ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಬಸವರಾಜ ಬೊಮ್ಮಾಯಿ ಆಕ್ರೋಶ
ಮೈಸೂರು, ಡಿಸೆಂಬರ್, 14: ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಯಾವ ಗೊಂದಲ ಇಲ್ಲ. ಕಾಂಗ್ರೆಸ್‌ನವರು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಅವರಿಗೆ ಎಸ್, ಎಸ್‌ಟಿ ಮತಗಳು ತಪ್ಪಿ ಹೋಗುತ್ತವೆ ಎನ್ನುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದವರು ಒಟ್ಟಿಗೆ ಆದರೂ ಹೋಗಲಿ, ಒಬ್ಬರಾದರೂ ಹೋಗಲಿ, ನನಗೆ ಸಂಬಂಧಿಸಿದ್ದಲ್ಲ ಅದು. ಅವರ ಪಕ್ಷದಲ್ಲಿ ಏನೇನು ನಡೆದಿದೆ ಎಂದು ಮಾಧ್ಯಮದವರು ವರದಿ ಮಾಡುತ್ತಿದ್ದೀರಿ? ಕಾಂಗ್ರೆಸ್ ಏನು ಎಂಬುದು ಜನರಿಗೆ ಗೊತ್ತಿದೆ. ಅವರು ಜಲ ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರದ ಬಗ್ಗೆ ಸಮಾವೇಶ ಮಾಡುತ್ತಿದ್ದಾರೆ. ಆದರೆ ಮಹದಾಯಿ ವಿವಾದವಾಗಲು ಕಾಂಗ್ರೆಸ್ ಕಾರಣವಾಗಿದೆ. ಸೋನಿಯಾ ಗಾಂಧಿ ಗೋವಾ ಎಲೆಕ್ಷನ್‌ಗೆ ಹೋಗಿ ಮಹದಾಯಿಯ ಒಂದು ಹನಿಯನ್ನು ಕೊಡಲ್ಲ ಎಂದದ್ದು ಜನ ಮರೆತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನವರು ಐದು ವರ್ಷದ ಅಧಿಕಾರದಲ್ಲಿ ಏನು ಮಾಡಿದರು? ಕೆನಾಲೆಗೆ ಅಡ್ಡಲಾಗಿ ನೀರು ಬರಬಾರದೆಂದು ಗೋಡೆ ಕಟ್ಟಿಸಿದರು. ಕೃಷ್ಣ ವಿಚಾರದಲ್ಲಿಯೂ ನಮ್ಮ ಹಕ್ಕನ್ನು ಮಂಡಿಸಲಿಕ್ಕೆ ಮೀನಾಮೇಷ ಮಾಡಿದರು. ಇವರಿಗೆ ಯಾವ ನೈತಿಕತೆ ಇದೆ? ಎಸ್‌ಸಿ, ಎಸ್‌ಟಿ ಮೀಸಲಾತಿ ಬಗ್ಗೆ 40 ವರ್ಷವಾದರೂ ತಿರುಗಿ ನೋಡಿರಲಿಲ್ಲ ಎಂದರು.

