ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುದ್ದೀಕರಣಗೊಂಡಿದ್ದರೂ ಸಂಚರಿಸುತ್ತಿಲ್ಲ ಎಲೆಕ್ಟ್ರಿಕ್ ರೈಲುಗಳು

|
Google Oneindia Kannada News

ಮೈಸೂರು, ಜನವರಿ 12 : ಮೈಸೂರು- ಬೆಂಗಳೂರು ನಡುವಿನ ಮಾರ್ಗ ವಿದ್ಯುದೀಕರಣಗೊಂಡಿದ್ದರೂ, ವಿದ್ಯುತ್‌ ರೈಲುಗಳ ಓಡಾಟ ‍ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಈ ಎರಡು ನಗರಿಗಳ ನಡುವೆ ಒಟ್ಟು 24 ರೈಲುಗಳು ಸಂಚರಿಸುತ್ತಿದ್ದು, ಕೇವಲ 13 ರೈಲುಗಳು ಮಾತ್ರ ವಿದ್ಯುತ್‌ 'ಲೋಕೊ' ದಿಂದ ಸಂಚರಿಸುತ್ತಿವೆ. ಹಾಗಾಗಿ, ಕೇವಲ ಶೇ 60ರಷ್ಟು ರೈಲುಗಳು ಮಾತ್ರ ವಿದ್ಯುದೀಕರಣಗೊಂಡಂತೆ ಆಗಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಮೈಸೂರು- ಬೆಂಗಳೂರು ನಡುವಿನ ಪ್ರಯಾಣಕ್ಕೆ ಪ್ರತಿ ರೈಲಿಗೆ 700 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. ಇದಕ್ಕೆ 41 ಸಾವಿರ ಖರ್ಚಾಗುತ್ತದೆ. ಒಂದು ಕಿ.ಮೀ. ಸಂಚರಿಸಲು 5 ಲೀಟರ್‌ ಡೀಸೆಲ್ ಬೇಕು.

Several Electric trains are not moving properly through mysuru – bangaluru

ವಿದ್ಯುತ್‌ ಎಂಜಿನ್ ಇರುವ ರೈಲು 2,600 ಯುನಿಟ್‌ ವಿದ್ಯುತ್‌ ಬಳಸುತ್ತದೆ. ಒಟ್ಟಾರೆ 17 ಸಾವಿರ ಖರ್ಚಾಗುವ ಕಾರಣ, ಸಾಕಷ್ಟು ಉಳಿತಾಯ ಆಗಲಿದೆ ಎನ್ನುವುದು ಲೆಕ್ಕಾಚಾರವಾಗಿತ್ತು. ಆದರೆ, ರೈಲ್ವೆ ಇಲಾಖೆಗೆ ಭಾಗಶಃ ಹಣ ಮಾತ್ರ ಉಳಿತಾಯವಾಗುತ್ತಿದೆ.

ಏಕೆ ಇನ್ನೂ ಡೀಸೆಲ್ ರೈಲು?: ವಿದ್ಯುತ್‌ ಮೋಟಾರ್ ಉಳ್ಳ 'ಲೋಕೊ'ಗಳನ್ನು ನಿರ್ವಹಿಸಲು ಬೇಕಿರುವ ವಿದ್ಯುತ್ ಕೊರತೆ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಮಂಡ್ಯದ ಎಲಿಯೂರಿನಲ್ಲಿ ವಿದ್ಯುತ್‌ ಉಪ ಕೇಂದ್ರವೊಂದು ನಿರ್ಮಾಣ ವಾಗಬೇಕಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳಿಂದಾಗಿ ಅದು ಪೂರ್ಣ ಗೊಂಡಿಲ್ಲ. ಹಾಗಾಗಿ ಸಂಪೂರ್ಣ ವಿದ್ಯುದೀಕರಣಕ್ಕೆ ತೊಡಕಾಗಿದೆ.

