ಮೈಸೂರು ಪೊಲೀಸರ ಜಾಗ್ರತೆಯಲ್ಲಿ ಮಕ್ಕಳಿನ್ನು ಸೇಫ್

ಮೈಸೂರು, ಮೇ 29: ಪೊಲೀಸ್ ಆಯುಕ್ತರಾದ ಎಂಎ ಸಲೀಂ ಅವರು ನಗರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗೆ ಶಾಲಾ ವಾಹನ ಸುರಕ್ಷಿತ ಪ್ರಯಾಣ (Safe route to School) ಎಂದು ಹೆಸರಿಸಿದ್ದಾರೆ. ಹಾಗಾಗಿ ಪೋಷಕರು ನಿರ್ಭೀತಿಯಿಂದ ತಮ್ಮ ಮಕ್ಕಳನ್ನು ಈ ವಾಹನಗಳಲ್ಲಿ ಶಾಲೆಗೆ ಕಳುಹಿಸಬಹುದು.

ನೂತನ ಶೈಕ್ಷಣಿಕ ವರ್ಷ ಅದಾಗಲೇ ರಾಜ್ಯದಲ್ಲಿ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ರಾಜ್ಯದ ಇತರೆಡೆಗಳಲ್ಲೂ ಶಾಲಾ ವಾಹನಗಳು ಮಕ್ಕಳ ಹೊತದೃಷ್ಟಿಯಿಂದ ಇಂತಹ ಉತ್ತಮ ಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಕೈಗೊಂಡರೆ ಒಳಿತಲ್ಲವೆ.

ಮೈಸೂರು ನಗರದಲ್ಲಿ ಶಾಲಾ ಮಕ್ಕಳ ವಾಹನಗಳ ಅಪಘಾತಗಳ ನಿಯಂತ್ರಣಕ್ಕಾಗಿ ಮೈಸೂರು ನಗರ ಸಂಚಾರಿ ಪೊಲೀಸರು ಜೂನ್ 2, 2014 ರಿಂದ ಎಲ್ಲಾ ರೀತಿಯ ಶಾಲಾ ವಾಹನಗಳ ವಿಶೇಷ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಎಲ್ಲಾ ಶಾಲಾ ವಾಹನಗಳು ಕರ್ನಾಟಕ ಸರ್ಕಾರದ ಅಧಿಸೂಚನೆ ರೀತ್ಯಾ ವಾಹನಗಳ ನಿರ್ವಹಣೆ ಮಾಡಬೇಕಾಗಿರುತ್ತದೆ: ನಿಯಮಗಳು ಏನೇನು? ವಿವರ ಇಲ್ಲಿದೆ:

Safe route to School - Mysore Police Commissioner's initiative on School cabs safety

1. ಶಾಲಾ ವಾಹನಗಳಿಗೆ ಖಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಿದ್ದು, ಸ್ಪೀಡ್ ಗವರ್ನರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಮತ್ತು ಶಾಲಾ ವಾಹನದ ವೇಗದ ಮಿತಿಯು 40 ಕಿಮಿ/ಗಂ ನಿಗಧಿಯಾಗಿರಬೇಕು.
2. ವಾಹನದ ನೊಂದಣಿ ದಿನಾಂಕದಿಂದ 15 ವರ್ಷ ಮೀರಿರುವ ವಾಹನವನ್ನು ಶಾಲಾ ವಾಹನವಾಗಿ ಬಳಸಬಾರದು.
3. ಶಾಲಾ ವಾಹನದ ಬಣ್ಣ ಹೈವೆ ಹಳದಿ ಬಣ್ಣದ್ದಾಗಿರಬೇಕು. ಶಾಲಾ ವಾಹನದ ಮಧ್ಯ ಭಾಗದಲಿ, ವಾಹನದ ಸುತ್ತ 150 ಎಂಎಂ ಅಗಲದ ಹಸಿರು ಬಣ್ಣ ಅಡ್ಡಪಟ್ಟಿ ಇರಬೇಕು. ವಾಹನದ ನಾಲ್ಕು ಕಡೆಯೂ ಬಿಳಿ ಬಣ್ಣದಲ್ಲಿ 100 ಎಂಎಂ ಎತ್ತರದ ಅಕ್ಷರದಲ್ಲಿ SCHOOL CAB ಎಂದು ಬರೆದಿರಬೇಕು.
4. ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗುವ ಶಾಲಾ ಮಕ್ಕಳ ವಯಸ್ಸು 12 ವರ್ಷಕ್ಕಿಂತ ಕಡಿಮೆ ಇರಬೇಕು. ಶಾಲಾ ವಾಹನದಲ್ಲಿ ಕರೆದೊಯ್ಯುವ ಶಾಲಾ ಮಕ್ಕಳ ಸಂಖ್ಯೆಯು ಅನುಮತಿಸಿದ ಸಂಖ್ಯೆಯ 1.5 (ಒಂದೂವರೆ) ಪಟ್ಟು ಮೀರಬಾರದು. 12 ವರ್ಷ ಮೇಲ್ಪಟ್ಟವರನ್ನು ಒಬ್ಬ ವ್ಯಕ್ತಿ ಎಂದು ಪರಿಗಣಿಸುವುದು.

5. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಆಟೋಗಳಲ್ಲಿ 6 ಮಕ್ಕಳು, ಮಾರುತಿ ವ್ಯಾನ್‌ನಲ್ಲಿ 10 ಮಕ್ಕಳು ಮತ್ತು ಸ್ಕೂಲ್ ಕ್ಯಾಬ್‌ಗಳಲ್ಲಿ 18 ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದು.
6. ಶಾಲಾ ವಾಹನದಲ್ಲಿ ಎಲ್ ಪಿಜಿ ಕಿಟ್ ಅಳವಡಿಸಿದ್ದಲ್ಲಿ, ಅದಕ್ಕೆ ನೊಂದಣಿ ಅಧಿಕಾರಿಗಳಿಂದ (ಆರ್ ಟಿ ಓ) ಪ್ರಮಾಣಪತ್ರ ಪಡೆದಿರಬೇಕು.
7. ಶಾಲಾ ವಾಹನಕ್ಕೆ ಅಳವಡಿಸಿರುವ ಎಲ್ ಪಿ ಜಿ. ಟ್ಯಾಂಕ್ ಮೇಲೆ ಯಾವುದೇ ಸೀಟಿಂಗ್ ವ್ಯವಸ್ಥೆ ಇರಬಾರದು.
8. ಶಾಲಾ ವಾಹನಗಳಿಗೆ ಸಾದಾ ಬಿಳಿ ಗ್ಲಾಸ್‌ ಗಳನ್ನು ಅಳವಡಿಸಿಬೇಕು. ಯಾವುದೇ ಟಿಂಟೆಡ್ ಗ್ಲಾಸ್ ಅಥವಾ ಬೇರೆ ಬಣ್ಣದ ಗ್ಲಾಸ್‌ ಗಳನ್ನು ಅಳವಡಿಸಲು ಅನುಮತಿ ಇರುವುದಿಲ್ಲ.
9. ವಾಹನ ತಯಾರಿಕೆ ಕಂಪನಿಯಿಂದ ನೀಡಿರುವ ಸೀಟಿಂಗ್ ಸಾಮರ್ಥ್ಯವನ್ನು ಬದಲಾವಣೆ ಮಾಡಬಾರದು.
10. ಶಾಲಾ ವಾಹನದ ಬಾಗಿಲುಗಳು ಉತ್ತಮವಾದ ಲಾಕ್‌ ಗಳಿಂದ ಕೂಡಿರಬೇಕು.

11. ಶಾಲಾ ವಾಹನ ಚಾಲನೆ ಮಾಡುವ ಚಾಲಕರು ಕನಿಷ್ಠ 4 ವರ್ಷಗಳ ಅನುಭವವುಳ್ಳ LMV-Transport vehicle ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಹಾಗೂ ಚಾಲಕನು ಪ್ರಾದೇಶಿಕ ಸಾರಿಗೆ ಇಲಾಖೆ ನೀಡುವ ವಾಹನ ಚಾಲನೆ ಬ್ಯಾಡ್ಜನ್ನು ಖಡ್ಡಾಯವಾಗಿ ಹೊಂದಿರಬೇಕು.
12. ಶಾಲಾ ವಾಹನದಲ್ಲಿ ಸುಸ್ಥಿತಿಯಲ್ಲಿರುವ First Aid Kit ಹೊಂದಿರಬೇಕು.
13. ಶಾಲಾ ವಾಹನ ಚಾಲಕರು ತೆಳು ನೀಲಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಶೂ ಧರಿಸಬೇಕು. ಮತ್ತು ಚಾಲಕನ ಶರ್ಟ್‌ನಲ್ಲಿ ಆತನ ನಾಮಫಲಕ ಇರಬೇಕು.
14. ಶಾಲಾ ವಾಹನದಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶವಿರಬೇಕು.
15. ಶಾಲಾ ವಾಹನಗಳ ಒಳ ಭಾಗದ ಮೇಲ್ಚಾವಣಿಯಲ್ಲಿ ಕ್ಯಾರಿಯರ್‌ ಗಳು ಇರಬಾರದು ಹಾಗೂ ಮಕ್ಕಳ ಬ್ಯಾಗ್‌ಗಳನ್ನು ವಾಹನದ ಹೊರಗೆ ನೇತುಹಾಕಬಾರದು.

