕಿದರು.
ನಾನು 12 ಚುನಾವಣೆಗಳನ್ನ ನೋಡಿದ್ದೇನೆ ಯಾವ ಕಾಲದಲ್ಲೂ ಚುನಾವಣೆ ವೇಳೆ ಹೀಗೆ ನಡೆದಿರಲಿಲ್ಲ. ಅಲ್ಲಿ ನಮ್ಮ ನಾಯಕರು ಉಳಿದುಕೊಂಡಿರುವ ಕೊಠಡಿಗಳ ಮೇಲೆಯೇ ಅಧಿಕ ಐಟಿ ರೈಡ್ ಆಗಿದೆ.

ಬೆಂಗಳೂರಿನ ಆರ್ ಆರ್ ನಗರದಲ್ಲಿ ಫೇಕ್ ಓಟರ್ ಐಡಿಗಳು ಸಿಕ್ಕ ಪ್ರಕರಣದ ಕುರಿತು ಮಾತನಾಡಿ, ಅದರ ಬಗ್ಗೆ ನನಗೇನು ಗೊತ್ತಿಲ್ಲ ಚುನಾವಣಾಧಿಕಾರಿಗಳು ಆ ಬಗ್ಗೆ ತನಿಖೆ ಮಾಡಲಿ ಅನಂತ ಕುಮಾರ್ ಈ ಬಗ್ಗೆ ಪ್ರೆಸ್ ಏಕೆ ಮಾಡೋದು ಅವರದ್ದೇ ಕೇಂದ್ರ ಸರ್ಕಾರ ಇದೆ ತನಿಖೆ ಮಾಡಿಸಲಿ. ಅನಂತ್ ಕುಮಾರ್ ಮಾತನ್ನು ಅಷ್ಟು ಗಂಭಿರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಕಾರಣಕ್ಕೆ ಚುನಾವಣೆ ಮುಂದೂಡಬೇಕು ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಕಡೇ ಕ್ಷಣದಲ್ಲಿ ಚಾಮುಂಡೇಶ್ವರಿಯಲ್ಲಿ ಸಿಎಂ ಪ್ರಚಾರಕ್ಕೆ ಬರದ ವಿಚಾರ, ಸುದೀಪ್ ಬರುತ್ತೇನೆ ಎಂದು ಹೇಳಿದ್ದರು ಬೇರೆ ಏನೋ ಕೆಲಸ ವಿರೋದರಿಂದ ಬರಲು ಸಾಧ್ಯವಾಗಿಲ್ಲ ಎಂದರು.












Click it and Unblock the Notifications