ಸಿದ್ದರಾಮಯ್ಯ ವಿರುದ್ಧ ಸಿಎಂ ಆಕ್ರೋಶ
ಸಿದ್ದರಾಮಯ್ಯನವರು ನಾವು ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಟ್ವೀಟ್ ಮಾಡಿದರು. ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಆ ವರದಿಯನ್ನು ಮಂಡನೆ ಮಾಡಲಿಲ್ಲ. ಮೊನ್ನೆ ನಡೆದ ಸಮಾವೇಶದಲ್ಲಿ ಇವರು ಹೋಗಿ ಬರೀ ದೀಪ ಹಚ್ಚಿ ಬಂದರು. ಇವರು ಎಸ್‌ಸಿ, ಎಸ್‌ಟಿ ಅವರಿಗೆ ಏನು ಮಾಡಿದರಂದು ಸಮಾವೇಶ ಮಾಡುತ್ತಿದ್ದಾರೆ? ಎಲ್ಲ ಮುಚ್ಚಿ ಹಾಕಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಜನರನ್ನು ಪದೇಪದೇ ಮರಳು ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಬಾರಿ ಗೆದ್ದಿದ್ದ ಸಿದ್ದರಾಮಯ್ಯ: ಈ ಬಾರಿಯ ಸ್ಪರ್ಧೆ ಇನ್ನೂ ನಿಗೂಢ..!
ಗಡಿ ವಿವಾದ, ನಮ್ಮ ನಿಲುವನ್ನು ಹೇಳುತ್ತೇವೆ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಚರ್ಚೆಯಾಗಲಿದೆ. ಅದರ ಬಗ್ಗೆ ನಮ್ಮ ನಿಲುವನ್ನು ಹೇಳುತ್ತೇವೆ. ಅದರ ವಿಚಾರಗಳನ್ನು ಹಾಗೂ ಪ್ರಕ್ರಿಯೆಗಳನ್ನು ಗೃಹ ಸಚಿವರಿಗೆ ಸಚಿವರಿಗೆ ತಿಳಿಸುತ್ತೇವೆ. ಸಂವಿಧಾನದ ಪ್ರಾಮುಖ್ಯತೆಯ ಪ್ರಾವಿಷನ್‌ಗಳಲ್ಲಿ ಏನಿದೆ ಅದನ್ನು ಹೋಂ ಸೆಕ್ರೆಟರಿ ಗಮನಕ್ಕೆ ತರುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ವರದಿ ತರಸಿ ಕ್ರಮ ಕೈಗೊಳ್ಳುತ್ತೇವೆ, ಸಿಎಂ
ಮಾಂಡೋಸ್ ಚಂಡಮಾರುತದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವೊಂದು ಗೊಂದಲಗಳಾಗಿವೆ. ಸಂಬಂಧಪಟ್ಟ ಇಲಾಖೆಯಿಂದ ವರದಿ ತರಸಿ ಕ್ರಮ ಕೈಗೊಳ್ಳುತ್ತೇವೆ. ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಿಎಂ, ಈಗ ಪ್ರಮುಖವಾಗಿರುವುದು ಗಡಿ ವಿಚಾರವಾಗಿದೆ. ಅಲ್ಲಿ ಏನಾದರೂ ಪ್ರಸ್ತಾಪ ಮಾಡಿದರೆ ಎಲ್ಲ ರೆಡಿ ಮಾಡಿಕೊಂಡು ಹೋಗಿರುತ್ತೇನೆ. ಉಳಿದ ವಿಚಾರ ನಂತರ ಮಾತನಾಡುವೆ ಎಂದರು.

ಹಿಂದೆ ಸರಿಯಾದ ಮಾರ್ಗದರ್ಶನ ಇರಲಿಲ್ಲ
ಮೊದಲಿನ ರೀತಿಯ ಸರ್ಕಾರ ಈಗ ಇಲ್ಲ. ನಮ್ಮ ಡಿಫೆನ್ಸ್ ಪೋರ್ಸ್ ಕೂಡ ಬಹಳ ಸನ್ನದ್ಧವಾಗಿದೆ. ಹಿಂದೆ ಯಾವುದು ತಯಾರು ಇರುತ್ತಿರಲಿಲ್ಲ. ಚೀನಾ ಗಡಿ ವಿಚಾರದಲ್ಲಿ ಯೋಧರು ಮುನ್ನುಗ್ಗಲು ಈ ಹಿಂದೆ ಸರಿಯಾದ ಮಾರ್ಗದರ್ಶನ ಕೊಡುತ್ತಿರಲಿಲ್ಲ. ಆದರೆ ಈಗ ಸ್ಪಷ್ಟ ನಿರ್ದೇಶನ ಇದೆ. ಅದಕ್ಕೆ ಈಗ ಉದಾಹರಣೆಗಳು ಕೂಡ ಇವೆ. ಸಮರ್ಥವಾಗಿ ಹಿಮ್ಮೆಟ್ಟಿಸಲು ಈಗ ರಸ್ತೆಗಳು, ಸಂವಹನ ಪ್ರಕ್ರಿಯೆಗಳು ಸಮರ್ಥವಾಗಿವೆ. ಸಮರ್ಥ ನಾಯಕತ್ವ ಇರುವ ಸಲುವಾಗಿ ಯೋಧರಿಗೆ ಎಲ್ಲಾ ರೀತಿಯ ಇಕ್ವಿಪ್ಮೆಂಟ್ಸ್ ಕೊಟ್ಟಿದ್ದಾರೆ ಎಂದರು.












Click it and Unblock the Notifications