• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಜಿ.ಪಂ.ನಿಂದ 435 ಕೋಟಿ ರೂ. ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಒತ್ತು

|

ಮೈಸೂರು, ಮಾರ್ಚ್ 9:2019-20ನೇ ಸಾಲಿಗೆ ಮೈಸೂರು ಜಿಲ್ಲಾ ಪಂಚಾಯ್ತಿಯು 435.91 ಕೋಟಿ ರೂ.ಗಳ ಆಯ-ವ್ಯಯ ಮಂಡಿಸಿದ್ದು, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಅವರು, ಜಿ.ಪಂ.ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ವಿವಿಧ ಕಾರ್ಯಕ್ರಮಗಳಿಗೆ 2019-20ರ ಸಾಲಿಗೆ ಒಟ್ಟು 1,302 ಕೋಟಿ ನಿಗದಿಪಡಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 193 ಕೋಟಿಯಷ್ಟು ಹೆಚ್ಚು ಅನುದಾನ ದೊರೆತಿದೆ.

ಕೈ - ತೆನೆ ಮೈತ್ರಿ ಪಾಲಾದ ಮೈಸೂರು ಜಿ.ಪಂ ಅಧ್ಯಕ್ಷ- ಉಪಾಧ್ಯಕ್ಷರ ಗಾದಿ

ಜಿಲ್ಲಾ ಪಂಚಾಯಿತಿಯ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನ ಕಳೆದ ಬಾರಿಗಿಂತ ಶೇ 12.42 ರಷ್ಟು ಅಂದರೆ 48.16 ಕೋಟಿ ಹೆಚ್ಚಳವಾಗಿದೆ ಎಂದು ಪರಿಮಳಾ ಶ್ಯಾಂ ತಿಳಿಸಿದರು.

ಕಳೆದ ಬಾರಿಯಂತೆ ಈ ಬಾರಿಯೂ ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 158.42 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷ 148.73 ಕೋಟಿ ಮೀಸಲಿಡಲಾಗಿತ್ತು.

ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗೆ 80.47 ಕೋಟಿ ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ 2.26 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

 ಆರೋಗ್ಯ ಇಲಾಖೆಗೆ ಹೆಚ್ಚು ಅನುದಾನ

ಆರೋಗ್ಯ ಇಲಾಖೆಗೆ ಹೆಚ್ಚು ಅನುದಾನ

ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗಿದ್ದು, ಆರೋಗ್ಯ ಕೇಂದ್ರಗಳ ದುರಸ್ತಿ ಕಾಮಗಾರಿಗಳಿಗೆ 1.35 ಕೋಟಿ ಮೊತ್ತ ಮೀಸಲಿಡಲಾಗಿದೆ. ಇಲಾಖೆಯ ವೇತನ ವೆಚ್ಚಕ್ಕಾಗಿ 64.43 ಕೋಟಿ ಹಾಗೂ ವೇತನೇತರ ವೆಚ್ಚಗಳಿಗೆ ₹ 22.36 ಕೋಟಿ ನಿಗದಿಪಡಿಸಲಾಗಿದೆ.

 ವಿವಿಧ ಇಲಾಖೆಗಳಿಗೂ ಹೆಚ್ಚಿನ ಅನುದಾನ

ವಿವಿಧ ಇಲಾಖೆಗಳಿಗೂ ಹೆಚ್ಚಿನ ಅನುದಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಗೂ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ. ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳಿಗೆ ಒಟ್ಟು 9.75 ಕೋಟಿ ಮೀಸಲಿರಿಸಲಾಗಿದೆ.

ಮೈಸೂರು ಜಿಪಂ ಉಪಾಧ್ಯಕ್ಷರ ಆಯ್ಕೆ: ಅಸಮಾಧಾನ ಶಮನಕ್ಕೆ ಹರಸಾಹಸ

 ತೋಟಗಾರಿಕೆ ಇಲಾಖೆಗೆ 8.09 ಕೋಟಿ ರೂ.ಅನುದಾನ

ತೋಟಗಾರಿಕೆ ಇಲಾಖೆಗೆ 8.09 ಕೋಟಿ ರೂ.ಅನುದಾನ

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 5.50 ಕೋಟಿ, ಆಯುಷ್ ಇಲಾಖೆಗೆ 5.75 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 1.25 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 3.53 ಕೋಟಿ, ಪಶುಸಂಗೋಪನೆ ಇಲಾಖೆಗೆ 7.19 ಕೋಟಿ, ಮೀನುಗಾರಿಕಾ ಇಲಾಖೆಗೆ 7.17 ಕೋಟಿ, ಕೃಷಿ ಇಲಾಖೆಗೆ 4.72 ಕೋಟಿ, ತೋಟಗಾರಿಕೆ ಇಲಾಖೆಗೆ ₹ 8.09 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

 ಜಿಲ್ಲಾ ಪಂಚಾಯಿತಿ ಸದಸ್ಯರ ನಿರಾಸಕ್ತಿ

ಜಿಲ್ಲಾ ಪಂಚಾಯಿತಿ ಸದಸ್ಯರ ನಿರಾಸಕ್ತಿ

ಹಾಗೆಯೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 2.29 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಕ್ರಿಯಾ ಯೋಜನೆ ಮಂಡನೆ ಬಳಿಕ ಚರ್ಚೆ ನಡೆಯಿತು. ಬಜೆಟ್ ಮಂಡನೆಯಂತಹ ಮಹತ್ವದ ಸಭೆಗೂ ಹಾಜರಾಗದೆ ಜಿಲ್ಲಾ ಪಂಚಾಯ್ತಿ ಸದಸ್ಯರು ನಿರಾಸಕ್ತಿ ತೋರಿದರು. ಅದೇ ರೀತಿ ಅಧಿಕಾರಿಗಳೂ ಕೈ ಬೆರಳೆಣಿಕೆಯಷ್ಟು ಮಾತ್ರ ಹಾಜರಾಗಿದ್ದು ಕಂಡುಬಂದಿತು.

ಮೈಸೂರು ಜಿಪಂ ಚುನಾವಣೆ: ಕಾಂಗ್ರೆಸ್, ಜೆಡಿಎಸ್ ಮೈತ್ರಿ, ಬಿಜೆಪಿ ನಾಮಪತ್ರ

English summary
Rs 435.91 crore Budget presented by ZP president Parimala shaym at Mysuru Zilla Panchayat.It will mainly be emphasized on education and health sectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X