16. ಶಾಲಾ ವಾಹನದ ಹಿಂಬದಿಯಲ್ಲಿ ಕಾಣುವಂತೆ ವಾಹನದ ಬಣ್ಣದ ವ್ಯತ್ಯಾಸ ಬಣ್ಣದಲ್ಲಿ ವಾಹನದ ಅನುಮತಿ ಹೊಂದಿರುವವರ ಹೆಸರು, ವಿಳಾಸ ಮತ್ತು ಟೆಲಿಫೋನ್ ನಂಬರ್ ಅನ್ನು ಬರೆದಿರಬೇಕು. ಅಕ್ಷರಗಳು 3 ಸೆಮೀ ಬೋಲ್ಡ್ ಅಕ್ಷರದಲ್ಲಿರಬೇಕು.
17. ಶಾಲಾ ವಾಹನವು ಬಾಡಿಗೆ ವಾಹನವಾಗಿದ್ದಲ್ಲಿ, ವಾಹನದ ಹಿಂಬದಿಯಲ್ಲಿ ಕಡ್ಡಾಯವಾಗಿ ON SCHOOL DUTY ಎಂದು ನಮೂದು ಮಾಡತಕ್ಕದ್ದು.
18. ಶಾಲಾ ವಾಹನದಲ್ಲಿ ಕರೆದೊಯ್ಯುವ ಶಾಲಾ ಮಕ್ಕಳ, ಹೆಸರು, ಕ್ಲಾಸ್, ಮನೆ ವಿಳಾಸ, ಫೋನ್ ನಂಬರ್, ರಕ್ತದ ಗುಂಪು, ಮಕ್ಕಳು ಹತ್ತುವ ಮತ್ತು ಇಳಿಯುವ ಸ್ಥಳ, ವಾಹನದ ರೂಟ್ ಪ್ಲಾನ್‌ಗಳನ್ನು ವಾಹನದಲ್ಲಿ ಅಂಟಿಸಿರಬೇಕು. ಅಲ್ಲದೇ ವಾಹನದಲ್ಲಿ ಪೊಲೀಸ್ ಕಂಟ್ರೋಲ್ ರೂಂ, ಫೈರ್, ಆಂಬುಲೆನ್ಸ್‌ಗಳ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು.
19. ತುರ್ತು ಪರಿಸ್ಥಿತಿಗಳಲ್ಲಿ ವಾಹನದ ಚಾಲಕ/ನಿರ್ವಾಹಕ ತಕ್ಷಣ ಮಾಹಿತಿಯನ್ನು ಶಾಲಾ ಮುಖ್ಯಸ್ಥರಿಗೆ ತಿಳಿಸಿ, ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು.
20 . ಶಿಶುವಿಹಾರದ (Kindergarden) ಮಕ್ಕಳನ್ನು ಶಾಲಾ ವಾಹನದಿಂದ ಇಳಿಸುವ ಸ್ಥಳದಲ್ಲಿ ಪೋಷಕರು ಬಂದಿರದಿದ್ದಲ್ಲಿ, ಅಂತಹ ಮಕ್ಕಳನ್ನು ವಾಪಸ್ ಶಾಲೆಗೆ ಕರೆದುಕೊಂಡು ಹೋಗಿ, ಪೋಷಕರಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ದೂರವಾಣಿ ಮುಖಾಂತರ ತಿಳಿಸಬೇಕು.
21. ಶಾಲಾ ವಾಹನವು ಮುಚ್ಚಿದಂತಹ ಹಾಗೂ ಕಠಿಣ ಚಾವಣಿ ಹೊಂದಿರುವಂತಹ ವಾಹನವಾಗಿರಬೇಕು.

ಶಾಲಾ ಮಕ್ಕಳ ವಾಹನಗಳ ಅಪಘಾತಗಳನ್ನು ನಿಯಂತ್ರಣ ಮಾಡಲು ಶಾಲಾ ವ್ಯವಸ್ಥಾಪಕರು, ವಾಹನ ಮಾಲೀಕರು, ವಾಹನ ಚಾಲಕರು ಮತ್ತು ವಾಹನ ಸಹಾಯಕರು ಮೇಲ್ಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸ್ ಆಯುಕ್ತರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+