ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಬಿಕೆ ಇರಬೇಕು:ಸಾರಾ ಮಹೇಶ್ ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಮಾರ್ಚ್ 17:ನಾವು ಪರಸ್ಪರ ನಂಬಿಕೆಯಿಂದಲೇ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು ಎಂದು ಸಚಿವ ಸಾರಾ ಮಹೇಶ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿಗೆ ಸಿದ್ದು ಮಾಡಿದ್ದೇನು? ಪ್ರತಾಪ್ ಸಿಂಹ ಬೆಂಬಲಿಗನ ಪ್ರಶ್ನೆಮೈಸೂರಿಗೆ ಸಿದ್ದು ಮಾಡಿದ್ದೇನು? ಪ್ರತಾಪ್ ಸಿಂಹ ಬೆಂಬಲಿಗನ ಪ್ರಶ್ನೆ

ಸಾ.ರಾ.ಮಹೇಶ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸಾ.ರಾ.ಮಹೇಶ್ ಹೇಳಿರುವುದು ಸರಿಯಿಲ್ಲ. ನನ್ನ ಪ್ರಕಾರ ಅವರ ಹೇಳಿಕೆ ತಪ್ಪು. ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತದೆ. ನಾವು ಒಟ್ಟಾಗಿ ಕೆಲಸ ಮಾಡುವುದಿಲ್ಲ, ಅಲ್ಲಿ ಹಾಗಾಗುತ್ತೆ ಹೀಗಾಗುತ್ತದೆ ಎಂದು ಊಹೆ ಮಾಡಿಕೊಳ್ಳುವುದು ತಪ್ಪು ಎಂದರು.

 ಬಹಿರಂಗ ಚರ್ಚೆಗೆ ಬಿಜೆಪಿ ಸದಾ ಸಿದ್ಧ : ಶಾಸಕ ರಾಮ್ ದಾಸ್ ಬಹಿರಂಗ ಚರ್ಚೆಗೆ ಬಿಜೆಪಿ ಸದಾ ಸಿದ್ಧ : ಶಾಸಕ ರಾಮ್ ದಾಸ್

ನಂಬಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಎಲ್ಲಿಯಾದರೂ ಮಾತನಾಡಿದ್ದಾರಾ? ಅವರು ಮಾತನಾಡಿದ್ರೆ ಹೇಳಿ! ಬೇರೆಯವರ ಮಾತಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾವಿನ್ನು ಪ್ರಚಾರವನ್ನು ಶುರು ಮಾಡಿಲ್ಲ. ಕೂಸು ಹುಟ್ಟೋಕು ಮುಂಚೆ ಕುಲಾವಿ ಬಗ್ಗೆ ಯಾಕೆ ಮಾತು ಎಂದು ಪ್ರಶ್ನಿಸಿದರು.

SA RA Maheshs statement is not right:Siddaramaiah

ಸಭೆ ನಡೆಸಿ, ಪ್ರಚಾರದ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದ ಸಿದ್ದರಾಮಯ್ಯ, ನಾನು ದೇವೇಗೌಡರ ಮಾತನ್ನು ನಂಬುತ್ತೇನೆ. ಬೇರೆ ಯಾರೋ ನಾಯಕರು ಹೇಳಿದ್ದನ್ನ ನಂಬಲ್ಲ. ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಎಂದು ಸ್ಪಷ್ಟಪಡಿಸಿದರು.

 ಕಳ್ಳನೇ ಪೊಲೀಸ್ ಆಗಿರುವುದು ದುರಂತ: ಸಿದ್ದರಾಮಯ್ಯ ಲೇವಡಿ ಕಳ್ಳನೇ ಪೊಲೀಸ್ ಆಗಿರುವುದು ದುರಂತ: ಸಿದ್ದರಾಮಯ್ಯ ಲೇವಡಿ

ಬಿಜೆಪಿಯವರಿಗೆ ಮೋದಿ ಬಿಟ್ಟು ಬೇರೆ ಏನಿಲ್ಲ. ಇಲ್ಲಿಯವರಿಗೆ ಮೋದಿ ಮುಖವೇ ಬಂಡವಾಳ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಇವರಿಗೆಲ್ಲ ಯಾವ ವರ್ಚಸ್ಸು ಇದೆ. 10 ಕೋಟಿ ಉದ್ಯೋಗದ ಭರವಸೆ ನೀಡಿ ನಾಮ ಹಾಕಿದ್ದಾರೆ. ಮೋದಿಗೂ ಯಾವುದೇ ವರ್ಚಸ್ಸು ಇರಲಿಲ್ಲ. ಸರ್ಜಿಕಲ್ ಸ್ಕ್ರೈಕ್ ಮಾಡಿರುವುದನ್ನು ಹೇಳಿಕೊಂಡು ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿಯೂ 10-12 ಸರ್ಜಿಕಲ್ ಸ್ಕ್ರೈಕ್ ಆಗಿದೆ. ನಾವು ಅದನ್ನು ಹೇಳಿಕೊಂಡಿಲ್ಲ ಎಂದು ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

English summary
Former Chief Minister Siddaramaiah said SA RA Mahesh's statement is not right. Everything should have faith. Beliefs are damaged by these statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X