ಅಲ್ಲದೇ, ಕೆಲವು ಇತರೆ ತೊಡಕುಗಳೂ ಡೀಸೆಲ್ ಎಂಜಿನ್‌ ಉಳ್ಳ ರೈಲುಗಳನ್ನೇ ಓಡಿಸುವಂತೆ ಮಾಡಿದೆ. ಮೈಸೂರಿನ ಮೂಲಕವಾಗಿ ಇತರೆಡೆ ತೆರಳುವ ಮಾರ್ಗಗಳು ವಿದ್ಯುದೀಕರಣಗೊಂಡಿಲ್ಲ. ಉದಾ ಹರಣೆಗೆ ಮೈಸೂರು ಮೂಲಕ ವಾಗಿ ಚಾಮರಾಜನಗರಕ್ಕೆ ಸಂಚರಿಸಬೇ ಕಾದರೆ, ವಿದ್ಯುತ್‌ ಲೋಕೊವನ್ನು ಕಳಚಿ, ಡೀಸೆಲ್‌ ಎಂಜಿನ್‌ ಜೋಡಿಸಬೇಕಾ ಗುತ್ತದೆ. ಹಾಗೆ ಬದಲಿಸುವುದು ಸುಲಭವೂ ಅಲ್ಲ. ಏಕೆಂದರೆ, ಹೆಚ್ಚುವರಿ ಡೀಸೆಲ್‌ ಎಂಜಿನ್‌ಗಳು ಮೈಸೂರಿನಲ್ಲಿ ಇರುವು ದಿಲ್ಲ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಅಲ್ಲದೇ, ವಿದ್ಯುತ್‌ ಲೋಕೊಗಳ ಕೊರತೆಯೂ ಬೆಂಗಳೂರು ಮೈಸೂರು ನಡುವೆ ಮಾತ್ರ ಸಂಚರಿಸುವ ರೈಲುಗಳಿಗೂ ಡೀಸೆಲ್‌ ಎಂಜಿನ್‌ಗಳನ್ನೇ ಅಳವಡಿಸುವಂತೆ ಮಾಡಿದೆ. ಉದಾಹರಣೆಗೆ, ಟಿಪ್ಪು ಎಕ್ಸ್‌ಪ್ರೆಸ್‌ ಇಂದಿಗೂ ಡೀಸೆಲ್‌ ಎಂಜಿನ್‌ನಿಂದಲೇ ಸಂಚರಿಸುತ್ತಿದೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಬೆಂಗಳೂರಿನಲ್ಲಿ ವಿದ್ಯುತ್‌ ಲೋಕೊಗಳು ಕಡಿಮೆ ಇರುವ ಕಾರಣ ಇದುವರೆಗೂ ಈ ರೈಲು ಹಿಂದಿನಂತೆಯೇ ಸಂಚರಿಸುತ್ತಿವೆ. ಹಾಲಿ, ಚಾಮುಂಡಿ ಎಕ್ಸ್‌ಪ್ರೆಸ್‌, ಕಾವೇರಿ ಎಕ್ಸ್‌ಪ್ರೆಸ್‌ ಸೇರಿದಂತೆ 13 ರೈಲುಗಳು ವಿದ್ಯುತ್‌ ಲೋಕೊ ಅಳವಡಿಸಿಕೊಂಡಿವೆ.

ಒಟ್ಟು 139 ಕಿ.ಮೀ ದೂರದ ಈ ಮಾರ್ಗವನ್ನು ವಿದ್ಯುದೀಕರ ಣಗೊಳಿಸಲು ಒಟ್ಟು 210 ಕೋಟಿ ಖರ್ಚಾಗಿದೆ. ಎಲಿಯೂರು ಉಪ ಕೇಂ‌ದ್ರ ನಿರ್ಮಾಣವಾದಲ್ಲಿ ಮಾತ್ರ ಈ ಕೊರತೆಯನ್ನು ನೀಗಿಸಲು ಸಾಧ್ಯ.

English summary
e route between Mysore and Bangalore has been electrified, but the electric trains are not fully functional. There are 24 trains running between these two cities, with only 13 trains moving from power 'Loco'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X