• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಜಪೇಯಿ ವಿಶ್ವಾಸ ಮತ ಯಾಚನೆಗೆ 10 ದಿನ ತೆಗೆದುಕೊಂಡಿದ್ದರು ಎಂದ ರೇವಣ್ಣ

|
   Karnataka Crisis : ಎಚ್ ಡಿ ರೇವಣ್ಣ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಮಾತಾಡಿದ್ದೇನು? | Oneindia Kannada

   ಮೈಸೂರು, ಜುಲೈ 19: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಾಜಪೇಯಿಯವರು ವಿಶ್ವಾಸ ಮತಯಾಚನೆಗೆ 10 ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದರು ಎಂದು ಸಚಿವ ಎಚ್‌ಡಿ ರೇವಣ್ಣ ತಿಳಿಸಿದ್ದಾರೆ.

   ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತ ಯಾಚನೆಗೆ ಕುಮಾರಸ್ವಾಮಿ ದಿನದೂಡುತ್ತಿದ್ದಾರೆ ಎಂದು ಆರೋಪ ಮಾಡ್ತಾರಲ್ಲ ಆದರೆ ಇದೇ ಬಿಜೆಪಿ ಸರ್ಕಾರದಲ್ಲಿ ವಾಜಪೇಯಿಯವರು ವಿಶ್ವಾಸ ಮತ ಯಾಚನೆಗೆ ಹತ್ತು ದಿನ ತೆಗೆದುಕೊಂಡಿತ್ತು ಎಂದು ಹೇಳಿದರು.

   ವಿಶ್ವಾಸ-ಅವಿಶ್ವಾಸ ಮತ: ಇತಿಹಾಸದಲ್ಲಿ ಎಷ್ಟು ದಿನ ಚರ್ಚೆ ನಡೆದಿತ್ತು?

   ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.

   ಇದೇ ಬಿಜೆಪಿಯ ಈ ಹಿಂದಿನ ಪ್ರಧಾನಿ ವಾಜಪೇಯಿ ಅವರು ವಿಶ್ವಾಸ ಮತ ತೋರಿಸಲು ಹತ್ತು ದಿನ ಸಮಯ ತೆಗೆದು ಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

   ನಾನು ಯಾರ ಇಲಾಖೆಯಲ್ಲೂ ಮೂಗು ತೂರಿಸಿಲ್ಲ, ಶಾಸಕರ ಆರೋಪ ಸುಳ್ಳು: ರೇವಣ್ಣ ಸ್ಪಷ್ಟನೆ

   ಸದನದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

   ವಿಶ್ವಾಸ ಮತಕ್ಕಾಗಿಯೇ ಮುಖ್ಯಮಂತ್ರಿ ಅವರು ಜುಲೈ 12ರಂದು ಸಮಯ ಕೇಳಿದ್ದರು. ಅಲ್ಲದೆ 12ರಂದು ಮೀಟಿಂಗ್ ಕೂಡ ಕರೆದಿದ್ದು, ಬಿಜೆಪಿಯವರು ಬಂದಿಲ್ಲ. ಜುಲೈ 18ರಂದು ಮತ್ತೆ ವಿಶ್ವಾಸಮತಕ್ಕೆ ಬಂದಿದ್ದೆವು. ಆಗ ಸುಪ್ರೀಂಕೋರ್ಟ್ ಕೆಲವು ನಿರ್ದೇಶನ ನೀಡಿತ್ತು ಎಂದರು.

   ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

   ಮೈತ್ರಿ ಸರ್ಕಾರವು ಗುರುವಾರ ವಿಶ್ವಾಸಮತ ಯಾಚನೆಯನ್ನು ವ್ಯವಸ್ಥಿತವಾಗಿ ಮುಂದೂಡಿತ್ತು. ಆದರೆ ಇಂದು 1.30 ಒಳಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದಾರೆ.

   ಈಗ ವಾಜಪೇಯಿ ಅವರು ವಿಶ್ವಾಸಮತ ಯಾಚನೆಗೆ 10 ದಿನ ತೆಗೆದುಕೊಂಡಿದ್ದರು. ನಾವು ಕೂಡ ಅಷ್ಟು ದಿನ ಕಾಲಾವಕಾಶ ತೆಗೆದುಕೊಳ್ಳಬಹುದು ಎನ್ನುವಂತೆ ಎಚ್‌ಡಿ ರೇವಣ್ಣ ಮಾತನಾಡಿದ್ದಾರೆ.

   ಕಲಾಪ ಆರಂಭಿಸಿದ್ದಾಗ ಕಾರ್ಯಲೋಪವನ್ನು ಎತ್ತಿದ ಸಿದ್ದರಾಮಯ್ಯ ಅವರು ಸುಪ್ರೀಂತೀರ್ಪಿನಿಂದಾಗಿ ಪಕ್ಷದ ಹಾಗೂ ಶಾಸಕಾಂಗ ಪಕ್ಷದ ನಾಯಕನಿಗೆ ಇದ್ದ ಹಕ್ಕುಗಳ ಉಲ್ಲಂಘನೆ ಆಗಿದೆ, ಈ ಪ್ರಕರಣ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಬೇಡವೆಂದು ಮನವಿ ಮಾಡಿದ್ದರು.

   ಇಂದು 11 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಇಂದು ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಯಾಚನೆ ಮುಗಿಸುವುದಾಗಿ ಹೇಳಿರುವ ಕಾರಣ ಇಂದಾದರೂ ವಿಶ್ವಾಸಮತ ಯಾಚನೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

   English summary
   Minister HD Revanna countered BJP that Vajpayee took 10 days for confidence motion.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X