ಜೆಡಿಎಸ್-ಕಾಂಗ್ರೆಸ್ ಅಧಿಕಾರಾವಧಿ ಕೆಲವೇ ದಿನದಲ್ಲಿ ಅಂತ್ಯ :ಶೋಭಾ ಕರಂದ್ಲಾಜೆ

ಮೈಸೂರು, ಮೇ 21 : ರಾಜ್ಯದ ಜನರೇ ಮೂರನೇ ಸ್ಥಾನಕ್ಕೆ ತಳ್ಳಿರುವ ಜೆಡಿಎಸ್ ಗೆ ಇರುವುದು ಅಧಿಕಾರದ ಹಪಾಹಪಿತನ. ಕಾಂಗ್ರೆಸ್ - ಜೆಡಿಎಸ್ ನಾಯಕರು ಸದ್ಯ ಪ್ರಮಾಣ ವಚನಕ್ಕೆ ಮೊದಲೇ ಗೊಂದಲ ಸೃಷ್ಟಿಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಕಾಲ ಇವರಿಬ್ಬರ ರಾಜಕೀಯ ದೊಂಬರಾಟ ನೋಡುವ ದೌರ್ಬಾಗ್ಯ ರಾಜ್ಯದ ಜನತೆ ಅನಿವಾರ್ಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಇರುವುದು ನಕಲಿ ಕಾಂಗ್ರೆಸ್. ಈ ಪಕ್ಷದ ಜೋಕರ್ ಉಗ್ರಪ್ಪ ಬಿಡುಗಡೆ ಮಾಡಿದ್ದು ನಕಲಿ ಸೀಡಿ. ಅಲ್ಲಿ ನಡೆದಿರುವುದು ಮಾತುಕತೆ ನಕಲಿ. ಸ್ವತಃ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಅವರೇ ಇದನ್ನು ತಳ್ಳಿ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ ಎಂದು ತಿಳಿಸಿದರು.

shobha asserts Cong-JDS govt will end soon

ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ - ಮುಖ್ಯಮಂತ್ರಿ ಮಾಡದೆ ಹೋದರೆ ಸತ್ತೇ ಹೋಗಿವೆ ಎನ್ನುವ ಇಬ್ಬರು ನಾಯಕರು ಸೇರಿ ಇಂದು ಜೊತೆಯಾಗಿದ್ದಾರೆ. ಇವರನ್ನು ರಾಜ್ಯದ ಜನರು ಬಲ್ಲರು ಅಧಿಕಾರದ ಹಪಾಹಪಿಯಿಂದ ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ನೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಹೆಚ್ಚು ಕಾಲ ನಿಲ್ಲುವುದಿಲ್ಲ.

ಕಾಂಗ್ರೆಸ್ ಚುನಾವಣೆಯಲ್ಲಿ ಅಧಿಕಾರದ ದುರುಪಯೋಗ ಪಡಿಸಿಕೊಂಡಿದ್ದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಸ್ಪರ್ಧಿಸಿದ್ದ ಗದಗಿನ ಭದ್ರಕೋಟೆ ಗಳಲ್ಲಿದ್ದ ಮತಯಂತ್ರ ಹಾಗೂ ವಿವಿ ಪ್ಯಾಟ್ ಬದಲಾಗಿದೆ ಎಂದು ಪಕ್ಷದ ಪರಾಜಿತ ಅಭ್ಯರ್ಥಿ ಈಗಾಗಲೇ ಎಫ್ಐಆರ್ ದಾಖಲಿಸಿದ್ದಾರೆ. ದೂರಿನನ್ವಯ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ತನಿಖೆ ನಡೆಸಲು ಮನವಿ ಮಾಡಲಾಗುವುದು ಎಂದರು.

ಜಾತಿ ಧರ್ಮಗಳನ್ನು ಒಡೆದು ಸಿಎಂ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಮತದಾರರು ಹೀನಾಯವಾಗಿ ಸೋಲಿಸಿದ್ದು, ಕೇವಲ ಮೂವತ್ತೆಂಟು ಶಾಸಕರಿದ್ದ ಜೆಡಿಎಸ್ ಗೆ ಕೆಂಪು ಹಾಸು ಹಾಸಿದ್ದು ಕಾಂಗ್ರೆಸ್ ನ ಅಧಿಕಾರದ ದುರಾಸೆಗೆ ಸಾಕ್ಷಿ. ರಾಜ್ಯದ ಮತದಾರರು ಕಾಂಗ್ರೆಸ್ ಜೆಡಿಎಸ್ ಅನ್ನು ತಿರಸ್ಕರಿಸಿದ್ದಾರೆ ಎಂದರು.

ಬಿಜೆಪಿ ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ. ಮೈಸೂರಿನಲ್ಲಿಯೂ ನಮ್ಮ ಪಾರಪತ್ಯವನ್ನ ಸಾಧಿಸಿದ್ದೇವೆ. ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಯೂ ನಾವು ಬಿಜೆಪಿ ಬಾವುಟ ಹಾರಿಸಿದ್ದೇವೆ. ಒಂದೊಂದೇ ಹೆಜ್ಜೆಯನ್ನ ನಾವು ಹಾಕುತ್ತೇವೆ ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶೋಭಾಕರಂದ್ಲಾಜೆ,

ಕೇವಲ ಶೇ.18 ಮತವನ್ನ ತೆಗೆದುಕೊಂಡ ಪಾರ್ಟಿ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ಜಾತಿ ಲೆಕ್ಕಾಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸಿ ಕಾಂಗ್ರೆಸ್ ನ ನಿರ್ನಾಮ ಮಾಡಲು ಜನತೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಈಗಾಗಲೇ ನಾವು ಸೋತ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಕಾರ್ಯಕರ್ತರನ್ನ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಚುನಾವಣೆ ಸಂದರ್ಭದಲ್ಲಿ ಯಾವುದೇ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+