ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೀರೆಯುಟ್ಟು ಮಿಂಚಿದ ಬೆಡಗಿಯರು…

ಮೈಸೂರು, ಫೆಬ್ರವರಿ 28: ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಂತೂ ಮಂಗಳವಾರ ಅಕ್ಷರಶಃ ಕಲರ್‌ಫುಲ್ ಆಗಿತ್ತು. ಇದಕ್ಕೆ ಕಾರಣ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಆಚರಿಸಿದ ಸ್ಯಾರಿ ಡೇ. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ಕಲರ್‌ಫುಲ್ ಸೀರೆ ಧರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅಷ್ಟೆ ಅಲ್ಲ, ಸಂಗೀತಕ್ಕೆ ತಕ್ಕಂತೆ ಮಾರ್ಜಾಲ ನಡಿಗೆ ಹಾಕಿದರು.

'ಲೇ ಶ್ರುತಿ ಲೈಫ್‌ನಲ್ಲಿ ಫಸ್ಟ್ ಟೈಮ್ ಸೀರೆ ಉಟ್ಟಿದ್ದು, ಯಾಕೋ ಒಂಥರಾ ಆಗ್ತಿದೆ ಕಣೆ, ಈ ಸೀರೇಲಿ ನಾನು ಚೆನಾಗ್ ಕಾಣ್ತಾ ಇದೀನಾ, ಈ ಕಲರ್ ನಂಗೆ ಸೂಟ್ ಆಗುತ್ತಾ, ಯಾಕೋ ಈ ನೆಕ್ಲೇಸ್ ಸೀರೆಗೆ ಮ್ಯಾಚ್ ಆಗ್ತಾ ಇಲ್ಲ, ಆ ಫ್ಯಾನ್ಸಿ ಸ್ಟೋರ್‌ ಅಲ್ಲಿ ನನ್ ಸೀರೆಗೆ ಮ್ಯಾಚಿಂಗ್ ಆಗೋ ಬಳೇನೆ ಇಲ್ಲ' ಎನ್ನುತ್ತಾ ಬಣ್ಣ ಬಣ್ಣದ ಸೀರೆಯಲ್ಲಿ ಕಾರಿಡಾರ್ ಮೇಲೆ ಓಡಾಡೋ ಲಲನೆಯರ ಮಾತಂತೂ ಕೇಳೋಕೆ ಚಂದಾಗಿತ್ತು.[ಯಾರಿಗುಂಟು ಯಾರಿಗಿಲ್ಲ, ಒಂದು ರುಪಾಯಿಗೆ ಒಂದು ಸೀರೆ ಎಂದಿದ್ದೇ ತಡ!]

Saree day in Mysuru Maharani girls college

ಇನ್ನು ವಿದ್ಯಾರ್ಥಿನಿಯರಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಾಲೇಜು ಹಲವು ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಸಹ ವಿದ್ಯಾರ್ಥಿನಿಯರಿಗೆ ಸಾಂಪ್ರದಾಯಿಕ ಸೀರೆ ಉಡುವ ಸ್ಯಾರಿ ಡೇ ಆಯೋಜಿಸಿತ್ತು. ಪ್ರಸ್ತುತ ದಿನಗಳಲ್ಲಿ ಸೀರೆ ಉಡುವುದು ಕಡಿಮೆಯಾಗಿದ್ದು, ವಿದ್ಯಾರ್ಥಿನಿಯರಿಗೆ ಸೀರೆಯ ಮಹತ್ವ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಉಪನ್ಯಾಸಕಿಯರು ಹೇಳಿದರು.[ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!]

Saree day in Mysuru Maharani girls college

ವಿದ್ಯಾರ್ಥಿನಿಯರು ಒಬ್ಬರಿಗಿಂತ ಒಬ್ಬರು ತರಹೇವಾರಿ ಸೀರೆಗಳನ್ನು ಉಟ್ಟು ಸಂಭ್ರಮಪಟ್ಟರು. ಒಟ್ಟಿನಲ್ಲಿ ಸ್ಯಾರಿ ಡೇ ಮೂಲಕ ವಿದ್ಯಾರ್ಥಿನಿಯರಿಗೆ ದೇಶಿಯತೆ ಸಾರೋ ಸೀರೆಯನ್ನುಟ್ಟು ಸಾಂಪ್ರದಾಯಿಕ ಉಡುಗೆಯನ್ನು ಉಳಿಸಬೇಕು ಅನ್ನೋದರ ಅರಿವು ಮೂಡಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+