ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ‌ಎಸ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪನೆಗೆ ಮನವಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 31: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕ ಪ್ರತಿಮೆ ಸ್ಥಾಪನೆಗಾಗಿ ಮೈಸೂರು ಮತ್ತು ಮಂಡ್ಯ ಹೋರಾಟ ಸಮಿತಿ ವತಿಯಿಂದ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಯಿತು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇತಿಹಾಸ ತಜ್ಞ ಪ್ರೊ.ಪಿ.ವಿ ನಂಜರಾಜ ಅರಸು ಅವರು ಭೇಟಿ ಮಾಡಿ ಕೃಷ್ಣರಾಜ ಸಾಗರ (ಕೆಆರ್ಎಸ್) ದಲ್ಲಿ ನಾಲ್ವಡಿ ಅವರ ಏಕಪ್ರತಿಮೆ ಸ್ಥಾಪಿಸಲು ಸಿಎಂ ಅವರಿಗೆ ಮನವಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

Request For Installation Of Nalwadi Krishnaraja Wadiyar Statue In KRS

ಕೆಆರ್ ‌ಎಸ್ ನಲ್ಲಿ ನಾಲ್ವಡಿಗೆ ಸರಿಸಮನಾದ ಎಂವಿ ಪ್ರತಿಮೆ ಏಕೆ ಬೇಡ?ಕೆಆರ್ ‌ಎಸ್ ನಲ್ಲಿ ನಾಲ್ವಡಿಗೆ ಸರಿಸಮನಾದ ಎಂವಿ ಪ್ರತಿಮೆ ಏಕೆ ಬೇಡ?

ಸಿಎಂ ಭೇಟಿ ನಿಯೋಗದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎನ್.ಮಹೇಶ್, ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ (ಮಂಡ್ಯ) , ಮಾಜಿ ಮೇಯರ್ ಪುರುಷೋತ್ತಮ್, ಏಕಪ್ರತಿಮೆ ಹೋರಾಟದ ಸಂಚಾಲಕರಾದ ಅರವಿಂದ್ ಶರ್ಮ, ಕನ್ನಡ ಹೋರಾಟಗಾರರಾದ ಧನಪಾಲ್ ಕುರುಬರಹಳ್ಳಿ, ಬೋವಿ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಜಿ.ವಿ ಸೀತಾರಾಮ್, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹೊಸಕೋಟೆ ಬಸವರಾಜು, ವಿಜಯ ದೇವರಾಜೇ ಅರಸ್ ಬಿವಿಎಸ್ ನ ಸಿದ್ದರಾಜು ಸೋಸಲೆ, ಎಂ.ಬಿ ಶ್ರೀನಿವಾಸ್ ಮಂಡ್ಯ ಇತರರು ಉಪಸ್ಥಿತರಿದ್ದರು.

English summary
Chief Minister BS Yediyurappa was today requested by the Mysuru and Mandya Horata Samithi to set up a statue of Nalwadi Krishnaraja Wadiyar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X